ನಿಮೀಯ ಶೈಲಿಯಲ್ಲಿ ಪವನ್ ಕಲ್ಯಾಣ್ ದಾಳಿ; ಅಕ್ರಮವಾಗಿ ವಿದೇಶಕ್ಕೆ ಹೋಗುತ್ತಿದ್ದ ಅಕ್ಕಿ ವಶಪಡಿಸಿದ ಸೂಪರ್‌ಸ್ಟಾರ್
ನ್ಯೂಸ್ ಆ್ಯರೋ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಅಕ್ರಮವಾಗಿ ಟನ್‌ಗಟ್ಟಲೆ ಅಕ್ಕಿ ಸಾಗಿಸುತ್ತಿದ್ದ ಹಡಗಿನ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ.
ಕಾಕಿನಾಡ ಬಂದರಿನಲ್ಲಿ ಅಕ್ರಮ ಅಕ್ಕಿ ಸಾಗಣೆ ಕುರಿತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಪರಿಶೀಲನೆ ನಡೆಸಿದ್ದು, ಅವರ ಭೇಟಿಯ ಸಮಯದಲ್ಲಿ, ಪಶ್ಚಿಮ ಆಫ್ರಿಕಾದ ದೇಶಗಳಿಗೆ ಅಕ್ರಮವಾಗಿ ರಫ್ತು ಮಾಡಲು ಬಾರ್ಜ್‌ಗೆ ಲೋಡ್ ಮಾಡಲಾದ 1,064 ಟನ್ ಅಕ್ಕಿ ಚೀಲಗಳನ್ನು ಪರಿಶೀಲಿಸಿದರು. ಸಿನಿಮೀಯ ಶೈಲಿಯಲ್ಲಿ ಪವನ್ ಕಲ್ಯಾಣ್ ಕಾಕಿನಾಡ ಬಂದರ್‌ಗೆ ಧಿಡೀರ್ ಭೇಟಿ ನೀಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಅವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಬಂದರಿನಿಂದ ನಡೆಯುತ್ತಿರುವ ಅಕ್ರಮ ಅಕ್ಕಿ ಸಾಗಣೆ ಸಮಸ್ಯೆಯ ಕುರಿತು ಆಂಧ್ರ ಪ್ರದೇಶದ ನಾಗರಿಕ ಸರಬರಾಜು ರಾಜ್ಯ ಸಚಿವ ನಾದೆಂದ್ಲ ಮನೋಹರ್ ವಿವರ ನೀಡಿದ್ದಾರೆ. ಈ ಸಂಬಂಧ ಪವನ್ ಕಲ್ಯಾಣ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ‘ನಾನು ಕಾಕಿನಾಡ ಬಂದರಿಗೆ ಪಿಡಿಎಸ್ ಅಕ್ಕಿಯ ಅಕ್ರಮ ಸಾಗಣೆಯನ್ನು ಪರಿಶೀಲಿಸಲು ಬಂದಿದ್ದೇನೆ. ಕಳೆದ ಆಡಳಿತದಲ್ಲಿ ಹಗರಣಗಳು ವ್ಯಾಪಕವಾಗಿತ್ತು. ಅದು ಈಗಲೂ ಮುಂದುವರೆದಿದೆ. ಈ ಬಂದರು ಎಲ್ಲರಿಗೂ ಉಚಿತವಾಗಿದೆ. ಯಾವುದೇ ಹೊಣೆಗಾರಿಕೆ ಇಲ್ಲ’ ಎಂದು ಕಲ್ಯಾಣ್ ಬರೆದುಕೊಂಡಿದ್ದಾರೆ.
ಅಲ್ಲದೇ, ‘ಆಂಕಾರೇಜ್ ಬಂದರಿನಿಂದ ಸಾಗಾಟವಾಗುವ ವಸ್ತುಗಳನ್ನು ಯಾವುದೇ ಮೇಲ್ವಿಚಾರಣೆ ನಡೆಸುತ್ತಿಲ್ಲ. ಜಿಲ್ಲಾಡಳಿತ ಮತ್ತು ಕಾಕಿನಾಡ ಬಂದರು ಪ್ರಾಧಿಕಾರವು ಇದನ್ನು ಹೇಗೆ ಅನುಮತಿಸುತ್ತಿದೆ? ಇದರ ವಿರುದ್ಧ ಸಂಪೂರ್ಣ ತನಿಖೆಯ ಅಗತ್ಯವಿದೆ’ ಎಂದು ಪವನ್ ಕಲ್ಯಾಣ್ ಅವರು ಬರೆದಿದ್ದಾರೆ.
Leave a Comment