ಬೆಂಗಳೂರಲ್ಲಿ 8 ತಿಂಗಳ ಮಗುವಿನಲ್ಲಿ HMPV ವೈರಸ್ ಪತ್ತೆ: ಭಾರತದಲ್ಲಿ ಮೊದಲ ಪ್ರಕರಣ

New Project 2 1
Spread the love

ನ್ಯೂಸ್ ಆ್ಯರೋ: ಕೊರೋನಾ ಬಳಿಕ ಚೀನಾದಲ್ಲಿ ಹ್ಯೂಮನ್ ಮೆಟಾನ್ಯೂಮೋ ವೈರಸ್ ಸ್ಫೋಟಗೊಂಡಿದೆ. ದಿನದಿಂದ ದಿನಕ್ಕೆ ಚೀನಾದಲ್ಲಿ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಮಲೆಷಿಯಾದಲ್ಲೂ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೆ ಕೋವಿಡ್ ರೀತಿಯ ಭೀತಿ ಎದುರಾಗುತ್ತಿದ್ದಂತೆ ಇದೀಗ ಬೆಂಗಳೂರಿನಲ್ಲಿ ಮೊದಲ HMPV ವೈರಸ್ ಪ್ರಕರಣ ಪತ್ತೆಯಾಗಿದೆ. 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. ಜ್ವರ ಬಂದ ಹಿನ್ನಲೆಯಲ್ಲಿ ಮಗುವನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ರಕ್ಷ ಪರೀಕ್ಷೆಯಲ್ಲಿ HMPV ವೈರಸ್ ಪತ್ತೆಯಾಗಿದೆ. ಇದು ಕರ್ನಾಟಕದ ಹಾಗೂ ಭಾರತದ ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಇತರೆಡೆ HMPV ವೈರಸ್ ಪ್ರಕರಣ ವದಿಯಾಗಿಲ್ಲ.

ಕಳೆದೆ ಕೆಲ ದಿನಗಳಿಂದ 8 ತಿಂಗಳ ಮಗುವಿನಲ್ಲಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. HMPV ರೋಗ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಆಸ್ಪತ್ರೆ ವೈದ್ಯರು ಮಗುವಿನ ರಕ್ಷ ಪರೀಕ್ಷೆ ಮಾಡಿದ್ದಾರೆ. ಈ ವೇಳೆ HMPV ವೈರಸ್ ಪತ್ತೆಯಾಗಿದೆ. ಮೊದಲ ಪ್ರಕರಣ ವರದಿಯಾಗುತ್ತಿದ್ದಂತೆ ಆರೋಗ್ಯ ಇಲಾಖೆ ಮತ್ತಷ್ಟು ಅಲರ್ಟ್ ಆಗಿದೆ. HMPV ವೈರಸ್‌ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಈ ವೈರಸ್‌ ತಗುಲಿದರೆ ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ. ಸದ್ಯ ಆತಂಕದ ಪರಿಸ್ಥಿತಿ ಇಲ್ಲ. ಮಕ್ಕಳು ಹಾಗೂ ಹಿರಿಯರು ಹೆಚ್ಚು ಕಾಳಜಿ ವಹಿಸುವಂತೆ ಸೂಚಿಸಿದ್ದಾರೆ.

HMPV ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಚೀನಾ, ಮಲೆಷಿಯಾದಲ್ಲಿ ಪತ್ತೆಯಾದ ವೈರಸ್ ಅಷ್ಟೇ ವೇಗದಲ್ಲಿ ಇದೀಗ ಬೆಂಗಳೂರಲ್ಲೂ ಪತ್ತೆಯಾಗಿದೆ. ಶೀತ, ಜ್ವರ, ಕೆಮ್ಮು, ಉಸಿರಾಟ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಲಾಗಿದೆ. ವೈರಸ್ ಕುರಿತು ಆತಂಕ ಇಟ್ಟಕೊಳ್ಳುವ ಅಗತ್ಯವಿಲ್ಲ. ಚಳಿಗಾಲದಲ್ಲಿ ಈ ರೀತಿ ವೈರಸ್ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಮುನ್ನಚ್ಚರಿಕೆ ಉತ್ತಮ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಚೀನಾದಲ್ಲಿ ಡಿಸೆಂಬ್ 2025ರ ಅಂತ್ಯದಲ್ಲಿ HMPV ವೈರಸ್ ಸ್ಫೋಟಗೊಂಡಿದೆ. ಚೀನಾದ ಕೆಲ ಪ್ರಾಂತ್ಯಗಳಲ್ಲಿ ಪ್ರತಿ ದಿನ ಭಾರಿ ಸಂಖ್ಯೆಯಲ್ಲಿ ವೈರಸ್ ಪತ್ತೆಯಾಗುತ್ತಿದೆ. ಕೆಲ ಆಸ್ಪತ್ರೆಗಳು ಭರ್ತಿಯಾಗಿದೆ. ಕೋವಿಡ್ ಅಪ್ಪಳಿಸಿದ 5 ವರ್ಷದ ಬಳಿಕ ಚೀನಾದಿಂದಲೇ ಮತ್ತೊಂದು ವೈರಸ್ ಸ್ಫೋಟಗೊಂಡಿತ್ತು. ಚೀನಾ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಕೋವಿಡ್ ರೀತಿಯ ಸಮಸ್ಯೆ ಎದುರಾಗದಂತೆ ಭಾರತ ಸೇರಿದಂತೆ ಹಲವು ರಾಷ್ಟ್ರಗಲು ಮುಂಜಾಗ್ರತೆ ವಹಿಸಿದೆ. ಭಾರತದ ಕೇಂದ್ರ ಆರೋಗ್ಯ ಇಲಾಖೆ ಅಂತಾರಾಷ್ಟ್ರೀಯ ಆರೋಗ್ಯ ಎಜೆನ್ಸಿಗಳ ಜೊತೆ ನಿರಂತರ ಸಂಪರ್ಕದಲ್ಲಿದೆ. ವೈರಸ್ ಕುರಿತು ಹೆಚ್ಚಿನ ಅಧ್ಯಯನ ಮಾಹಿತಿಗಳನ್ನು ಪಡೆಯುತ್ತಿದೆ. ಇತ್ತ ಮುನ್ನೆಚ್ಚಿರಿಕಾ ಕ್ರಮಗಳನ್ನು ಪಾಲಿಸಲು ಸೂಚಿಸಿದೆ.

ದೆಹಲಿಯಲ್ಲಿ ಆರೋಗ್ಯ ಇಲಾಖೆ ಜನತೆಗೆ ಮಾರ್ಗಸೂಚಿ ಪ್ರಕಟಿಸಿದೆ. ಕೈಗಳನ್ನು ಸೋಪ್‌ನಿಂದ ತೊಳೆದು ಶುಚಿಯಾಗಿಡಲು ಸೂಚಿಸಿದೆ.ಜನಸಂದಣಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಉತ್ತಮ ಎಂದಿದೆ. ಅನಗತ್ಯ ಓಡಾಡಕ್ಕೆ ಕಡಿವಾಣ, ಕೆಮ್ಮುವಾಗ ಬಾಯಿ ಹಾಗೂ ಮೂಗು ಮುಚ್ಚಿಕೊಳ್ಳುವಂತೆ ಸೂಚಿಸಿದೆ. HMPV ವೈರಸ್‌ನ ಯಾವುದೇ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಿದೆ.

Leave a Comment

Leave a Reply

Your email address will not be published. Required fields are marked *

error: Content is protected !!