ಮಂಗಳೂರು: 2019-20ರಲ್ಲಿ ಕೊನೆಯ ಬಾರಿಗೆ ಮಂಗಳೂರಿನಲ್ಲಿ ನಡೆದಿದ್ದ ಕರಾವಳಿ ಉತ್ಸವ ಮತ್ತೊಮ್ಮೆ ಆರಂಭವಾಗುತ್ತಿದೆ. ಕೊರೊನಾ ಬಳಿಕ ಮತ್ತೆ ಆರಂಭವಾಗುತ್ತಿರುವ ಕರಾವಳಿ ಉತ್ಸವ ಡಿಸೆಂಬರ್ 21 ರಿಂದ ಜನವರಿ 19ರ ವರೆಗೆ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, “ಕರಾವಳಿಯ ನೈಜ ಸಂಸ್ಕೃತಿಯ ಅನಾವರಣ, ಸಂಪ್ರದಾಯಗಳ ಪ್ರದರ್ಶನ, ಆಹಾರ ಖಾದ್ಯಗಳ ಪರಿಚಯ, ವಿವಿಧ ವಿನೋದಾವಳಿಗಳೊಂದಿಗೆ ಕರಾವಳಿ ಉತ್ಸವ
ಸಾಲ ಮರು ಪಾವತಿಗೆ ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಕಿರುಕುಳ ಆರೋಪ; ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ದಿವ್ಯಾಂಗ ಮನೋಹರ್ ಪಿರೇರಾ
ನ್ಯೂಸ್ ಆ್ಯರೋ: ಸಾಲ ಮರುಪಾವತಿ ವಿಚಾರದಲ್ಲಿ ಮಂಗಳೂರು ಕ್ಯಾಥೊಲಿಕ್ ಸಹಕಾರಿ (ಎಂಸಿಸಿ) ಬ್ಯಾಂಕ್ ಅಧ್ಯಕ್ಷ ಅನಿಲ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದಿವ್ಯಾಂಗ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಫೆರ್ಮಾಯಿ ಎಂಬಲ್ಲಿ ನಡೆದಿದೆ. ಫೆರ್ಮಾಯಿ ನಿವಾಸಿ ಮನೋಹರ್ ಪಿರೇರಾ (46) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮನೋಹರ್ ಎಂಸಿಸಿ ಬ್ಯಾಂಕ್ನಿಂದ 15 ಲಕ್ಷ ಸಾಲ ಪಡೆದಿದ್ದರು.
ಮಿಸೆಸ್ ಅರ್ಥ್ ಕಿರೀಟ ಮುಡಿಗೇರಿಸಿಕೊಂಡ ಉಡುಪಿಯ ವೈದ್ಯೆ; 40 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಕಿರೀಟಕ್ಕೆ ಮುತ್ತಿಕ್ಕಿದ ಡಾ.ಶೃತಿ
ನ್ಯೂಸ್ ಆ್ಯರೋ: ಉಡುಪಿಯ ಮಧುಮೇಹ ತಜ್ಞೆ ಡಾ.ಶೃತಿ ಬಲ್ಲಾಳ್ ಫಿಲಿಫೈನ್ಸ್‌ನ ಮನಿಲಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ 40 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರತಿಷ್ಠಿತ ಮಿಸೆಸ್ ಅರ್ಥ್ ಇಂಟರ್ನ್ಯಾಶನಲ್ ಟೂರಿಸಂ – 2024 ಕಿರೀಟ ಗೆದ್ದುಕೊಂಡಿದ್ದಾರೆ. ಈ ಕುರಿತು ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರುತಿ ಬಲ್ಲಾಳ್, ಮಂಗಳೂರು ವಲಯ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದೇ
ಪಂದ್ಯಾಟದ ನಡುವೆ ಕಾಣಿಸಿಕೊಂಡ ಎದೆ ನೋವು; ರಾಜ್ಯಮಟ್ಟದ ಕಬಡ್ಡಿ ಆಟಗಾರ ಪ್ರೀತಮ್ ಶೆಟ್ಟಿ ನಿಧನ
ನ್ಯೂಸ್ ಆ್ಯರೋ: ರಾಜ್ಯಮಟ್ಟದ ಕಬಡ್ಡಿ ಆಟಗಾರ ನಡುಮನೆ ಪ್ರೀತಮ್ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರೀತಮ್ ಭಾಗವಹಿಸಿದ್ದರು. ಈ ಪಂದ್ಯಾಟದ ನಡುವೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಎದೆ ನೋವಿನಿಂದ ಅಂಗಳದಲ್ಲೇ ಕುಸಿದು ಬಿದ್ದ ಅವರನ್ನು ಸಹ ಆಟಗಾರರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲಾಗಲೇ ಪ್ರೀತಮ್ ಶೆಟ್ಟಿ ಅವರು
ಶಬರಿಮಲೆ ಅಯ್ಯಪ್ಪ ಸ್ವಾಮಿಯಿಂದ ನಡೆಯಿತು ಪವಾಡ; ಸ್ವಾಮಿ ದಯೆಯಿಂದ ಪುತ್ತೂರು ಯುವಕನಿಗೆ ಮಾತು ಬಂತು
ನ್ಯೂಸ್ ಆ್ಯರೋ: ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಸ್ವಾಮಿ ಮಹಿಮೆಯ ಪ್ರತ್ಯಕ್ಷ್ಯ ದರ್ಶನವಾಗುತ್ತದೆ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತದೆ. ಅದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಈಗ ಪುತ್ತೂರಿನಲ್ಲಿ ವರದಿಯಾಗಿದೆ. ಒಂದು ಶಬ್ದವನ್ನೂ ಉಚ್ಚರಿಸಲು ಬಾರದ ಯುವಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ. ಈ ಬಾರಿಯೂ ಮತ್ತೆ ಶಬರಿಮಲೆಗೆ ಹೋಗಲು ಮಾಲೆ ಹಾಕಿರುವ ಆತ ಮಾತನಾಡಲು ಆರಂಭಿಸಿದ್ದಾನಂತೆ. ಪುತ್ತೂರಿನ ಸಾಮೆತ್ತಡ್ಕದ ಪ್ರಸನ