ಬಿಎಸ್‌ಎನ್ಎಲ್ ಘೋಷಣೆಗೆ ಬೆಚ್ಚಿದ ಅಂಬಾನಿ; ಇನ್ಮುಂದೆ ಕರ್ನಾಟಕದದಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನೆ!

Bad news for Mukesh Ambani
Spread the love

ನ್ಯೂಸ್ ಆ್ಯರೋ: ಭಾರತದ ಟೆಲಿಕಾಂ ಸೇವೆಗಳ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಬಿಎಸ್ಎನ್ಎಲ್ ಮೈಕೊಡವಿಕೊಂಡು ನಿಂತಿದೆ. ಇದು ಪ್ರತಿಸ್ಪರ್ಧಿಗಳ ಎದೆಬಡಿತ ಹೆಚ್ಚಿಸಿದೆ. ದುಬಾರಿ ರೀಚಾರ್ಜ್‌ನಿಂದ ಹಲವರು ಬಿಎಸ್ಎನ್ಎಲ್‌ಗೆ ಪೋರ್ಟ್ ಆಗಿದ್ದರು.

ಇತ್ತ ಬಿಎಸ್‌ಎನ್ಎಲ್ 4ಜಿ ಸೇವೆ ಪರಿಚಯಿಸಿ ಮತ್ತಷ್ಟು ಗ್ರಾಹಕರನ್ನು ಸೆಳೆದಿದೆ. ಇದರ ನಡುವೆ ಇದೀಗ ಬಿಎಸ್‌ಎನ್ಎಲ್ ತನ್ನ 25ನೇ ಸಂಸ್ಥಾಪದನಾ ದಿನ ಆಚರಿಸಿದೆ. ಈ ವೇಳೆ ಮಾಡಿದ ಘೋಷಣೆಯೊಂದು ಟೆಲಿಕಾಂ ಕಂಪನಿಗಳ ನಿದ್ದಿಗೆಡಿಸಿದೆ. ಅದರಲ್ಲೂ ಪ್ರಮುಖವಾಗಿ ಮುಕೇಶ್ ಅಂಬಾನಿಯ ರಿಲಯನ್ಸ್ ಜಿಯೋ ಕಂಗಾಲಾಗಿದೆ. ಕಾರಣ “ಬಿಎಸ್‌ಎನ್ಎಲ್ ಇದೀಗ ಕರ್ನಾಟಕ ಮೂಲದ ಕಾರ್ಬನ್ ಮೊಬೈಲ್ಸ್ ಕಂಪನಿ ಜೊತೆ ಸೇರಿ 4ಜಿ ಮೊಬೈಲ್ ಉತ್ಪಾದಿಸುವುದಾಗಿ” ಘೋಷಿಸಿದೆ.

ರಿಲಯನ್ಸ್ ಜಿಯೋ ಈಗಾಗಲೇ ಈ ಉದ್ಯಮದಲ್ಲಿ ತೊಡಗಿಸಿದೆ. ರಿಯನ್ಸ್ ಜಿಯೋ ಹ್ಯಾಂಡ್‌ಸೆಟ್, ಜಿಯೋ ನೆಕ್ಸ್ಟ್ ಸೇರಿದಂತೆ ಜಿಯೋ ಇನ್‌ಬಿಲ್ಟ್ ಸಿಮ್ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಜಿಯೋ ಜೊತೆಗೆ ಹ್ಯಾಂಡ್‌ಸೆಟ್ ಮೂಲಕವೂ ತನ್ನ ಗ್ರಾಹಕರ ಸಂಖ್ಯೆಯನ್ನೂ ಹಾಗೂ ನೆಟ್‌ವರ್ಕ್ ಹೆಚ್ಚಿಸಿದೆ. ಇದೀಗ ಬಿಎಸ್‌ಎನ್‌ಎಸ್ ಇದೇ ಮಾದರಿಯಲ್ಲಿ ಆದರೆ ಹೊಸ ರೂಪ ಹಾಗೂ ಹೊಸ ತಂತ್ರಜ್ಞಾನದಲ್ಲಿ 4ಜಿ ಮೊಬೈಲ್ ಹ್ಯಾಂಡ್‌ಸೆಟ್ ಬಿಡುಗಡೆ ಮಾಡುತ್ತಿದೆ.

ಕರ್ನಾಟಕ ಮೂಲದ ಕಾರ್ಬನ್ ಕಂಪನಿ ಜೊತೆಗೆ ಕೈಜೋಡಿಸಿರುವ ಬಿಎಸ್‌ಎನ್ಎಲ್ 4ಜಿ ಮೊಬೈಲ್ ಉತ್ಪಾದಿಸಲಿದೆ. ವಿಶೇಷ ಅಂದರೆ ಈ ಫೋನ್‌ಗಳು ಜಿಯೋ ಫೋನ್‌ಗಳಿಂದ ಕಡಿಮೆ ಬೆಲೆಯಲ್ಲಿ ಲಭ್ಯವಿರಲಿದೆ ಎಂದು ಘೋಷಿಸಿದೆ. ಬಿಎಸ್‌ಎನ್ಎಲ್ ಸಿಮ್ , ಹೈಸ್ಪೀಡ್ ಇಂಟರ್ನೆಟ್ ಜೊತೆಗೆ ಅತ್ಯುತ್ತಮ ಬಾಳಿಕೆಯ ಹ್ಯಾಂಡ್‌ಸೆಟ್ ಅತೀ ಕಡಿಮೆ ಬೆಲೆಯಲ್ಲಿ ಬಿಎಸ್‌ಎನ್ಎಲ್ ನೀಡಲಿದೆ ಎಂದಿದೆ. ಇದಕ್ಕಾಗಿ ಕಾರ್ಬನ್ ಮೊಬೈಲ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ದೇಶದ ಮೂಲೆ ಮೂಲೆಯಲ್ಲಿ 4ಜಿ ನೆಟ್‌ವರ್ಕ್ ಫೋನ್ ಸೇವೆ ಸಿಗುವಂತಾಗಬೇಕು. ಕೈಗೆಟುಕುವ ದರದಲ್ಲಿ ಈ ಸೇವೆ ಸಿಗಬೇಕು. ಇದಕ್ಕಾಗಿ ಈ ಮಹತ್ವದ ಒಪ್ಪಂದ ಮಾಡಿಕೊಂಡಿದ್ದೇವೆ. ಅತ್ಯುತ್ತಮ ನೆಟ್‌ವರ್ಕ್ ಜೊತೆ ಬಿಎಸ್‌ಎನ್ಎಲ್ ಇನ್‌ಬಿಲ್ಟ್ ಸಿಮ್ ಹೊಂದಿದ ಬಿಎಸ್‌ಎನ್ಎಲ್ ಫೋನ್ ಕೂಡ ಸಿಗಲಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಬಿಎಸ್‌ಎನ್ಎಲ್ ಹೇಳಿದೆ. ಬಿಎಸ್‌ಎನ್ಎಲ್ ಒಪ್ಪಂದ ಮುಕೇಶ್ ಅಂಬಾನಿ ಉದ್ಯಮಕ್ಕೆ ಹೊಡೆತ ನೀಡಲಿದೆ. ಈಗಾಲೇ ಗ್ರಾಹಕರು ಬಿಎಸ್‌ಎನ್ಎಲ್ ನೆಟ್‌ವರ್ಕ್‌ಗೆ ಪೋರ್ಟ್ ಆಗುವ ಮೂಲಕ ದುಬಾರಿ ರಿಚಾರ್ಜ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!