‘ಬಿಲ್ಲವ’ ಸಮುದಾಯದ ಹೆಣ್ಮಕ್ಕಳ ಬಗ್ಗೆ ಅವಹೇಳನ; ಅರಣ್ಯಾಧಿಕಾರಿಯ ಬಂಧನಕ್ಕೆ ಕಾರಣವಾಯ್ತು ಆ ಒಂದು ಹೇಳಿಕೆ !

Forest officer Sanjiva Pujari
Spread the love

ನ್ಯೂಸ್ ಆ್ಯರೋ : ಬಿಲ್ಲವ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಅರಣ್ಯಾಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಳ್ಯದ ಬೆಳ್ಳಾರೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಿಲ್ಲವ ಸಮಾಜದ ಒಂದು ಲಕ್ಷ ಹೆಣ್ಣು ಮಕ್ಕಳು ವೇಶ್ಯೆಯರಾಗಿದ್ದಾರೆ ಎಂದು ಹೇಳಿಕೆ ನೀಡಿದ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಹಿಂದೂ ಜಾಗರಣಾ ವೇದಿಕೆ ಮುಖಂಡ ಸಚಿನ್ ವಲಳಂಬೆ ಅವರು ನೀಡಿದ ದೂರಿನ ಅನ್ವಯ ಬೆಳ್ಳಾರೆ ಪೊಲೀಸರು ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಸುರೇಶ್ ಕಾಸರಗೋಡು ಜೊತೆ ದೂರವಾಣಿಯಲ್ಲಿ ಮಾತನಾಡುತ್ತ ಸಂಜೀವ್ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸಮುದಾಯಕ್ಕೆ ಸೇರಿದ ಒಂದು ಲಕ್ಷ ಹುಡುಗಿಯರು ವೇಶ್ಯೆಯರಿದ್ದಾರೆ. ಇದಕ್ಕೆ ನನ್ನ ಬಳಿ 10 ಸಾವಿರ ದಾಖಲೆಗಳಿವೆ. ಹಿಂದುತ್ವದ ಹುಡುಗರು ವೇಶ್ಯೆಯರನ್ನಾಗಿ ಮಾಡಿದ್ದಾರೆ. ಒಂದು ಸಮಾಜದ ಒಂದು ಲಕ್ಷ ಹೆಣ್ಣುಮಕ್ಕಳು ವೇಶ್ಯೆಯರಾಗಲು ಹಿಂದೂ ಸಂಘಟನೆಯ ಯುವಕರು ಕಾರಣ. ಭಜನೆ ಮಾಡಿದ ಹೆಣ್ಣುಮಕ್ಕಳನ್ನು ಮರದ ಅಡಿಯಲ್ಲಿ ಮಲಗಿಸಿದವರು ಹಿಂದೂ ಹುಡುಗರು ಎಂದು ಅವಹೇಳನಕಾರಿಯಾಗಿ ನಾಲಿಗೆ ಹರಿಬಿಟ್ಟಿದ್ದನು.

ಸಂಜೀವ ಪೂಜಾರಿ ಅವರ ಆಡಿಯೋ ವೈರಲ್ ಆಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಹಿಂದೂ ಜಾಗರಣಾ ವೇದಿಕೆ ಕರೆ ನೀಡಿತ್ತು, ಈ ಬೆನ್ನಲ್ಲೇ ಎಫ್‌ಐಆರ್ ದಾಖಲಿಸಲಾಗಿತ್ತು, ಇದೀಗ ಅರಣ್ಯಾಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!