ಅತ್ತ ಫಿನಾಲೆ ವಾರಕ್ಕೆ ತ್ರಿಮೂರ್ತಿಗಳ ಎಂಟ್ರಿ; ಇತ್ತ ಈ ವಾರ ದೊಡ್ಮನೆಯಿಂದ ಇಬ್ಬರಿಗೆ ಗೇಟ್ ಪಾಸ್
ನ್ಯೂಸ್ ಆ್ಯರೋ: ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಇನ್ನು ಒಂದೇ ವಾರ ಬಾಕಿ ಇದೆ. ಹೀಗಿರುವಾಗ ಬಿಗ್ ಬಾಸ್ ಮನೆಯಲ್ಲಿ ಉಳಿಯೋರು ಯಾರು? ಹೊರಗೆ ಬರೋರು ಯಾರು ಅನ್ನೋದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಹನುಮಂತ, ಧನರಾಜ್, ತ್ರಿವಿಕ್ರಮ್, ಮಂಜು, ರಜತ್, ಮೋಕ್ಷಿತಾ, ಭವ್ಯಾ, ಗೌತಮಿ ಮಧ್ಯೆ ಕಟ್ಟ ಕಡೆಯ ಎಲಿಮಿನೇಷನ್ ಟಾಸ್ಕ್ ನಡೆದಿದೆ. 8 ಸ್ಪರ್ಧಿಗಳಲ್ಲಿ ಈ ವಾರಂತ್ಯಕ್ಕೆ ಇಬ್ಬರು ಔಟ್ ಆಗೋದು ಖಚಿತ ಎನ್ನಲಾಗಿದೆ. ಹನುಮಂತ ಅಲ್ಟಿಮೇಟ್ ಕ್ಯಾಪ್ಟನ್ ಆಗಿರೋದ್ರಿಂದ ಡೈರೆಕ್ಟ್ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದರು. ಹನುಮಂತ ಅವರ ಜೊತೆ ಇದೀಗ ಮತ್ತಿಬ್ಬರು ಸ್ಪರ್ಧಿಗಳು ನೇರವಾಗಿ ಫಿನಾಲೆ ವಾರಕ್ಕೆ ಹೋಗುವ ಬಂಪರ್ ಅವಕಾಶ ಪಡೆದುಕೊಂಡಿದ್ದಾರೆ.
ಬಿಗ್ ಬಾಸ್ ಕ್ಯಾಪ್ಟನ್ ಹನುಮಂತುಗೆ ಈ ಸೀಸನ್‌ನ ಉತ್ತಮ ಸ್ಪರ್ಧಿಯನ್ನು ನೀವು ನಾಮಿನೇಷನ್‌ನಿಂದ ಪಾರು ಮಾಡಬೇಕು. ನಿಮ್ಮ ಆಯ್ಕೆಯನ್ನು ಯೋಚಿಸಿ ಘೋಷಿಸಿ ಎನ್ನಲಾಗಿತ್ತು. ಆಗ ಕ್ಯಾಪ್ಟನ್ ಹನುಮಂತ ಅವರು ಬಿಗ್ ಬಾಸ್ ನಾನು ಮೋಕ್ಷಿತಾಕ್ಕನ ನಾಮಿನೇಷನ್‌ನಿಂದ ಪಾರು ಮಾಡುತ್ತಿದ್ದೇನೆ ಎಂದು ಘೋಷಣೆ ಮಾಡುತ್ತಾರೆ.
ಹನುಮಂತು ಅವರ ಆಯ್ಕೆಯಿಂದಾಗಿ ಮೋಕ್ಷಿತಾ ಅವರು ಈ ವಾರದ ನಾಮಿನೇಷನ್‌ನಿಂದ ಪಾರಾಗಿ ಬಿಗ್ ಬಾಸ್ ಫಿನಾಲೆ ವಾರವನ್ನು ತಲುಪಿದ್ದಾರೆ. ಇನ್ನು ಮನೆಯ ಸ್ಪರ್ಧಿಗಳಲ್ಲಿ ನಾಮಿನೇಷನ್‌ಗೆ ಆಯ್ಕೆ ಮಾಡದ ಹಿನ್ನೆಲೆಯಲ್ಲಿ ತ್ರಿವಿಕ್ರಮ್ ಅವರು ಈ ವಾರದ ಎಲಿಮಿನೇಷನ್‌ನಿಂದ ಬಚಾವ್ ಆಗಿದ್ದಾರೆ. ಬಿಗ್ ಬಾಸ್ ಸೀಸನ್ 11ರ ಫಿನಾಲೆ ವಾರಕ್ಕೆ ಹನುಮಂತು, ತ್ರಿವಿಕ್ರಮ್, ಮೋಕ್ಷಿತಾ ಅವರು ಎಂಟ್ರಿ ಕೊಟ್ಟಿದ್ದಾರೆ.
ಇತ್ತ ಗೌತಮಿ, ರಜತ್, ಮಂಜು, ಭವ್ಯ ಹಾಗೂ ಧನರಾಜ್ ನಾಮಿನೇಟ್ ಆಗಿದ್ದಾರೆ. ನಾಮಿನೇಟ್ ಆದವರಲ್ಲಿ ಇಬ್ಬರಿಗೆ ಗೇಟ್ ಪಾಸ್ ಕೊಟ್ಟರೇ ಕೊನೆ ವಾರದಲ್ಲಿ 6 ಸ್ಪರ್ಧಿಗಳು ಇರಲಿದ್ದಾರೆ. ಈ 6 ಸ್ಪರ್ಧಿಗಳಲ್ಲಿ ಮತ್ತೆ ಒಬ್ಬರು ಮನೆ ಖಾಲಿ ಮಾಡುತ್ತಾರೆ. ಕೊನೆಯಲ್ಲಿ 5 ಸ್ಪರ್ಧಿಗಳು ಮಾತ್ರ ಉಳಿಯುತ್ತಾರೆ. ಬಿಗ್ ಬಾಸ್ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಯಾರು ಮನೆ ಬಿಟ್ಟು ಬರುತ್ತಾರೆ ಎನ್ನುವುದು ಕಾಡುತ್ತಿದೆ. ಇದರಲ್ಲಿ ಇಬ್ಬರು ಇಂದೇ ಜಾಗ ಖಾಲಿ ಮಾಡ್ತಾರಾ ಅಥವಾ ಇವತ್ತು ಒಬ್ಬರು, ಭಾನುವಾರ ಅಂದರೆ ನಾಳೆ ಒಬ್ಬರು ಹೊರ ಬರುತ್ತಾರಾ ಎಂದು ಕಾದು ನೋಡಬೇಕಿದೆ.
Leave a Comment