ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​ಗಿಂದು ಮುಖ್ಯ ದಿನ; ದಾಸನ ಬೆನ್ನು ನೋವಿಗೆ ಸಿಗುತ್ತಾ ಮಧ್ಯಂತರ ರಿಲೀಫ್​?

dashan case
Spread the love

ನ್ಯೂಸ್ ಆ್ಯರೋ: ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿ ನಾಲ್ಕೂವರೆ ತಿಂಗಳುಗಳೇ ಕಳೆದಿವೆ. ಅವರು ಜೂನ್ 11ರಂದು ಬಂಧನಕ್ಕೆ ಒಳಗಾದರು. ಅವರ ವಿರುದ್ಧವೇ ಎಲ್ಲಾ ಸಾಕ್ಷ್ಯಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಯಿತು. ಚಾರ್ಜ್​ಶೀಟ್ ಸಲ್ಲಿಕೆ ಆದ ಬಳಿಕವೇ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಕೆಳಹಂತದ ಕೋರ್ಟ್​ನಲ್ಲಿ ಜಾಮೀನು ವಜಾ ಆಗಿತ್ತು. ಈಗ ಹೈಕೋರ್ಟ್​ನಲ್ಲಿ ಅವರು ಜಾಮೀನು ಸಿಗುವ ನಿರೀಕ್ಷೆಯಲ್ಲಿ ಇದ್ದಾರೆ.

ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರೆ, ಪೊಲೀಸರ ಪರ ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ವಾದ ಮಾಡಿದರು. ಸಿವಿ ನಾಗೇಶ್ ಅವರು ದರ್ಶನ್​ಗೆ ಇರುವ ಬೆನ್ನು ನೋವು ಹಾಗೂ ಅದರ ತೀವ್ರತೆಯನ್ನು ಕೋರ್ಟ್​ಗೆ ಮನವರಿಕೆ ಮಾಡಿದರು. ‘ಬೆನ್ನು ನೋವಿಗೆ ಸಾಮಾನ್ಯ ಚಿಕಿತ್ಸೆ ಸಾಕಾಗುವುದಿಲ್ಲ ಮತ್ತು ಅವರು ಶಸ್ತ್ರಚಿಕಿತ್ಸೆಯನ್ನೇ ಮಾಡಿಸಿಕೊಳ್ಳಬೇಕು. ಹೀಗಾಗಿ ಜಾಮೀನು ನೀಡಲೇಬೇಕು’ ಎಂದು ಸಿವಿ ನಾಗೇಶ್ ಕೋರ್ಟ್ ಬಳಿ ಕೋರಿದರು.

ಅತ್ತ ಪ್ರಸನ್ನ ಕುಮಾರ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ‘ಈಗಿನ ವರದಿಯಲ್ಲಿ ದರ್ಶನ್ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದಾಗಿಯೇ ಇದೆ. ಮುಂದೊಂದು ದಿನ ಸಮಸ್ಯೆ ಬರಹುದು ಎಂದಿದೆ. ಅಲ್ಲದೆ, ದರ್ಶನ್​ಗೆ ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತದೆ ಎಂಬ ಬಗ್ಗೆ ಉಲ್ಲೇಖ ಇಲ್ಲ’ ಎಂದು ವಾದ ಮಾಡಿದರು. ಇದನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದರು. ‘ಆರೋಗ್ಯ ಪ್ರತಿಯೊಬ್ಬ ಖೈದಿಯ ಹಕ್ಕು’ ಎಂದಿದ್ದಾರೆ.

ಒಟ್ಟಾರೆ. ದರ್ಶನ್​ ಬೇಲ್​ ಭವಿಷ್ಯದ ಬಗ್ಗೆ ಕುತೂಹಲ ಮೂಡಿದ್ದು, ಇಂದು ನ್ಯಾ. ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ಆದೇಶ ಹೊರ ಬಿಳಲಿದೆ. ದರ್ಶನ್ ಗೆ ಮಧ್ಯಂತರ ಜಾಮೀನು ಸಿಗಬಹುದಾ? ಅಥವಾ ಮೆಡಿಕಲ್ ಬೋರ್ಡ್​ನಿಂದ ಒಪಿನಿಯನ್ ರಿಪೋರ್ಟ್​ಗೂ ಆದೇಶ ಕೊಡಬಹುದಾ ಎಂಬ ಚರ್ಚೆಗಳು ನಡೆಯುತ್ತಿವೆ.

Leave a Comment

Leave a Reply

Your email address will not be published. Required fields are marked *

error: Content is protected !!