ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟ 2026; 12 ಕ್ರೀಡೆಗಳಿಗೆ ಕೊಕ್, ಭಾರತಕ್ಕೆ ಹಿನ್ನಡೆ !
ನ್ಯೂಸ್ ಆ್ಯರೋ: ಗ್ಲಾಸ್ಗೋದಲ್ಲಿ ನಡೆಯಲಿರುವ 2026 ರ ಕಾಮನ್ವೆಲ್ತ್ ಗೇಮ್ಸ್‌ನಿಂದ 12 ಕ್ರೀಡೆಗಳನ್ನು ಕೈ ಬಿಡಲಾಗಿದೆ. 23ನೇ ಆವೃತ್ತಿಯ ಕ್ರೀಡಾಕೂಟವನ್ನು ಬಜೆಟ್ ಸ್ನೇಹಿಯಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಆದರೆ ಇಲ್ಲಿ ಕೈ ಬಿಡಲಾದ ಪ್ರಮುಖ ಕ್ರೀಡೆಗಳಲ್ಲಿ ಭಾರತವು ಬಲಿಷ್ಠವಾಗಿ ಗುರುತಿಸಿಕೊಂಡಿತ್ತು.
ಹಾಕಿ, ಬ್ಯಾಡ್ಮಿಂಟನ್, ಕ್ರಿಕೆಟ್, ಶೂಟಿಂಗ್ ಮತ್ತು ಕುಸ್ತಿಗಳಲ್ಲಿ ಭಾರತೀಯ ಅಥ್ಲೀಟ್‌ಗಳು ಉತ್ತಮ ಸಾಧನೆ ತೋರುತ್ತಿದ್ದರು. ಆದರೀಗ ಈ ಕ್ರೀಡೆಗಳನ್ನು ತೆಗೆದು ಹಾಕಿರುವುದರಿಂದ ಕಾಮನ್ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಹಿನ್ನಡೆಯಾಗಿದೆ.
ಏಕೆಂದರೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಹರ್ಮನ್‌ಪ್ರೀತ್ ಸಿಂಗ್, ಮನು ಬಾಕರ್, ಮಣಿಕಾ ಬಾತ್ರಾ, ಅಮನ್ ಸೆಹ್ರಾವತ್, ಲಕ್ಷಯ್ ಸೇನ್ ಮತ್ತು ಇತರ ಅನೇಕ ಕ್ರೀಡಾಪಟುಗಳು ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿಯಲಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ 2026 ರಿಂದ ಕೈ ಬಿಡಲಾದ ಕ್ರೀಡೆಗಳು:
- ಹಾಕಿ
- ಕ್ರಿಕೆಟ್
- ಬ್ಯಾಡ್ಮಿಂಟನ್
- ಕುಸ್ತಿ
- ಟೇಬಲ್ ಟೆನ್ನಿಸ್
- ಡೈವಿಂಗ್
- ರಗ್ಬಿ ಸೆವೆನ್ಸ್
- ಬೀಚ್ ವಾಲಿಬಾಲ್
- ಮೌಂಟೇನ್ ಬೈಕಿಂಗ್
- ಸ್ಕ್ವ್ಯಾಷ್
- ರಿದಮಿಕ್ ಜಿಮ್ನಾಸ್ಟಿಕ್ಸ್
- ಶೂಟಿಂಗ್
ಭಾರತವು ಕಾಮನ್ವೆಲ್ತ್ ಗೇಮ್ಸ್ನ ಶೂಟಿಂಗ್ನಲ್ಲಿ ಈವರೆಗೆ 135 ಪದಕಗಳನ್ನು ಗೆದ್ದಿದೆ. ಹಾಗೆಯೇ ಬ್ಯಾಡ್ಮಿಂಟನ್‌ನಲ್ಲಿ 31 ಪದಕಗಳನ್ನು ಜಯಿಸಿದ್ದಾರೆ. ಇನ್ನು ಕುಸ್ತಿಯಲ್ಲಿ ಭಾರತ 114 ಪದಕಗಳನ್ನು ಗೆದ್ದಿದ್ದರೆ, ಹಾಕಿಯಲ್ಲಿ ಒಟ್ಟು 8 ಬಾರಿ ಚಾಂಪಿಯನ್ ಆಗಿದ್ದಾರೆ. ಆದರೀಗ ಈ ಮೂರು ಪ್ರಮುಖ ಕ್ರೀಡೆಗಳನ್ನು ತೆಗೆದು ಹಾಕಲಾಗಿದ್ದು, ಹೀಗಾಗಿ ಮುಂಬರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕಗಳ ಸಂಖ್ಯೆಯುವ ಕಡಿಮೆಯಾಗುವ ಸಾಧ್ಯತೆಯಿದೆ.
Leave a Comment