ದರ್ಶನ್​ಗೆ ಮಧ್ಯಂತರ ಜಾಮೀನು; ಪತ್ನಿ ವಿಜಯಲಕ್ಷ್ಮೀ ಮೊದಲ ರಿಯಾಕ್ಷನ್ ಏನು?

Vijayalakshmi
Spread the love

ನ್ಯೂಸ್ ಆ್ಯರೋ: ವೈದ್ಯಕೀಯ ವರದಿ ಆಧರಿಸಿ ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇಷ್ಟು ದಿನಗಳ ಕಾಲ ದರ್ಶನ್​ ಪರವಾಗಿ ನಿಂತಿದ್ದು ಅವರ ಪತ್ನಿ ವಿಜಯಲಕ್ಷ್ಮೀ. ನಿರಂತರವಾಗಿ ಅವರು ದರ್ಶನ್ ಪರ ಹೋರಾಡತ್ತಲೇ ಇದ್ದರು. ಅನೇಕ ದೇವಾಲಯಗಳಿಗೆ ಅವರು ಭೇಟಿ ಕೊಟ್ಟಿದ್ದರು. ಈಗ ದರ್ಶನ್​​ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಇದಕ್ಕೆ ವಿಜಯಲಕ್ಷ್ಮೀ ಅವರು ರಿಯಾಕ್ಟ್ ಮಾಡಿದ್ದಾರೆ.

ದರ್ಶನ್ ಬಂಧನ ಆಗುತ್ತಿರುವ ವಿಚಾರ ಕೇಳುತ್ತಿದ್ದಂತೆ ವಿಜಯಲಕ್ಷ್ಮೀ ಶಾಕ್​ಗೆ ಒಳಗಾದರು. ಆ ಬಳಿಕ ಅವರು ಇನ್​ಸ್ಟಾಗ್ರಾಮ್​​ನ ಡಿ-ಆ್ಯಕ್ಟಿವೇಟ್ ಕೂಡ ಮಾಡಿದ್ದರು. ‘ನನ್ನ ಮಗ ನಾನು ಅಷ್ಟೇ ಸಾಕು’ ಎಂದು ಅವರು ಹೇಳಿದ್ದಾಗಿ ವರದಿ ಆಗಿತ್ತು. ಆ ಬಳಿಕ ಅವರು ಇನ್​ಸ್ಟಾಗ್ರಾಮ್​ಗೆ ಮರಳಿದ್ದರು. ಅಲ್ಲಿಂದಲೇ ದರ್ಶನ್ ಅಭಿಮಾನಿಗಳ ಬಳಿ ಅವರು ಹಲವು ರೀತಿಯ ಮನವಿಗಳನ್ನು ಮಾಡಿಕೊಳ್ಳುತ್ತಾ ಬರುತ್ತಿದ್ದರು.

ದರ್ಶನ್​ಗೆ ಆರು ವಾರಗಳ ಷರತ್ತುಬದ್ಧ ಜಾಮೀನು ಸಿಗುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮೀ ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಕಾಮಕ್ಯ ದೇವಸ್ಥಾನದ ಫೋಟೋ ಹಾಕಿ ಕೃತಜ್ಞತೆ ಸಲ್ಲಿಸಿದ್ದಾರೆ. ದೇವಿ ಆಶೀರ್ವಾದಿಂದ ಬೇಲ್ ಸಿಕ್ಕಿದೆ ಎಂದು ವಿಜಯಲಕ್ಷ್ಮೀ ದೇವರಿಗೆ ಧನ್ಯವಾದ ತಿಳಿಸಿದ್ದಾರೆ.

ಸದ್ಯ ಇಂದು ನಟ ದರ್ಶನ್ ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈಗ ಸಿಕ್ಕಿರುವುದು ಆರು ವಾರಗಳ ಮಧ್ಯಂತರ ಜಾಮೀನು. ಇದಕ್ಕೆ ಸಾಕಷ್ಟು ಷರತ್ತುಗಳನ್ನು ಕೂಡ ಹಾಕಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!