ಡಿ.1 ರಿಂದ ಒಟಿಪಿ ಬರುತ್ತಾ? ಬರಲ್ವಾ?; ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಟ್ರಾಯ್‌

Train Paswrd
Spread the love

ನ್ಯೂಸ್ ಆ್ಯರೋ: ಡಿ.1 ರಿಂದ ಒಟಿಪಿಗಳು ಬರುತ್ತಾ? ಬರಲ್ವಾ ಎಂಬ ಗೊಂದಲಗಳಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ತೆರೆ ಎಳೆದಿದೆ.

ಮೊಬೈಲ್ ಫೋನ್‌ಗಳಿಗೆ ಬರುವ ಒಟಿಪಿಗಳ ಮೂಲವನ್ನು ಪತ್ತೆ ಮಾಡುವ ಸಂಬಂಧ ಟ್ರಾಯ್ ರೂಪಿಸಿದ ಹೊಸ ನಿಯಮಾವಳಿಗೆ ಟೆಲಿಕಾಂ ಕಂಪನಿಗಳು ಇದೇ ನವೆಂಬರ್ 30ರೊಳಗೆ ಒಪ್ಪಿಗೆ ಸೂಚಿಸದೇ ಇದ್ದರೆ ಡಿ.1 ರಿಂದ ಮೊಬೈಲ್‌ಗಳಿಗೆ ಒಟಿಪಿ ಬರುವುದಿಲ್ಲ ಎಂದು ವರದಿಯಾಗಿತ್ತು.

ಮಾಧ್ಯಮಗಳಲ್ಲಿ ಈ ವರದಿ ಪ್ರಕಟವಾಗುತ್ತಿದ್ದಂತೆ ಬಳಕೆದಾರರಿಗೆ ಆತಂಕ ಎದುರಾಗಿತ್ತು. ಈಗ ಟ್ರಾಯ್‌ ಈ ಎಲ್ಲ ಆತಂಕಗಳಿಗೆ ಸ್ಪಷ್ಟನೆ ನೀಡಿದೆ. ಮಾಧ್ಯಮಗಳ ವರದಿ ತಪ್ಪಾಗಿದೆ. ಒಟಿಪಿಗಳ ಮೂಲ ಬಹಿರಂಗಪಡಿಸುವುದನ್ನು ಟ್ರಾಯ್‌ ಕಡ್ಡಾಯಗೊಳಿಸಿದೆ. ಇದರಿಂದ ಯಾವುದೇ ಸಂದೇಶಗಳು ವಿಳಂಬವಾಗುವುದಿಲ್ಲ ಎಂದು ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದೆ.

ಆನ್‌ಲೈನ್‌ ಹಣಕಾಸು ವ್ಯವಹಾರಗಳಿಗೆ ಇಂದು ಒಟಿಪಿ (OTP) ತೀರಾ ಅಗತ್ಯವಿದೆ. ಒಂದು ವೇಳೆ ಟ್ರಾಯ್ ಗಡುವು ವಿಸ್ತರಿಸದಿದ್ದರೆ ಈ ಸೇವೆಗಳಲ್ಲಿ ಭಾರಿ ಸಮಸ್ಯೆ ಆಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದವು.

ಇಂದು ಒಟಿಪಿಗಳ ಹೆಸರಿನಲ್ಲಿ ವಂಚನೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಒಟಿಪಿಗಳ ಮೂಲ ಬಹಿರಂಗಗೊಳಿಸುವ (ಟ್ರ್ಯಾಕಿಂಗ್) ನಿಟ್ಟಿನಲ್ಲಿ ಟ್ರಾಯ್ ಹೊಸ ನಿಯಮಾವಳಿ ರೂಪಿಸಿತ್ತು. ಈ ನಿಯಮಕ್ಕೆ ಜಿಯೋ, ವೊಡಾಫೋನ್, ಏರ್‌ಟೇಲ್, ಬಿಎಸ್‌ಎನ್‌ಎಲ್‌ನಂತಹ ಟೆಲಿಕಾಂ ಕಂಪನಿಗಳು ಇನ್ನೂ ಒಪ್ಪಿಗೆ ನೀಡಿರಲಿಲ್ಲ.

ಈ ಹಿಂದೆ ಅಕ್ಟೋಬರ್ 31ರ ಗಡುವು ನೀಡಲಾಗಿತ್ತು. ಆದರೆ ಟೆಲಿಕಾಂ ಕಂಪನಿಗಳ ಮನವಿ ಮೇರೆಗೆ ನ.30ರವರೆಗೆ ಗಡುವು ವಿಸ್ತರಿಸಲಾಗಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!