ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿ ಮೇಲೆ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ – ಬಂಟ್ವಾಳ ಮೂಲದ ಆರೋಪಿ ಸಲೀಂ ಬಂಧನ

ಕ್ರೈಂ

ನ್ಯೂಸ್ ಆ್ಯರೋ : ಉಡುಪಿ ದಕ್ಷಿಣ ಕನ್ನಡ ಗಡಿ ಭಾಗದ ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಆರೋಪಿಯನ್ನು ಪಡುಬಿದ್ರೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ದ.ಕ. ಜಿಲ್ಲೆಯ ಬಂಟ್ವಾಳ ನಿವಾಸಿ ಸಲೀಂ ಬಂಧಿತ ಆರೋಪಿಯಾಗಿದ್ದಾನೆ. ಹೆಜಮಾಡಿ ಟೋಲ್ ಗೇಟ್ ನ ಬಿಲ್ ಕಲೆಕ್ಟರ್ ದೀಕ್ಷಿತ್ ಹಲ್ಲೆಗೊಳಗಾದವರು. ಕಳೆದ ಮಂಗಳವಾರ ಬೆಳಗ್ಗೆ ಮುಲ್ಕಿ ಕಡೆಯಿಂದ ಕಾರಿನಲ್ಲಿ ಹೆಜಮಾಡಿ ಟೋಲ್ ಗೇಟ್ ಗೆ ಬಂದ ಸಲೀಂ,

Mangalore : ಜೋಕಟ್ಟೆಯಲ್ಲಿ ಅಪ್ರಾಪ್ತ ಬಾಲಕಿಯ ಹತ್ಯೆ – ಘಟನಾ ಸ್ಥಳಕ್ಕೆ ಪೋಲಿಸರ ದೌಡು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಬಂದವರಾರು?

ಕ್ರೈಂ

ನ್ಯೂಸ್ ಆ್ಯರೋ : ಮಂಗಳೂರು ನಗರ ಕಮೀಷನರೇಟ್ ನ ಪಣಂಬೂರು ಪೋಲಿಸ್ ಠಾಣಾ ವ್ಯಾಪ್ತಿಯ ಜೋಕಟ್ಟೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಘಟನೆಯ ವಿವರ :ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸವಾಗಿದ್ದು ಅವರ ಮನೆಯಲ್ಲಿ ಕಳೆದ 04 ದಿನಗಳ ಹಿಂದೆ ತಮ್ಮನ ಮಗಳಾದ 13 ವರ್ಷದ ಬಾಲಕಿಯು ಕೈ ನೋವಿನ ಚಿಕಿತ್ಸೆ ಪಡೆಯಲು ಬೆಳಗಾವಿಯಿಂದ ಬಂದು ಉಳಿ

12 ವರ್ಷಗಳ ಬಳಿಕ ಹೊರಬಿತ್ತು ಮಂಗಳೂರು ಹೋಂ ಸ್ಟೇ ಪ್ರಕರಣದ ತೀರ್ಪು – ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯದ ಆದೇಶ

ಕ್ರೈಂ

ನ್ಯೂಸ್ ಆ್ಯರೋ : ದೇಶಾದ್ಯಂತ ಸುದ್ದಿಯಾಗಿದ್ದ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದು, ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣ ನಡೆದು 12 ವರ್ಷಗಳ ಬಳಿಕ ಈ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಬಗ್ಗೆ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳು ದೋಷ ಮುಕ್ತರಾಗಿದ್ದಾರೆ ಎಂದು ಮಂಗಳೂರು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ತ

Bangalore : ವಾಕಿಂಗ್ ಹೊರಟಿದ್ದ ಮಹಿಳೆಗೆ ಎಳೆದಾಡಿ ಚುಂಬಿಸಿದ್ದ ಕಾಮುಕ ಅರೆಸ್ಟ್ – ಕರ್ತವ್ಯ ಲೋಪದ ಆರೋಪ, ಮೂವರು ಪೋಲಿಸರು ಸಸ್ಪೆಂಡ್

ಕ್ರೈಂ

ನ್ಯೂಸ್ ಆ್ಯರೋ : ವಾಕಿಂಗ್ ಹೊರಟಿದ್ದ ಮಹಿಳೆಯನ್ನು ಎಳೆದಾಡಿ ಚುಂಬಿಸಿ ಪರಾರಿಯಾಗಿದ್ದವನನ್ನು ಬೆಂಗಳೂರಿನ ಕೋಣನಕುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾಬ್ ಚಾಲಕ 25 ವರ್ಷದ ಸುರೇಶ್ ಬಂಧಿತ ಆರೋಪಿ. ಆಗಸ್ಟ್​ 2ರಂದು ಬೆಳಗಿನ ಜಾವ ಐದು ಗಂಟೆ ಕೋಣನಕುಂಟೆ ಬಳಿಯ ಕೃಷ್ಣಾನಗರದ ಪಾರ್ಕ್​ಗೆ ವಾಕಿಂಗ್​ಗೆ ಬಂದಿದ್ದ ಮಹಿಳೆಯನ್ನು ಬಲವಂತವಾಗಿ ತಬ್ಬಿ ಹಿಡಿದು ಚುಂಬಿಸಿ ಎಸ್ಕೇಪ್ ಆಗಿದ್ದ. ಇದೀಗ ಘಟನೆ ನಡೆದು ಮೂರು ದಿನಗಳ

ಉಡುಪಿ : ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆಗೆ ಕಡಿದು ಕೈಯಲ್ಲಿ ಕತ್ತಿ ಹಿಡಿದು ನರ್ತಿಸಿದ ಪತಿ – ಒಂದೂವರೆ ಗಂಟೆ ಕುಡುಕನ ಆಟಾಟೋಪ, ಅಶ್ರುವಾಯು ಸಿಡಿಸಿ ಆರೋಪಿ ವಶಕ್ಕೆ..!

ಕ್ರೈಂ

ನ್ಯೂಸ್ ಆ್ಯರೋ : ಪತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಪತ್ನಿಯ ಕುತ್ತಿಗೆಗೆ ಕಡಿದು ಕೈಯಲ್ಲಿ ಕತ್ತಿ ಹಿಡಿದು ನರ್ತಿಸಿ ವಿಚಿತ್ರವಾಗಿ ವರ್ತಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ. ಸದ್ಯ ಗಂಭೀರ ಗಾಯಗೊಂಡಿರುವ ಪತ್ನಿಯನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದವರನ್ನು ಅನಿತಾ (38) ಎಂದು ಗುರುತಿಸಲಾಗಿದೆ. ಅವರ ಪತಿ, ಆರೋಪಿ ಲಕ್ಷ್ಮಣ ಯಾನೆ ರಮೇಶ್‌ನನ್

Page 21 of 24