ನ್ಯೂಸ್ ಆ್ಯರೋ : ಮಂಗಳೂರು ನಗರದಲ್ಲಿ ಅಪರಾಧ ಕೃತ್ಯವನ್ನು ನಡೆಸುವ ಉದ್ದೇಶದಿಂದ ಅಕ್ರಮವಾಗಿ ಶಸ್ತ್ರಾಸ್ತ್ರವಾದ ಪಿಸ್ತೂಲ್, ರಿವಾಲ್ವರ್, ಸಜೀವ ಮದ್ದುಗುಂಡುಗಳು, ಮಾದಕ ವಸ್ತುಗಳನ್ನು ಹೊಂದಿಕೊಂಡಿದ್ದ ಕುಖ್ಯಾತ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕುಖ್ಯಾತ ರೌಡಿಗಳಾದ ಮೊಹಮ್ಮದ್ ಹನೀಫ್ ಅಲಿಯಾಸ್ ಅಲಿ ಮುನ್ನಾ(40), ವಾಸ: ದೇರ ಹೌಸ್, ಕುರುಡಪದವು ಪೋಸ್ಟ್, ಪೈವಳಿಕೆ ಗ್ರಾಮ, ಕಾಸರಗೋಡು ಜಿಲ್ಲೆ, ಕ
Mangalore : ಎರಡು ಲಕ್ಷಕ್ಕೂ ಅಧಿಕ ಬೆಲೆಯ 750ಕೆಜಿ ಗೋಮಾಂಸ ಸಾಗಾಟ -ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ ಬಜ್ಪೆ ಪೋಲಿಸರು
ನ್ಯೂಸ್ ಆ್ಯರೋ : ಎರಡು ಲಕ್ಷಕ್ಕೂ ಅಧಿಕ ಮೌಲ್ಯದ 750kg ದನದ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಾಹನದ ಸಹಿತ ಬಜ್ಪೆ ಠಾಣಾ ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮೂಡುಬಿದ್ರೆಯ ಹಂಡೇಲು ನಿವಾಸಿಗಳಾದ ಮೊಹಮ್ಮದ್ ಆರೀಫ್ (24) ತಂದೆ: H ಬಾವ ಮತ್ತು ಮೊಹಮ್ಮದ್ ಸುಲ್ತಾನ್ (19) ತಂದೆ:- ಅಬೂಬಕ್ಕರ್ ಎಂದು ಗುರುತಿಸಲಾಗಿದೆ. ಪ್ರಕರಣದ ವಿವರ :ದಿನಾಂಕ 28-07-2024 ರಂದು ದೊರೆತ ಖಚಿತ ಮಾಹಿತಿಯಂತೆ ಬಜಪೆ ಪೊಲೀಸ
ಉಪ್ಪಿನಂಗಡಿ : ಪತ್ನಿ ಮೇಲೆಯೇ ಚೂರಿ ಇರಿದು ಪರಾರಿಯಾಗಲು ಯತ್ನ – ಆರೋಪಿಯನ್ನು ಬೆನ್ನತ್ತಿ ಹಿಡಿದು ಪೋಲಿಸರಿಗೆ ಒಪ್ಪಿಸಿದ ಪೋಷಕರು..!!
ನ್ಯೂಸ್ ಆ್ಯರೋ : ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ಗ್ರಾಮದ ಕಣಿಯಾರು ಗ್ರಾಮದ ಜೋರುಕಟ್ಟೆ ಎಂಬಲ್ಲಿ ನಡೆದಿದೆ. ಜೋರುಕಟ್ಟೆ ನಿವಾಸಿ ಮೊಹಮ್ಮದ್ ಎಂಬವರ ಪುತ್ರಿ ಸಜರಾ (40) ಹಲ್ಲೆಗೊಳಗಾದವರು. ಆಕೆಯ ಪತಿ ಮಡಂತ್ಯಾರು ಸಮೀಪದ ಕೊಲತ್ತಬೈಲು ಮಾಲಾಡಿ ನಿವಾಸಿ ಹಕೀಂ ಎಂಬಾತ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಹಕೀಂ ಮತ್ತು ಸಜರಾ ಅವರ ವಿವಾಹ 15 ವರ್ಷ
ಬೆಳ್ತಂಗಡಿ : ಕುಡಿದ ಮತ್ತಿನಲ್ಲಿ ವಾಹನ ಚಾಲನೆ, ಬೈಕ್ ಗೆ ಗುದ್ದಿದ ಬೊಲೆರೋ – ಗಂಭೀರ ಗಾಯಗೊಂಡ ತಂದೆ, ಮಗಳು ದಾರುಣ ಸಾವು
ನ್ಯೂಸ್ ಆ್ಯರೋ : ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಬೊಲೆರೋ ವಾಹನವನ್ನು ಚಲಾಯಿಸಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೀಟು ಬಳಿ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಕಲ್ಮಂಜ ಕುಡೆಂಚಿಯ ಗುರುಪ್ರಸಾದ್ ಗೋಖಲೆ ಅವರ ಕಾಲು ಮುರಿತವಾಗಿದ್ದು, ಅವರ ಮಗಳು ಅನರ್ಘ್ಯ ಮೃತಪಟ್ಟಿದ್ದಾಳೆ. ಮಗುವಿನ ತಲೆಯ ಮೇಲೆ ಬೊಲೆರೋ ಟಯರ್ ಹರಿದಿದ್ದ
ಉಳ್ಳಾಲ : ಮಾಡೂರು ಬಳಿ ಪ್ಯಾಂಟ್ ಗ್ಯಾಂಗ್ ಸಕ್ರಿಯ..!?- ಹಾಡಹಗಲೇ ಕಾರ್ಮಿಕರಿಬ್ಬರ ಕಿಸೆಯ ಕಾಸು ಎಗರಿಸಿದ ಅಪರಿಚಿತ..!!
ನ್ಯೂಸ್ ಆ್ಯರೋ : ಉಳ್ಳಾಲದ ಮಾಡೂರು ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಲಿ ಕಾರ್ಮಿಕರಿಬ್ಬರು ಇರಿಸಿದ್ದ ಬಟ್ಟೆಗಳಿಂದ ಪ್ಯಾಂಟ್ ಧರಿಸಿದ್ದ ಅಪರಿಚಿತ ಕಳ್ಳನೊಬ್ಬ ಹಣ ಕಳವುಗೈದ ಘಟನೆ ನಿನ್ನೆ ಸಂಜೆ ವೇಳೆ ಸಂಭವಿಸಿದ್ದು, ಕಳ್ಳನ ಮುಖ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಡೂರು ನಿವಾಸಿ ಶಶಿ ಎಂಬವರಿಗೆ ಸೇರಿದ ಕಟ್ಟಡದಿಂದ ಕಳವು ನಡೆದಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರು ಕಾರ್ಮಿಕರು ಟೈಲ್ಸ್ ಹಾಕುವ ಕೆಲಸವನ್ನು ನಿರ್ವಹಿಸುತ್ತ