ಪ್ರತಿ ದಿನಕ್ಕೆ ಇವರ ವೇತನ 52 ಲಕ್ಷ ರೂಪಾಯಿ..!! – ಈ ಅದೃಷ್ಟವಂತ ಭಾರತೀಯ ಯಾರು ಗೊತ್ತೆ?

ಪ್ರತಿ ದಿನಕ್ಕೆ ಇವರ ವೇತನ 52 ಲಕ್ಷ ರೂಪಾಯಿ..!! – ಈ ಅದೃಷ್ಟವಂತ ಭಾರತೀಯ ಯಾರು ಗೊತ್ತೆ?

ನ್ಯೂಸ್ ಆ್ಯರೋ‌ : ಕೆಲವೊಂದು ಉನ್ನತ ಹುದ್ದೆಯ ಅಧಿಕಾರಿಗಳ, ಕಲಾವಿದರ, ಆಟಗಾರರ ವೇತನ ಲಕ್ಷ, ಕೋಟಿ ರೂ.ಗಳಲ್ಲಿರುತ್ತದೆ. ಅದೇ ರೀತಿ ಇವರ ವೇತನ ಕೇಳಿದರೆ ನೀವು ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಡುವುದು ಖಚಿತ. ಯಾಕೆಂದರೆ ಇವರ ಸಂಬಳ ಪ್ರತಿ ದಿನಕ್ಕೆ ಅಂದಾಜು 52 ಲಕ್ಷ ರೂ!

ಮಾಸ್ಟರ್‌ ಕಾರ್ಡ್‌ನ ಮಾಜಿ ಸಿಇಒ, ಪಂಜಾಬ್ ಮೂಲದ ಅಜಯ್‌ ಬಂಗಾ ಅವರೇ ಇಷ್ಟೊಂದು ಸಂಬಳ ಪಡೆಯುತ್ತಿರುವವರು. ಅವರು ಜೂನ್‌ 2ರಂದು ವಿಶ್ವಬ್ಯಾಂಕ್‌ನ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವರದಿ ಪ್ರಕಾರ 2021ರಲ್ಲಿ ಅಜಯ್‌ ಬಾಂಗಾ ಅವರ ನಿವ್ವಳ ಆಸ್ತಿ ಮೌಲ್ಯವು 206 ಅಮೆರಿಕನ್‌ ಡಾಲರ್‌(17 ಬಿಲಿಯನ್‌) ಆಗಿದೆ.

ಅಜಯ್‌ ಬಾಂಗಾ ಮಾಸ್ಟರ್‌ ಕಾರ್ಡ್‌ನಲ್ಲಿ 113,123,489 ಅಮೆರಿಕನ್‌ ಡಾಲರ್‌ ಷೇರು ಹೊಂದಿದ್ದಾರೆ. ಅದರಂತೆ ಅಜಯ್‌ ಬಾಂಗಾ 23,250,000(1.92 ಬಿಲಿಯನ್‌) ಅಮೆರಿಕನ್‌ ಡಾಲರ್‌ ಮೊತ್ತದಷ್ಟು ವೇತನವನ್ನು ಹೊಂದಿದ್ದಾರೆ. ಅಂದರೆ ಅವರು ಪ್ರತಿದಿನ 5.2 ಮಿಲಿಯನ್‌(52 ಲಕ್ಷ ರೂ.) ಸಂಪಾದನೆ ಮಾಡುತ್ತಿದ್ದಾರೆ ಎಂದಾಯ್ತು.

ಶೈಕ್ಷಣಿಕ ಹಿನ್ನೆಲೆ

ಅಜಯ್‌ ಬಂಗಾ ಹೈದರಾಬಾದ್‌ನ ಪಬ್ಲಿಕ್‌ ಸ್ಕೂಲ್‌ನಿಂದ ಶಾಲಾ ಶಿಕ್ಷಣವನ್ನು ಪಡೆದುಕೊಂಡಿದ್ದು, ದಿಲ್ಲಿ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಜೊತೆಗೆ ಐಐಎಂ-ಎಯ ಹಳೆವಿದ್ಯಾರ್ಥಿ. ಅವರಿಗೆ 2016ರಲ್ಲಿ ಪದ್ಮಶ್ರೀ ಗೌರವ ಕೂಡ ಲಭಿಸಿದೆ.

ವೃತ್ತಿ ಜೀವನ

ಅಜಯ್‌ ಬಂಗಾ 1981ರಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದು, ಪೆಪ್ಸಿಕೋ ಕಂಪೆನಿಯಲ್ಲಿಯೂ ಕೆಲಸ ಮಾಡಿದ್ದಾರೆ. ಜೊತೆಗೆ ಅವರು ಸಿಟಿ ಗ್ರೂಪ್‌ನಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಅಜಯ್‌ ಭಾರತದಲ್ಲಿ ಕೆಎಫ್‌ಸಿ ಹಾಗೂ ಪಿಜಾ ಹಟ್‌ ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2010 ರಲ್ಲಿ ಮಾಸ್ಟರ್‌ಕಾರ್ಡ್‌ನ ಸಿಇಒ ಹಾಗೂ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 2020ರಲ್ಲಿ ಅಜಯ್‌ ಬಂಗಾ ಇಂಟರ್‌ನ್ಯಾಷನಲ್‌ ಚೇಂಬರ್‌ ಆಫ್‌ ಕಾಮರ್ಸ್‌ (ಐಸಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಪ್ರಸ್ತುತ ಅಜಯ್‌ ಬಂಗಾ ಪ್ರೈವೆಟ್‌ ಇಕ್ವಿಟಿ ಕಂಪೆನಿಯಾದ ಜನರಲ್‌ ಅಟ್ಲಾಂಟಿಕಾದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *