ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2024: ಜನತೆಗೆ ಸಿಎಂ ಶಿಂಧೆ ಬಂಪರ್ ಗಿಫ್ಟ್ ಘೋಷಣೆ
ನ್ಯೂಸ್ ಆ್ಯರೋ: ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಥೆಯವರು ಜನರಿಗೆ ಬಂಪರ್ ಉಡುಗೊರೆಯೊಂದನ್ನು ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ ಮುಂಬೈ ಪ್ರವೇಶಿಸುವ ಲಘು ವಾಹನಗಳು ಯಾವುದೇ ಟೋಲ್ ಶುಲ್ಕ ಕಟ್ಟಬೇಕಿಲ್ಲ ಎಂದು ಘೋಷಣೆ ಮಾಡಿದ್ದಾರೆ.
ಇಂದು ನಡೆದ ಕೊನೆಯ ಸಚಿವ ಸಂಪುಟದಲ್ಲಿ ಸಿಎಂ ಏಕನಾಥ್ ಶಿಂಧೆ ಅವರು ಇಂತಹದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ದಹಿಸಾರ್, ಮುಳುನಾಡ್, ವಾಶಿ, ಐರೋಲಿ ಮತ್ತು ತಿನ್ಹತ್ ನಾಕಾ ಈ ಐದು ಟೋಲ್ಗಳಲ್ಲಿ ಇನ್ನು ಮುಂದೆ ಯಾವುದೇ ಟೋಲ್ ಶುಲ್ಕವನ್ನು ಕಟ್ಟಬೇಕಾಗಿಲ್ಲ. ಇಂದು ಮಧ್ಯರಾತ್ರಿಯಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಇದಲ್ಲದೆ, ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯಕ್ಕೆ ದಿವಂಗತ ರತನ್ ಟಾಟಾ ಹೆಸರಿಡುವ ಪ್ರಸ್ತಾವನೆಗೂ ಮಹಾರಾಷ್ಟ್ರ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಥಾಣೆ, ರಾಯಗಡ್ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಪ್ರಧಾನವಾಗಿ ನೆಲೆಗೊಂಡಿರುವ ಮೀನುಗಾರಿಕೆ, ಉಪ್ಪು ತಯಾರಿಕೆ ಮತ್ತು ಭತ್ತದ ಕೃಷಿಯಲ್ಲಿ ತೊಡಗಿರುವ ಕೃಷಿ ಸಮುದಾಯಕ್ಕಾಗಿ ನಿಗಮವನ್ನು ಸ್ಥಾಪಿಸಲು ಕೂಡ ಕ್ಯಾಬಿನೆಟ್ ಅನುಮೋದನೆ ನೀಡಿದೆ.
Leave a Comment