ಈ ರಾಶಿಯವರು ಹಿತಶತ್ರುಗಳಿಂದ ದೂರವಿರುವುದು ಉತ್ತಮ; ಸೋಮವಾರ ಈ ರಾಶಿಗೆ ಶುಭವೇ ?

ಸಿಂಹ ರಾಶಿ: ಉದ್ಯೋಗದ ಸ್ಥಾನದಲ್ಲಿ ಶತ್ರುಗಳ ಕಾಟವು ಗೊತ್ತಾಗುವುದು. ಆರ್ಥಿಕ ವಿಚಾರಕ್ಕೆ ದಾಂಪತ್ಯದಲ್ಲಿ ಇಂದು ಕಲಹವಾಗುವುದು. ನಿದ್ರೆಯು ಸರಿಯಾಗಿ ಆಗದೇ ಕಿರಿಕಿರಿ ಎನಿಸಬಹುದು. ಎಲ್ಲರ ಮೇಲೂ ಕೋಪಗೊಳ್ಳುವಿರಿ. ಮಕ್ಕಳ ಕುರಿತು ನಿಮಗೆ ದೂರುಗಳು ಬರಬಹುದು. ಹಿತಶತ್ರುಗಳಿಂದ ದೂರವಿರುವುದು ಉತ್ತಮ. ಈ ದಿನವು ಉತ್ಸಾಹದಿಂದ ಕೆಲಸ ಮಾಡುತ್ತ ಕಳೆದುಹೋಗುವುದು. ಅತಿಯಾದ ಆಲೋಚನೆಯು ತಲೆನೋವು ತಂದೀತು. ಸಹೋದರರ ನಡುವೆ ಸಂಪತ್ತಿಗಾಗಿ ಕಲಹವಾದೀತು. ದುರಾಸೆಯಲ್ಲಿ ಸಿಕ್ಕಿಕೊಂಡು ನಷ್ಟವನ್ನು ಅನುಭವಿಸುವಿರಿ. ಬಂಧುಗಳ ಜೊತೆ ವಿನಾಕಾರಣ ಮನಸ್ತಾಪ ಆಗಬಹುದು.
ಕನ್ಯಾ ರಾಶಿ: ಕೃತಜ್ಞತೆಯನ್ನು ಬಿಡುಬುದು ಬೇಡ. ಇಂದು ನಿಮ್ಮ ಮೇಲೆ ಎಲ್ಲರಿಂದ ಆಕ್ರಮಣವಾಗಬಹುದು. ಸ್ಥಿರಾಸ್ತಿಯ ವಿಕ್ರಯದ ವಿಚಾರದಲ್ಲಿ ಏಕಮುಖವಾದ ಅಭಿಪ್ರಾಯವು ಒಳ್ಳೆಯದಲ್ಲ. ಸ್ನೇಹಿತರು ನಿಮ್ಮ ಮಾರ್ಗವನ್ನು ತಪ್ಪಿಸುವರು. ಶಿಕ್ಷಣ ಕ್ಷೇತ್ರದಲ್ಲಿ ನೀವು ಸಾಧನೆ ಮಾಡಲು, ನಿಮ್ಮ ಕಾರ್ಯವನ್ನು ಗುರುತಿಸಲು ಸಕಾಲ. ನಿಮಗೆ ಬಂದ ಅಪವಾದವನ್ನು ಜಾಣ್ಮೆಯಿಂದ ತಪ್ಪಿಸಿಕೊಳ್ಳುವಿರಿ. ಸತ್ರುಗಳಿಂದ ಅಂತರವಿರಲಿ. ನಿಮ್ಮ ಹೊಸ ಉದ್ಯಮವು ಸತತ ಪರಿಶ್ರಮದಿಂದ ಅಭಿವೃದ್ಧಿಯನ್ನು ಕಾಣುವುದು. ಪ್ರಭಾವೀ ಜನರ ಜೊತೆ ಅಂತರವನ್ನು ಇಟ್ಟುಕೊಳ್ಳಿ. ಮನೆಯವರ ವರ್ತನೆಗೆ ನಿಮಗೆ ಸಿಟ್ಟು ಬರಬಹುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧವು ಆಗಬಹುದು. ಮನಸ್ಸಿಗೆ ಹಿಡಿಸದ್ದನ್ನು ಪ್ರಯತ್ನ ಪೂರ್ವಕವಾಗಿ ಮಾಡುವುದು ಬೇಡ.
ತುಲಾ ರಾಶಿ: ಕಳೆದುಕೊಂಡಲ್ಲಿಯೇ ಹುಡುಕಿದರೆ ಸಿಗಬಹುದು. ನಿಮ್ಮನ್ನು ಗೌರವಿಸಿಲ್ಲ ಎಂಬ ಅಳುಕು ಕಾಣಿಸುಬಹುದು. ಮನಸ್ಸಿಗೆ ಹಿಡಿಸದ ಕೆಲಸವನ್ನು ಮಾಡಲು ಹಿಂಜರಿಯುವಿರಿ. ಮನಸ್ಸಿನ ಚಾಂಚಲ್ಯಕ್ಕೆ ನೀವು ಯೋಗ್ಯವಾದ ಉಪಚಾರವನ್ನು ಮಾಡುವಿರಿ. ವಿವಾಹದ ಮಾತುಕತೆಯು ನಿಮಗೆ ಸಂತೋಷವನ್ನು ನೀಡದು. ನೆರೆ ಹೊರೆಯ ಜೊತೆ ಕಲಹವಾಗುವುದು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಇರುವುದು. ಬೇರೆಯವರ ಬಗ್ಗೆ ನಿಮಗೆ ಅಸೂಯೆ ಬರಬಹುದು.ಹಿತಶತ್ರುಗಳಿಂದ ಅಂತರ ಕಾಯ್ದುಕೊಳ್ಳಿ ವಿರುದ್ಧ ವಂಚನೆಯ ಆರೋಪವು ಬರಬಹುದು. ನಿಮಗೆ ಬರುವ ಯಾವುದನ್ನೂ ನಿಯಂತ್ರಣ ಮಾಡಲಾಗದು.
ವೃಶ್ಚಿಕ ರಾಶಿ: ಒಳ್ಳೆಯ ಆಚಾರದಿಂದ ನಿಮಗೇ ಸಂತೃಪ್ತಿ ಸಿಗುವುದು. ಇಂದು ನಿಮ್ಮ ವಿದೇಶ ಪ್ರಯಾಣವು ಸಫಲವಗುವುದುಬೆಂಬ ಭರವಸೆ ಬರಲಿದೆ. ಹಣವನ್ನು ಹೊಂದಿಸಲು ನಿಮಗೆ ಕಷ್ಟವಾದೀತು. ಹಿತಶತ್ರುಗಳಿಂದ ದೂರವಿರಿ. ಸ್ಥಿರಾಸ್ತಿಗಳು ನಿಮಗೆ ಲಾಭವನ್ನು ಕೊಟ್ಟಾವು. ಇನ್ನೊಬ್ಬರಿಂದ ಏನನ್ನಾದರೂ ನಿರೀಕ್ಷಿಸಿ ಅನಂತರ ಬೇಸರಗೊಳ್ಳುವಿರಿ. ಉದ್ಯೋಗಿಗಳಿಗೆ ಸಂತೋಷದ ಸಮಾಚಾರವು ಇರುವುದು. ಬಂಧುಗಳ ಬಗ್ಗೆ ನಿಮಗೆ ಪ್ರೀತಿ ಇರುವುದು. ಅಪರಿಚಿತರು ನಿಮ್ಮ ಎಲ್ಲ ವಿಚಾರಗಳನ್ನು ಚರ್ಚಿಸುವರು. ಅನಿವಾರ್ಯವಾಗಿ ಮನೆಯಿಂದ ದೂರ ಹೋಗುವಿರಿ.
ಧನು ರಾಶಿ: ಇಂದು ನಿಮ್ಮ ದೂರದೃಷ್ಟಿಯಿಂದ ನಿಮ್ಮ ಗುರಿ ಬದಲಾಗುವುದು. ನಿರುದ್ಯೋಗಿಗಳಿಗೆ ಸ್ನೇಹಿತರಿಂದ ಸಹಕಾರವು ಸಿಗುವುದು. ಸ್ತ್ರೀಯರ ವಿಷಯದಲ್ಲಿ ನೀವು ಬಹಳ ಜಾಗರೂಕತೆಯಿಂದ ವ್ಯವಹರಿಸುವುದು ಉತ್ತಮ. ನಿಮಗೆ ಬರಬೇಕಾದ ಹಣವು ಬಾರದೇ ಹೋಗಬಹುದು. ಕೇಳಿ ಪಡೆಯಬೇಕಾದ ಸ್ಥಿತಿಯೂ ಬರಬಹುದು. ಅಜಾಡ್ಯದಿಂದ ನಿಮ್ಮ ಕಾರ್ಯವನ್ನು ಸಾಧಿಸಬಹುದು. ಆರೋಗ್ಯದಲ್ಲಿ ಆದ ವ್ಯತ್ಯಾಸದಿಂದ ನಿಮ್ಮ ಕಾರ್ಯವೂ ಮಂದಗತಿಯಲ್ಲಿ ಇಂದು ಸಾಗಬಹುದು. ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುವಿರಿ.
ಕುಂಭ ರಾಶಿ: ಗೊತ್ತಿಲ್ಲದ ವ್ಯವಹಾರದಿಂದ ನಿಮಗೆ ಮುಖಭಂಗವಾಗಬಹುದು. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ಇಂದು ಸಂಭ್ರಮದ ವಾತಾವರಣದಲ್ಲಿ ಸಮಯವನ್ನು ಕಳೆಯುವಿರಿ. ಅನಗತ್ಯ ಮಧ್ಯಪ್ರವೇಶದಿಂದ ಗೌರವ ಕಡಿಮೆಯಾಗುವುದು. ಮನೆಯ ಕೆಲಸವು ಅಧಿಕವಾಗಿ ಆಯಾಸವಾಗಬಹುದು. ನಿಮ್ಮ ಬಯಕೆಗಳನ್ನು ಪೂರೈಸಲಿಕೊಳ್ಳಲು ಇತರರ ಸಹಾಯವನ್ನು ಕೇಳುವಿರಿ. ಕಛೇರಿಯ ಕೆಲಸಗಳು ನಿಗದಿತ ಸಮಯಕ್ಕೆ ಮುಕ್ತಾಯವಾಗುವುದು.
ಮೀನ ರಾಶಿ: ನೀವು ಇಂದು ಯಾವದನ್ನೂ ಪರಿಸ್ಥಿತಿಯ ಮೇಲೆ ಅಳೆಯಲು ಹೋಗುವುದು ಬೇಡ. ಗೊಂದಲದ ಕಾರಣದಿಂದ ಯಾವುದನ್ನೂ ಪೂರ್ಣವಾಗಿ ನಿರ್ಧಾರ ಮಾಡಲಾಗಸು. ನೀವು ಸ್ಥಾನಮಾನದ ಪ್ರಾಪ್ತಿಗಾಗಿ ಯಾರನ್ನಾದರೂ ದೂರವಿರಿ. ಶೋಧಕವರ್ಗಕ್ಕೆ ಉತ್ತಮ ಪ್ರಶಂಸೆಯು ಸಿಗಬಹುದು. ಪುಣ್ಯಕ್ಷೇತ್ರ ದರ್ಶನಕ್ಕೆ ಸ್ನೇಹಿತರ ಜೊತೆ ಹೋಗುವ ಮನಸ್ಸಾಗುವುದು. ಸ್ನೇಹಿತರನ್ನು ರಕ್ಷಿಸಲು ಹೋಗಿ ನೀವು ಅಪಾಯಕ್ಕೆ ಸಿಲುಕುವಿರಿ. ಅನಿರೀಕ್ಷಿತ ಧನಲಾಭವು ಸಂತೋಷವನ್ನು ಕೊಡುವುದು.
Leave a Comment