ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ; ದಾಸನಿಗೆ ಸಿಗುತ್ತಾ ಬೇಲ್?
ನ್ಯೂಸ್ ಆ್ಯರೋ: ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲು ಸೇರಿರುವ ದರ್ಶನ್ ಅಲ್ಲಿ ಸಾಕಷ್ಟು ಜರ್ಜರಿತರಾಗಿದ್ದಾರೆ. ಕಠಿಣ ನಿಯಮಗಳಿಂದ ಕಂಗಾಲಾಗಿದ್ದಾರೆ. ಸದ್ಯ ಅವರಿಗೆ ಕೊಂಚ ರಿಲೀಫ್ ನೀಡಿದ್ದು ಅಂದ್ರೆ ನಿನ್ನೆಯ ಪ್ರಬಲ ವಾದ. ಇಂದು ಕೂಡ ದಾಸನ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಮಹತ್ವ ಪಡೆದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿನಲ್ಲಿ ದರ್ಶನ್ ಈಗಾಗಲೇ ಶತದಿನೋತ್ಸವ ಆಚರಿಸಿದ್ದಾರೆ. ಜೈಲುವಾಸ ಸಹಿಸಲಾಗದೆ ಒದ್ದಾಡುತ್ತಿದ್ದ ದಾಸ ಕೊನೆಗೂ ಕೊಂಚ ಸಮಾಧಾನಪಡುವಂತಾಗಿದೆ.
3 ಬಾರಿ ಮೂಂದೂಡಿಕೆಯಾಗಿದ್ದ ಜಾಮೀನು ಅರ್ಜಿ ವಿಚಾರಣೆ ನಿನ್ನೆ ನಡೆದಿದೆ. ಹಿರಿಯ ವಕೀಲ ಸಿ.ವಿ. ನಾಗೇಶ್ ದರ್ಶನ್ ಪರ ಪ್ರಬಲ ವಾದ ಮಂಡಿಸಿದ್ದು ಪೊಲೀಸರು ಸರಿಯಾಗಿ ತನಿಖೆ ಮಾಡಿಲ್ಲ ಎಂದು ವಾದಿಸಿದ್ದಾರೆ. ಕಳೆದ ದಿನ ದರ್ಶನ್ ಪರ ವಕೀಲ ನಾಗೇಶ್ ಸುದೀರ್ಘ ವಾದ ಆಲಿಸಿದ ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.
ಇಂದು ಮಧ್ಯಾಹ್ನ 12:30ಕ್ಕೆ ಮತ್ತೆ ವಿಚಾರಣೆ ನಡೆಯಲಿದ್ದು ದಾಸನ ಜಾಮೀನಿನ ಭವಿಷ್ಯ ನಿರ್ಧಾರವಾಗಲಿದೆ.
Leave a Comment