ಕ್ರಿಸ್ಮಸ್ ಸಂಭ್ರಮದಲ್ಲಿದ್ದ ಮಾರುಕಟ್ಟೆಗೆ ಕಾರು ನುಗ್ಗಿಸಿದ ವ್ಯಕ್ತಿ; ಇಬ್ಬರು ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ
ನ್ಯೂಸ್ ಆ್ಯರೋ: ಶುಕ್ರವಾರ ಪೂರ್ವ ಜರ್ಮನಿಯ ಮ್ಯಾಗ್ಡೆಬರ್ಗ್‌ನ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಜನರ ಗುಂಪಿನ ಮೇಲೆ ಕಾರೊಂದು ನುಗ್ಗಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮತ್ತು ಕನಿಷ್ಠ 60 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಇದನ್ನು ಉದ್ದೇಶಪೂರ್ವಕ ದಾಳಿ ಎಂದು ಅವರು ಕರೆದಿದ್ದಾರೆ.
ಒಂದು ಮಗು ಸೇರಿ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸಂಜೆ 7 ಗಂಟೆಗೆ ವೇಳೆಗೆ ನಡೆದ ಘಟನೆಯಲ್ಲಿ 15 ಜನರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾರಿನ ಚಾಲಕನನ್ನು ಬಂಧಿಸಲಾಗಿದೆ ಎಂದು ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ತಿಳಿಸಿದೆ. ಪೊಲೀಸ್ ಅಧಿಕಾರಿಯೊಬ್ಬರು ವ್ಯಕ್ತಿಯತ್ತ ಗನ್ ತೋರಿಸಿದ್ದರಿಂದ ಶಂಕಿತ ವ್ಯಕ್ತಿಯನ್ನು ರಸ್ತೆಯ ಮಧ್ಯದಲ್ಲಿರುವ ವಾಕ್‌ವೇನಲ್ಲಿ ಬಂಧಿಸಲಾಯಿತು. ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲು ಇತರ ಅಧಿಕಾರಿಗಳು ಶೀಘ್ರದಲ್ಲೇ ಆಗಮಿಸಿದರು ಎಂದು ವರದಿ ತಿಳಿಸಿದೆ.
ಬರ್ಲಿನ್‌ನ ಪಶ್ಚಿಮದಲ್ಲಿರುವ ಮ್ಯಾಗ್ಡೆಬರ್ಗ್ ಸ್ಯಾಕ್ಸೋನಿ-ಅನ್ಹಾಲ್ಟ್‌ನ ರಾಜ್ಯದ ರಾಜಧಾನಿಯಾಗಿದೆ ಮತ್ತು ಸುಮಾರು 2,40,000 ನಿವಾಸಿಗಳನ್ನು ಹೊಂದಿದೆ. ವರದಿಗಳ ಪ್ರಕಾರ, ಜರ್ಮನ್ ಕ್ರಿಸ್‌ಮಸ್ ಮಾರುಕಟ್ಟೆ ದಾಳಿಯ ಶಂಕಿತನು ಸೌದಿ ಅರೇಬಿಯಾದ 50 ವರ್ಷದ ವ್ಯಕ್ತಿ ಎನ್ನಲಾಗಿದ್ದು, ಅವರು ಮ್ಯಾಗ್ಡೆಬರ್ಗ್ ಕ್ಲಿನಿಕ್‌ನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.
ಪೊಲೀಸರ ಪ್ರಕಾರ, ಈತ ಬಿಎಂಡಬ್ಲ್ಯು ಚಲಾಯಿಸುತ್ತಿದ್ದರು ಮತ್ತು ಕಾರಿನಲ್ಲಿ ಸ್ಫೋಟಕಗಳನ್ನು ಹೊಂದಿದ್ದ. ಈತ ಸುಮಾರು ಎರಡು ದಶಕಗಳಿಂದ ಜರ್ಮನಿಯಲ್ಲಿ ವಾಸಿಸುತ್ತಿದ್ದು, ಜರ್ಮನಿಯ ಖಾಯಂ ನಿವಾಸಿ ಎಂದು ವರದಿಯಾಗಿದೆ.
Leave a Comment