ಲಡಾಖ್ನಲ್ಲಿ ಹುತಾತ್ಮನಾದ ಬೆಳಗಾವಿಯ ವೀರ ಯೋಧ; ಸೈನಿಕನನ್ನು ನೋಡಲು ಬಾರದ ನಾಯಕರು
ನ್ಯೂಸ್ ಆ್ಯರೋ: ಜಮ್ಮು-ಕಾಶ್ಮೀರದ ಲಡಾಖ್ನಲ್ಲಿ ಗುಡ್ಡ ಕುಸಿದು ಬೆಳಗಾವಿ ಮೂಲದ ಯೋಧರೊಬ್ಬರು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಇರಣಟ್ಟಿ ಗ್ರಾಮದ ಮಹೇಶ್ ಅವರು ಡಿಸೆಂಬರ್ 14ರಂದು ಲಡಾಖ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಗುಡ್ಡ ಕುಸಿದು ಮೃತಪಟ್ಟಿದ್ದಾರೆ. ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವ ಹೊರತೆಗೆದಿದ್ದರು.
ಸೈನಿಕ ಮಹೇಶ್ ಅವರ ಪಾರ್ಥಿವ ಶರೀರ ಮಂಗಳವಾರ (ಡಿಸೆಂಬರ್ 17) ಸಂಜೆ ಇರಣಟ್ಟಿ ಗ್ರಾಮಕ್ಕೆ ಆಗಮಿಸಿತು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಗೌರವ ಸಮರ್ಪಿಸಿದರು. ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ಮಹೇಶ್ ಅವರ ಅಂತ್ಯಸಂಸ್ಕಾರ ನೆರವೇರಿತು.
ಎರಡು ತಿಂಗಳ ಹಿಂದೆಯಷ್ಟೇ ಸೈನಿಕ ಮಹೇಶ್ ಅವರ ನಿಶ್ಚಿತಾರ್ಥ ಕೂಡ ಆಗಿದ್ದು, ಮದುವೆ ದಿನಾಂಕ ಕೂಡ ನಿಗದಿಯಾಗಿತ್ತು. ಆದರೆ ಲಡಾಖ್ನಲ್ಲಿ ನಡೆದ ದುರಂತದಲ್ಲಿ ಮಹೇಶ್ ಪ್ರಾಣ ತೆತ್ತಿದ್ದಾರೆ.
ಆದರೆ ಈ ದುಃಖದ ಹೊತ್ತಲ್ಲಿ ಯಾವ ಜನಪ್ರತಿನಿಧಿ ಕಾಣಲೇ ಇಲ್ಲ. ಇಡೀ ರಾಜ್ಯದ ರಾಜಕೀಯ ನಾಯಕರು ಬೆಳಗಾವಿ ಅಧಿವೇಶನದಲ್ಲಿ ಬೀಡು ಬಿಟ್ಟಿದೆ. ಆದ್ರೆ, ಯಾವೊಬ್ಬ ನಾಯಕ ಕೂಡ ಇತ್ತ ತಿರುಗೀ ಕೂಡ ನೋಡಿಲ್ಲ. ರಾಜಕೀಯ ಕೆಸರೆಚಾಟದಲ್ಲಿ ಬ್ಯುಸಿಯಾಗಿರೋ ರಾಜಕಾರಣಿಗಳು, ರೈತರು ಮತ್ತು ಸೈನಿಕರ ಮೇಲಿನ ಪ್ರೀತಿ ಅನುಕಂಪ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಈ ಬಲಿದಾನಕ್ಕೆ ಇದೆಂಥ ಅಗೌರವ ಅನ್ನೋ ಬೇಸರವನ್ನ ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟ ಹೊರಹಾಕಿದೆ.
Leave a Comment