Duleep Trophy 2024 : ನಾಲ್ಕು ಸಮತೋಲಿತ ತಂಡಗಳನ್ನು ಪ್ರಕಟಿಸಿದ ಬಿಸಿಸಿಐ – ಸ್ಟಾರ್ ಆಟಗಾರರು ಕಣಕ್ಕೆ, ತಂಡಗಳು ಹೇಗಿವೆ ಗೊತ್ತಾ?
ನ್ಯೂಸ್ ಆ್ಯರೋ : ಬಿಸಿಸಿಐನ ಪುರುಷರ ಕ್ರಿಕೆಟ್ ನ ಆಯ್ಕೆ ಸಮಿತಿಯು 2024-25ರ ದುಲೀಪ್ ಟ್ರೋಫಿಯ ಮೊದಲ ಸುತ್ತಿನ ತಂಡಗಳನ್ನು ಬುಧವಾರ ಪ್ರಕಟಿಸಿದೆ.
ದೇಶೀಯ ಋತುವಿನಲ್ಲಿ ಕೆಂಪು-ಚೆಂಡಿನ ಕ್ರಿಕೆಟ್‌ನ ಆರಂಭವನ್ನು ಗುರುತಿಸುವ ದುಲೀಪ್ ಟ್ರೋಫಿಯಲ್ಲಿ ಈ ಬಾರಿ ಅಂತರಾಷ್ಟ್ರೀಯ ಮಟ್ಟದ ಕೆಲವು ಅತ್ಯುತ್ತಮ ಆಟಗಾರರು ಮತ್ತು ಕೆಲವು ಯುವ ಮತ್ತು ಉದಯೋನ್ಮುಖ ಪ್ರತಿಭೆಗಳು ಭಾಗವಹಿಸಲಿದ್ದಾರೆ.
ಈ ಪಂದ್ಯಾವಳಿಯು ಆಂಧ್ರಪ್ರದೇಶದ ಅನಂತಪುರ ಮತ್ತು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 5, 2024 ರಿಂದ ಪ್ರಾರಂಭವಾಗಲಿದೆ.
ಬಾಂಗ್ಲಾದೇಶ ವಿರುದ್ಧದ ತವರು ಟೆಸ್ಟ್ ಸರಣಿಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗುವ ಆಟಗಾರರನ್ನು ದುಲೀಪ್ ಟ್ರೋಫಿಯ ಪ್ರದರ್ಶನದ ಆಧರಿಸಿ ಆರಿಸುವುದಾಗಿ ಬಿಸಿಸಿಐ ಹೇಳಿದೆ. ಹಾಗೆಯೇ ದುಲೀಪ್ ಟ್ರೋಫಿಯ ಪಂದ್ಯಗಳಿಗೆ ಆಯ್ಕೆಯಾಗಿರುವ ನಿತೀಶ್ ಕುಮಾರ್ ರೆಡ್ಡಿ ಪಾಲ್ಗೊಳ್ಳುವಿಕೆಯು ಫಿಟ್ನೆಸ್ ಗೆ ಒಳಪಟ್ಟಿರುತ್ತದೆ ಎಂದು ಬಿಸಿಸಿಐ ತಿಳಿಸಿದೆ.
ನಾಲ್ಕು ತಂಡಗಳು ಹೀಗಿವೆ..
ತಂಡ ಎ:
ಶುಬ್ಮನ್ ಗಿಲ್ (ಸಿ), ಮಯಾಂಕ್ ಅಗರ್ವಾಲ್, ರಿಯಾನ್ ಪರಾಗ್, ಧ್ರುವ ಜುರೆಲ್, ಕೆ.ಎಲ್ ರಾಹುಲ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್, ಕುಲದೀಪ್ ಯಾದವ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಖಲೀಲ್ ಅಹ್ಮದ್, ಅವೇಶ್ ಖಾನ್, ವಿದ್ವತ್ ಕಾವೇರಪ್ಪ, ಕುಮಾರ್ ಕುಶಾಗ್ರ , ಶಾಶ್ವತ್ ರಾವತ್.
ಬಿ ತಂಡ: ಅಭಿಮನ್ಯು ಈಶ್ವರನ್ (ಸಿ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ರಿಷಬ್ ಪಂತ್, ಮುಶೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ( ಫಿಟ್ನೆಸ್ ಆಧರಿಸಿ), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ಮುಖೇಶ್ ಕುಮಾರ್, ರಾಹುಲ್ ಚಾಹರ್, ಆರ್ ಸಾಯಿ ಕಿಶೋರ್, ಮೋಹಿತ್ ಅವಸ್ಥಿ , ಎನ್ ಜಗದೀಸನ್ (WK).
ಸಿ ತಂಡ: ರುತುರಾಜ್ ಗಾಯಕ್‌ವಾಡ್ (ಸಿ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಅಭಿಷೇಕ್ ಪೊರೆಲ್ (WK), ಸೂರ್ಯಕುಮಾರ್ ಯಾದವ್, ಬಿ ಇಂದ್ರಜಿತ್, ಹೃತಿಕ್ ಶೋಕೀನ್, ಮಾನವ್ ಸುತಾರ್, ಉಮ್ರಾನ್ ಮಲಿಕ್, ವೈಶಾಕ್ ವಿಜಯ್‌ಕುಮಾರ್, ಅನ್ಶುಲ್ ಕಾಂಬೋಜ್, ಹಿಮಾಂಶು ಚೌಹಾಣ್, ಮಯಾಂಕ್ ಮರ್ಕಂಡೆ, ಆರ್ಯನ್ ಜುಯಾಲ್ (WK), ಸಂದೀಪ್ ವಾರಿಯರ್.
ತಂಡ ಡಿ: ಶ್ರೇಯಸ್ ಐಯರ್ (ಸಿ), ಅಥರ್ವ ತೈಡೆ, ಯಶ್ ದುಬೆ, ದೇವದತ್ ಪಡಿಕ್ಕಲ್, ಇಶನ್ ಕಿಶನ್ (WK), ರಿಕಿ ಭುಯಿ, ಸರನ್ಶ್ ಜೈನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಆದಿತ್ಯ ಠಾಕ್ರೆ, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಆಕಾಶ್ ಸೇನ್‌ಗುಪ್ತ, ಕೆಎಸ್ ಭರತ್ (WK), ಸೌರಭ್ ಕುಮಾರ್.
Leave a Comment