ಐಸಿಸಿ ಹೊಸ ಹಣಕಾಸು ಮಾದರಿಯಲ್ಲಿ ಬಿಸಿಸಿಐ ಬಾಸ್ – ಲೆಕ್ಕಕ್ಕೇ ಇಲ್ಲ ಆಸೀಸ್, ಇಂಗ್ಲೆಂಡ್ : ಬಿಸಿಸಿಐ ಆದಾಯ ಪಿಸಿಬಿಗಿಂತ 7 ಪಟ್ಟು ಹೆಚ್ಚು..!!

ಐಸಿಸಿ ಹೊಸ ಹಣಕಾಸು ಮಾದರಿಯಲ್ಲಿ ಬಿಸಿಸಿಐ ಬಾಸ್ – ಲೆಕ್ಕಕ್ಕೇ ಇಲ್ಲ ಆಸೀಸ್, ಇಂಗ್ಲೆಂಡ್ : ಬಿಸಿಸಿಐ ಆದಾಯ ಪಿಸಿಬಿಗಿಂತ 7 ಪಟ್ಟು ಹೆಚ್ಚು..!!

ನ್ಯೂಸ್ ಆ್ಯರೋ‌ : ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಐಸಿಸಿ ವಾರ್ಷಿಕ 1,889 ಕೋಟಿ ರೂ. ಪಾವತಿಸಲಿದೆ. ಈ ಮೂಲಕ ಭಾರತದ ಕ್ರಿಕೆಟ್ ಮಂಡಳಿಯ ಬ್ಯಾಂಕ್ ಬ್ಯಾಲೆನ್ಸ್ ಇನ್ನಷ್ಟು ಹೆಚ್ಚಲಿದೆ.

ಐಸಿಸಿ ತನ್ನ ನೂತನ ಹಣಕಾಸು ಮಾದರಿ ಬಿಡುಗಡೆ ಮಾಡಿದ್ದು, ವಾರ್ಷಿಕ ಆದಾಯ 4,925 ಕೋಟಿ ರೂ. ಎಂದು ತಿಳಿದು ಬಂದಿದೆ. ಈ ಪೈಕಿ ಬಿಸಿಸಿಐ ಅತೀ ಹೆಚ್ಚು ಅಂದರೆ ಒಟ್ಟು ಗಳಿಕೆಯ ಶೇ. 38.5ರಷ್ಟು ಪಾಲು ಪಡೆಯಲಿದೆ. ಇದು ನಾಲ್ಕು ವರ್ಷ(2024-2027)ಗಳ ಹಣಕಾಸು ಮಾದರಿಯಾಗಿದೆ.

ಬಿಸಿಸಿಐ ನಂತರ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿ ಹೆಚ್ಚು ಗಳಿಸುತ್ತವೆ. ಇಂಗ್ಲೆಂಡ್ 339 ಕೋಟಿ ರೂ., ಆಸ್ಟ್ರೇಲಿಯಾ 308 ಕೋಟಿ ರೂ. ಪಡೆಯಲಿದೆ.

ಬಿಸಿಸಿಐಗೆ ಪಾಕ್ ಕ್ರಿಕೆಟ್ ಮಂಡಳಿಗಿಂತ 7 ಪಟ್ಟು ಹೆಚ್ಚು ಆದಾಯ

ಇನ್ನು ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ ಟಾಪ್ ಗಳಿಕೆ ತಂಡಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಪಾಕಿಸ್ತಾನದ ಒಟ್ಟು ಗಳಿಕೆಯು ಸುಮಾರು 283 ಕೋಟಿ ರೂ. ಅಂದರೆ ಪಾಕ್ ಕ್ರಿಕೆಟ್ ಮಂಡಳಿಗಿಂತ ಬಿಸಿಸಿಐ ಸುಮಾರು 7 ಪಟ್ಟು ಹೆಚ್ಚು ಆದಾಯ ಗಳಿಸಲಿದೆ.

ಈ ಮಧ್ಯೆ ಐಸಿಸಿಯ ಹೊಸ ಹಣಕಾಸು ಮಾದರಿಯು ಎಲ್ಲಾ ರಾಷ್ಟ್ರೀಯ ಕ್ರಿಕೆಟ್ ಮಂಡಳಿಗಳಿಂದ ಇನ್ನೂ ಪ್ರತಿಕ್ರಿಯೆಯನ್ನು ಪಡೆದಿಲ್ಲ. ಒಮ್ಮತ ಪಡೆದ ನಂತರ, ಹಣಕಾಸು ಮಾದರಿಯ ಬಗ್ಗೆ ಐಸಿಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *