ʼನನಗೆ ಕನ್ನಡ ಕಲಿಯುವ ಅವಶ್ಯಕತೆಯಿಲ್ಲʼ; ಬೆಂಗಳೂರಿನಲ್ಲಿದ್ದುಕೊಂಡೆ ಪರಭಾಷಿಕನ ದುರಹಂಕಾರದ ಮಾತು

Kannada
Spread the love

ನ್ಯೂಸ್ ಆ್ಯರೋ: ಕೆಲವರು ಕನ್ನಡ ಚೆನ್ನಾಗಿ ಗೊತ್ತಿದ್ರೂ ಕೂಡಾ ಶೋಕಿಗಾಗಿ ಇಂಗ್ಲೀಷ್‌ ಭಾಷೆಯನ್ನೇ ಮಾತನಾಡುತ್ತಾರೆ. ಇನ್ನೂ ಉದ್ಯೋಗವನ್ನರಸುತ್ತಾ ಕರ್ನಾಟಕಕ್ಕೆ ಬಂದು ಬದುಕು ಕಟ್ಟಿಕೊಂಡ ಅದೆಷ್ಟೋ ಪರಭಾಷಿಕರು ಕನ್ನಡ ಕಲಿಯುವ ಪ್ರಯತ್ನವನ್ನು ಕೂಡಾ ಮಾಡುತ್ತಿಲ್ಲ. ಇದಕ್ಕೆ ಉದಾಹರಣೆಯಂತಿರುವ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಪರಭಾಷಿಕನೊಬ್ಬ 12 ವರ್ಷ ಬೆಂಗಳೂರಿನಲ್ಲಿದ್ದರೂ ನಾನ್ಯಾಕೆ ಕನ್ನಡ ಕಲಿಬೇಕು, ನನಗೆ ಕನ್ನಡ ಕಲಿಯುವ ಅವಶ್ಯಕತೆಯಿಲ್ಲ ಎಂದು ಸೊಕ್ಕಿನ ಮಾತುಗಳನ್ನಾಡಿದ್ದಾರೆ. ಈತನ ಈ ಮಾತಿಗೆ ಕನ್ನಡಿಗರು ಫುಲ್‌ ಗರಂ ಆಗಿದ್ದಾರೆ.

ಕನ್ನಡಿಗ ದೇವರಾಜ್‌ ಎಂಬವರು ಈ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ವ್ಯಕ್ತಿ ಹನ್ನೆರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದಾನೆ. ಕನ್ನಡ ಕಲಿತಿಲ್ಲ, ಇವನಿಗೆ ಕನ್ನಡದ ಅವಶ್ಯಕತೆ ಇಲ್ಲವಂತೆ, ಕನ್ನಡಿಗರು ಮಾತ್ರ ಹಿಂದಿ ಕಲಿಯಬೇಕಂತೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಪರಭಾಷಿಕನೊಬ್ಬ ಕನ್ನಡ ನಾಡಿನಲ್ಲಿ ಇದ್ದುಕೊಂಡೇ ನನಗೆ ಕನ್ನಡ ಕಲಿಯುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಿರುವ ದೃಶ್ಯವನ್ನು ಕಾಣಬಹುದು.

ಕನ್ನಡಿಗ ದೇವರಾಜ್‌ ಅವರು ಬೆಂಗಳೂರಿನಲ್ಲಿ ಸುಮಾರು 12 ವರ್ಷಗಳಿಂದ ವಾಸವಿರುವ ಪರಬಾಷಿಕನೊಬ್ಬನನ್ನು ಮಾತನಾಡಿಸಿದ್ದು, ಆ ಸಂದರ್ಭದಲ್ಲಿ ನಿಮಗೆ ಕನ್ನಡ ಬರಲ್ವಾ, ನೀವು ಕನ್ನಡ ಕಲಿಬೇಕು ಅಲ್ವಾ, ಎಲ್ಲಾ ಭಾಷೆ, ಸಂಸ್ಕೃತಿಗೆ ಗೌರವ ಕೊಡ್ಬೇಕಲ್ವಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆ ವ್ಯಕ್ತಿ ನನಗೆ ಕೂಡಾ ಎಲ್ಲಾ ಭಾಷೆಗಳ ಮೇಲೆ ಗೌರವವಿದೆ, ಆದ್ರೆ ನನಗೆ ಕನ್ನಡ ಕಲಿಯುವ ಅವಶ್ಯಕತೆ ಇಲ್ಲ, ಕನ್ನಡ ಕಲಿಯಿರಿ ಎಂದು ನೀವು ಹೇಳಬೇಕಾಗಿಲ್ಲ, ಕನ್ನಡ ಕಲಿಯುವುದು ಬಿಡುವುದು ನನ್ನ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಹೇಳಿದ್ದಾನೆ.

ಅಕ್ಟೋಬರ್‌ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 46 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪರಭಾಷಿಕರಿಗೆ ಕನ್ನಡ ಕಲಿಸುವ ಮುಂಚೆ ನಮ್ಮವರು ಕನ್ನಡ ಮಾತನಾಡ್ತಿದ್ದಾರಾ ನೋಡಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼತಪ್ಪು ನಮ್ಮದೆ ಪರಭಾಷಿಕರು ಬಂದಾಗ ಕನ್ನಡ ಮಾತನಾಡದೇ ಅವರ ಭಾಷೆಯಲ್ಲೇ ಮಾತನಾಡ್ತೀವಿ ಅಲ್ವಾʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!