₹89 ಕೋಟಿ ದುರ್ಬಳಕೆ ಆರೋಪ; ಮಾಜಿ ಸಚಿವ ಬಿ.ನಾಗೇಂದ್ರಗೆ ಬಿಗ್ ರಿಲೀಫ್
ನ್ಯೂಸ್ ಆ್ಯರೋ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಆರೋಪದಲ್ಲಿ ಬಂಧನದಲ್ಲಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. 82ನೇ CCH ಜನಪ್ರತಿನಿಧಿಗಳ ನ್ಯಾಯಾಲಯದಿಂದ ನಾಗೇಂದ್ರ ಅವರಿಗೆ ಇಂದು ಜಾಮೀನು ಮಂಜೂರು ಮಾಡಲಾಗಿದೆ.
ವಾಲ್ಮಿಕಿ ಅಭಿವೃದ್ಧಿ ನಿಗಮದ 89 ಕೋಟಿ ರೂಪಾಯಿ ಹಣ ದುರ್ಬಳಕೆ ಆರೋಪ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನ ಬಂಧನ ಮಾಡಿತ್ತು.
ವಾಲ್ಮೀಕಿ ನಿಗಮದ ಅಕ್ರಮ ಆರೋಪದಲ್ಲಿ ಬಂಧಿಸಿದ್ದ ನಾಗೇಂದ್ರ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಜನಪ್ರತಿನಿಧಿಗಳ ಕೋರ್ಟ್ ಇಂದು ಷರತ್ತು ಬದ್ಧ ಜಾಮೀನು ನೀಡಿದೆ. ಕೋರ್ಟ್‌ನ ಷರತ್ತುಗಳನ್ನು ಪೂರೈಸಿದ ಬಳಿಕ ಮಾಜಿ ಸಚಿವ ನಾಗೇಂದ್ರ ಅವರಿಗೆ ಬಿಡುಗಡೆ ಭಾಗ್ಯ ಸಿಗಲಿದೆ.
ವಾಲ್ಮೀಕಿ ನಿಗಮದ ಮೂಲ ಖಾತೆ ಬೆಂಗಳೂರಿನ ವಸಂತನಗರದ ಯೂನಿಯನ್ ಬ್ಯಾಂಕ್‌ನಲ್ಲಿದೆ. ಆದರೂ ಎಂ.ಜಿ ರಸ್ತೆಯ ಯೂನಿಯನ್ ಬ್ಯಾಂಕ್ನಲ್ಲಿ ಮತ್ತೊಂದು ಖಾತೆ ಓಪನ್ ಮಾಡಲಾಗಿದೆ. ಪತ್ರ ವ್ಯವಹಾರವಿಲ್ಲದೇ ಪ್ಯಾರಲಲ್ ಅಕೌಂಟ್ ಓಪನ್ ಮಾಡಲಾಗಿತ್ತು. ಈ ಉಪ ಖಾತಗೆ ರಾಜ್ಯ ಟ್ರೆಜರಿಯಿಂದ 187 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ ಅನ್ನೋ ಆರೋಪವಿದೆ.
Leave a Comment