ಪ್ರವಾಹ ಪೀಡಿತ 14 ರಾಜ್ಯಗಳಿಗೆ ₹ 5,858 ಕೋಟಿ ಬಿಡುಗಡೆ ಮಾಡಿದ ಕೇಂದ್ರ

floods and heavy rainfall
Spread the love

ದೆಹಲಿ: ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (ಎಸ್‌ಡಿಆರ್‌ಎಫ್) ಕೇಂದ್ರ ಸರ್ಕಾರದ ಪಾಲು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (ಎನ್‌ಡಿಆರ್‌ಎಫ್) ಮುಂಗಡವಾಗಿ 14 ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ₹ 5,858.60 ಕೋಟಿ ಬಿಡುಗಡೆ ಮಾಡಿದೆ.

ಗೃಹ ಸಚಿವಾಲಯ (MHA) ಹೊರಡಿಸಿದ ಹೇಳಿಕೆಯ ಪ್ರಕಾರ, ಮಹಾರಾಷ್ಟ್ರಕ್ಕೆ ₹ 1,492 ಕೋಟಿ, ಆಂಧ್ರಪ್ರದೇಶಕ್ಕೆ ₹ 1,036 ಕೋಟಿ, ಅಸ್ಸಾಂಗೆ ₹ 716 ಕೋಟಿ, ಬಿಹಾರಕ್ಕೆ ₹ 655.60 ಕೋಟಿ, ಗುಜರಾತ್‌ಗೆ ₹ 600 ಕೋಟಿ ಮತ್ತು ಹಿಮಾಚಲ ಪ್ರದೇಶಕ್ಕೆ ₹ 189.20 ಕೋಟಿ ನೀಡಲಾಗಿದೆ.

ಕೇರಳಕ್ಕೆ ₹ 145.60 ಕೋಟಿ, ಮಣಿಪುರಕ್ಕೆ ₹ 50 ಕೋಟಿ, ಮಿಜೋರಾಂಗೆ ₹ 21.60 ಕೋಟಿ, ನಾಗಾಲ್ಯಾಂಡ್‌ಗೆ ₹ 19.20 ಕೋಟಿ, ಸಿಕ್ಕಿಂಗೆ ₹ 23.60 ಕೋಟಿ, ತೆಲಂಗಾಣಕ್ಕೆ ₹ 416.80 ಕೋಟಿ, ತ್ರಿಪುರಾಕ್ಕೆ ₹ 25 ಕೋಟಿ, ಪಶ್ಚಿಮ ಬಂಗಾಳಕ್ಕೆ ₹ 468 ಎಂದು ಎಂಎಚ್‌ಎ ಹೇಳಿಕೆ ತಿಳಿಸಿದೆ.

ಇನ್ನು ಪ್ರವಾಹ ಪೀಡಿತ ಎಲ್ಲಾ ರಾಜ್ಯಗಳಿಗೆ ಅಗತ್ಯವಿರುವ ಎನ್‌ಡಿಆರ್‌ಎಫ್ ತಂಡಗಳು, ಸೇನಾ ತಂಡಗಳು ಮತ್ತು ವಾಯುಪಡೆಯ ಬೆಂಬಲ ಸೇರಿದಂತೆ ಎಲ್ಲಾ ಲಾಜಿಸ್ಟಿಕ್ ನೆರವನ್ನು ಸಹ ಒದಗಿಸಿದೆ ಎಂದು ಕೇಂದ್ರ ಹೇಳಿದೆ.

ಈ ವರ್ಷ ನೈಋತ್ಯ ಮಾನ್ಸೂನ್ ಸಮಯದಲ್ಲಿ ಈ ರಾಜ್ಯಗಳು ಅತಿ ಹೆಚ್ಚು ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಪ್ರಭಾವಿತವಾಗಿವೆ ಎಂದು ಸಚಿವಾಲಯ ಹೇಳಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಮೋದಿ ಸರ್ಕಾರವು ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ತಗ್ಗಿಸುವಲ್ಲಿ ಪ್ರಕೃತಿ ವಿಕೋಪದಿಂದ ಪೀಡಿತ ರಾಜ್ಯಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ ಎಂದು ಸಚಿವಾಲಯ ಹೇಳಿದೆ.

Leave a Comment

Leave a Reply

Your email address will not be published. Required fields are marked *