ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮೀಪದ ಕುಮಾರ ಪರ್ವತ ಚಾರಣ ಪಥವು ಅ.3 (ಗುರುವಾರ)ರಂದು ಮರು ಪ್ರಾರಂಭವಾಗಲಿದೆ. ಜ. 26 ಹಾಗೂ 27ರಂದು ಮಿತಿಗೂ ಮೀರಿದ ಚಾರಣಿಗರು ಆಗಮಿಸಿದ್ದ ಕಾರಣ ಜನದಟ್ಟಣೆ ಉಂಟಾಗಿತ್ತು. ಆದ್ದರಿಂದ, ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫೆ.1ರಿಂದ ಚಾರಣ ಪಥವನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದ
ದಕ್ಷಿಣ ಕನ್ನಡ ವಿಧಾನ ಪರಿಷತ್ ಉಪ ಚುನಾವಣಗೆ ಬಿಜೆಪಿ ಅಭ್ಯರ್ಥಿ ಘೋಷಣೆ
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಇದೇ ಅಕ್ಟೋಬರ್ 21 ರಂದು ಉಪಚುನಾವಣೆ ನಡೆಯಲಿದೆ. ಇದರ ಬೆನಲ್ಲೇ ಇದೀಗ ಬಿಜೆಪಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಸವಿತಾ ಸಮಾಜದ ಕಿಶೋರ್ ಕುಮಾರ್ ಪುತ್ತೂರ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಇದರೊ
ಅ.3 ರಿಂದ ಮಂಗಳೂರು ದಸರಾ ವೈಭವ; ಡಿಜೆಗೆ ಬ್ರೇಕ್
ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವ ಅಕ್ಟೋಬರ್ 3 ರಿಂದ 14ವರೆಗೆ ನಡೆಯಲಿದೆ. ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಅಬ್ಬರದ ಸೌಂಡ್ಗೆ, ಡಿಜೆಗೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ. ಈ ಬಾರಿಯ ಮಂಗಳೂರು ದಸರಾ ಉದ್ಘಾಟನೆಯನ್ನು ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ನೆರವೇರಿಸಲಿದ್ದಾರೆ. ದಸರಾ ಅಂಗವಾಗಿ ಕುದ್ರೋಳಿ ಕ್ಷೇತ್ರದಲ್ಲಿ ನಿತ್ಯ ಧಾರ್ಮಿಕ, ಸ
ಪುತ್ತೂರು: ಕಾಮದ ತೀಟೆ ತೀರಿಸಿಕೊಂಡ ರಾಜಕೀಯ ಮುಖಂಡನ ವೀಡಿಯೋ ವೈರಲ್
ಪುತ್ತೂರು: ರಾಜಕೀಯ ಮುಖಂಡ ಒಬ್ಬ ಆನ್‌ಲೈನ್ ನಲ್ಲಿಕಾಮದ ತೀಟೆ ತೀರಿಸಿಕೊಂಡ ವೀಡಿಯೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ವ್ಯಾಪಕ ಸದ್ದು ಮಾಡುತ್ತಿದೆ. ಸದಾ ಬರಹಗಳ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಸುದ್ದಿಯಲ್ಲಿರುತ್ತಿರುವ ಈತ ಧಾರ್ಮಿಕ ಕೇಂದ್ರದ ಆವರಣದಲ್ಲಿ ವೀಡಿಯೋ ಕಾಲ್ ಮಾಡಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿರವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋ ಕಾಲ್‌ನಲ್ಲಿ ಮಹಿಳೆಯೊಬ್ಬರು ನಗ್ನವಾಗಿರುವ ಮ
ಕಾರ್ಕಳ-ಧರ್ಮಸ್ಥಳ ಹೆದ್ದಾರಿಯಲ್ಲಿ ಅಪಘಾತ: ತಂದೆ ಜತೆಗೆ ಮೂವರು ಮಕ್ಕಳು ಸಾವು
ಉಡುಪಿ: ಕಾರ್ಕಳ-ಧರ್ಮಸ್ಥಳ ಹೆದ್ದಾರಿಯಲ್ಲಿ ಇಂದು (ಸೆಪ್ಟೆಂಬರ್ 30) ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆ ಕಾರ್ಕಳ ತಾ| ಹೊಸ್ಮಾರುನ ಪಾಜೆಗುಡ್ಡೆ ಬಳಿ ಬೈಕ್ಗೆ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಬೈಕ್ನಲ್ಲಿ ತೆರಳುತ್ತಿದ್ದ ತಂದೆ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಸುರೇಶ್ ಆಚಾರ್ಯ(36), ಸಮೀಕ್ಷಾ(7), ಸುಶ್ಮಿತಾ(5) ಸುಶಾಂತ್(2) ಮೃತರು. ಇನ್ನು ಸುರೇಶ್ ಆಚಾರ್ಯ ಪತ್ನಿ