ದಿನ ಭವಿಷ್ಯ 14-12-2024 ಶನಿವಾರ; ಇಂದಿನ ರಾಶಿಫಲ ಹೀಗಿದೆ

Astro 9
Spread the love

ಮೇಷ ರಾಶಿ: ಬೇಡವೆಂದರೂ ಬಿಡದ ಸ್ನೇಹಿತಬಳಗದಿಂದ ಸೋಲುವಿರಿ. ನಿಮಗೆ ನಂಬಿಕೆಯ ಮೇಲೆ ಆದ ಪ್ರಹಾರವನ್ನು ಸಹಿಸಲಾಗದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಡಿ ಯಾವ ಕಾರ್ಯವನ್ನೂ ಮಾಡಲು ಹೋಗುವುದು ಬೇಡ. ಹಣದ ಮೇಲೆ ಸ್ವಲ್ಪ ನಿಯಂತ್ರಣ ಇಂದು ಅವಶ್ಯಕ. ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಬರಲಿದೆ. ಅನಿರೀಕ್ಷಿತವಾಗಿ ಕೆಲವು ವ್ಯಕ್ತಿಗಳ ಸಹಕಾರವು ಸಿಕ್ಕಿ ಸಂತೋಷವಾಗುವುದು.

ವೃಷಭ ರಾಶಿ: ಎಂದಿನ ಮಾತೇ ಆದರೂ ಇಂದು ನಿಮ್ಮ ನೇರ ಮಾತು ಕಹಿಯಾಗುವುದು. ಇಂದು ನೀವು ಸ್ತ್ರೀಯರ ವಿಚಾರದಲ್ಲಿ ಸೂಕ್ಷ್ಮಮತಿಗಳಾಗುವಿರಿ. ಎಲ್ಲರ ಒತ್ತಾಯಕ್ಕೆ ನೂತನ ವಾಹನದ ಖರೀದಿಗೆ ಮನಸ್ಸು ಮಾಡುವಿರಿ. ಬಾಗುವಿಕೆಯಿಂದ ಏನಾದರೂ ನಿಮ್ಮ ಒಳಗೆ ಸೇರಬಹುದು. ಔದಾರ್ಯವು ದುರ್ಬಳಕೆ ಆಗುವುದು. ಸಂತಾನದ ಬಗ್ಗೆ ಸಂಗಾತಿಯ ಜೊತೆ ಮಾತನಾಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆಯು ಇಲ್ಲದೇ ಹೋಗಬಹುದು. ಅಪೂರ್ಣ ಮಾಡಿಕೊಂಡ ಕಛೇರಿಯ ಕೆಲಸಗಳನ್ನು ಇಂದು ಪೂರ್ಣ ಮಾಡುವಿರಿ. ಅವಿವಾಹಿತರಿಗೆ ಬಂಧುಗಳಲ್ಲಿ ಉತ್ತಮ ಸಂಬಂಧವು ಪ್ರಾಪ್ತವಾಗುವುದು.

ಮಿಥುನ ರಾಶಿ: ನೋವನ್ನು ನುಂಗುವುದು ಕಷ್ಟವಾದರೂ ಇಂದು ಅನಿವಾರ್ಯವೇ. ನಿಮ್ಮದೇ ಸರಿ ಎನ್ನುವ ಅಹಂಭಾವ ಬಿಟ್ಟರೆ ನೆಮ್ಮದಿಯೂ ನಿಮ್ಮದೇ. ನಕಾರಾತ್ಮಕ ಯೋಚನೆಗಳು ನಿಮ್ಮನ್ನು ಸುಮ್ಮನಿರಲು ಬಿಡದು. ನಿರೀಕ್ಷಿತ ಬಂಧುಗಳ ಆಗಮನದಿಂದ ಸಂತೋಷವಾಗುವುದು. ಸಮಾರಂಭದಲ್ಲಿ ನೀವು ಭಾಗವಹಿಸಲು ಉತ್ಸುಕರಾಗಿರುವಿರಿ. ನಿಮ್ಮ ಮಕ್ಕಳ ಮಾತಿಗೆ ಕೊಡುವ ಬೆಲೆಯಿಂದ ಅವರಿಗೆ ಸಂತೋಷವಾಗಿ ನಿಮ್ಮನ್ನು ಹೆಚ್ಚು ಇಷ್ಟಪಡುವರು. ದೂರ ಪ್ರಯಾಣದಿಂದ ಸುಖ ಪಡುವಿರಿ.

ಕರ್ಕಾಟಕ ರಾಶಿ: ಮತ್ತಿನಿಂದ ಕುತ್ತು ತಂದುಕೊಳ್ಳುವ ಸಂಭವವಿದೆ. ಸಂಗಾತಿಯ ಎಲ್ಲ ಮಾತಿಗೂ ನಿಮ್ಮ ಒಮ್ಮತ ಇರದು. ಇದು ಕಲಹಕ್ಕೆ ಕಾರಣವಾಗಬಹುದು. ನೀವು ಇಂದು ಏನನ್ನು ಕೊಡುವುದಿದ್ದರೂ ಮನಃಪೂರ್ವಕವಾಗಿ ಕೊಡುವುದು ಉತ್ತಮ. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ಬಾರದಿರುವ ಹಣದ ಬಗ್ಗೆ ತಲೆ ಕೆಡಿಸಿಕೊಳ್ಳದೇ ವಿಧಿಚಿತ್ತದಂತೆ ಆಗುತ್ತದೆ ಎಂದು ಕೈ ಚೆಲ್ಲಿ ಕೂರುವಿರಿ. ಹೊಸ ವಿಚಾರಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವುದು.

ಸಿಂಹ ರಾಶಿ: ನಿಮ್ಮೊಳಗಿನ ತುಮುಲವು ಏನನ್ನೂ ಮಾಡಿಸದು. ಧಾರ್ಮಿಕ ಮುಖಂಡರ ಅಧಿಕಾರದ ವಿಚಾರದಲ್ಲಿ ಗೊಂದಲ ಉಂಟಾಗುವುದು.‌ ನಿಮ್ಮ ಪ್ರತಿಷ್ಠೆಗಳಿಂದ ಯಾರಿಗೂ ತೊಂದರೆಯಾಗದು. ನೌಕರರ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ. ಮತ್ತೆ ಮತ್ತೆ ನಿಮಗೆ ಅನಾರೋಗ್ಯವು ಕಾಣಿಸಿಕೊಂಡಿದ್ದು ವೈದ್ಯರಿಂದ ಚಿಕಿತ್ಸೆ ಪಡೆಯಿರಿ ಮತ್ತು ದೈವಜ್ಞರನ್ನು ಸಂಪರ್ಕಿಸಿ ದೈವಾನುಕೂಲದ ಬಗ್ಗೆಯೂ ಮಾತನಾಡಿ. ಔದಾರ್ಯವನ್ನು ತೆರೆದಿಡಬೇಕಾಗುವುದು.

ಕನ್ಯಾ ರಾಶಿ: ಬೀಳುವ ಕಾರ್ಯವನ್ನು ತಡೆದು ನಿಲ್ಲಿಸುವಿರಿ. ಅಷ್ಟೇ ಸಾಕು ಮುಂದಿನ ಬೆಳವಣಿಗೆಗೆ. ಬೇಕಾದಷ್ಟು ವಿಶ್ರಾಂತಿ ಪಡೆದು ಕಾರ್ಯದಲ್ಲಿ ಪ್ರವೃತ್ತರಾಗಿ. ಮಹಿಳೆಯರ ಜೊತೆ ಕೆಲಸ ಮಾಡುವುದು ಕಷ್ಟವಾಗುವುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ನಕಾರಾತ್ಮಕ ಆಲೋಚನೆಯನ್ನು ಇಂದು ಹೆಚ್ಚು ಮಾಡುವಿರಿ. ಮಕ್ಕಳ ವಿವಾಹಕ್ಕಾಗಿ ನೀವು ಓಡಾಡಿ ಆಯಾಸಪಡುವಿರಿ. ನಿಮ್ಮ ಜವಾಬ್ದಾರಿಯ ಮನೋಭಾವಕ್ಕೆ ಹೆಚ್ಚು ಒತ್ತಡವು ಬರಬಹುದು. ನಿಮ್ಮ ಇಂದಿನ ವರ್ತನೆಯಿಂದ ಬಂಧುಗಳಿಗೆ ಅಸಮಾಧಾನವಾಗುವುದು.

ತುಲಾ ರಾಶಿ: ಹಿಡಿತ ಸಾಧಿಸುವುದು ಅಷ್ಟು ಸುಲಭದ್ದಾಗದು. ನಿಮ್ಮ ಮರೆವಿನಿಂದ ಕೆಲವು ಮುಖ್ಯವಾದ ವಸ್ತುವನ್ನೇ ಕಳೆದುಕೊಳ್ಳಬಹುದು. ನಿಮ್ಮ ಇಂದಿನ ಕಾರ್ಯವು ತಾರ್ಕಿಕ ಅಂತ್ಯವನ್ನು ಕಾಣದೇ ಹೋಗಬಹುದು. ಮಿತ್ರರ ಜೊತೆ ಪ್ರವಾಸ ಹೋಗಬಹುದು. ಹಿರಿಯರಿಂದ ನಿರೀಕ್ಷಿತ ಲಾಭವು ಸಿಗಲಿದ್ದು ಸಂತೋಷವಾಗುವುದು. ಇಂದು ವೈಯಕ್ತಿಕ ಕಾರ್ಯಗಳನ್ನು ಮಾಡಿ ಮುಗಿಸಿಕೊಳ್ಳುವಿರಿ. ವ್ಯಕ್ತಿಗತ ಅಭಿಪ್ರಾಯದಿಂದ ನಿಮಗೆ ಯಾವ ನಷ್ಟವೂ ಆಗದು.

ವೃಶ್ಚಿಕ ರಾಶಿ: ಹೊಸ ಕಾರ್ಯಗಳಿಗೆ ನಿಮ್ಮನ್ನು ಮುಖಮಾಡಿಕೊಳ್ಳುಬಿರಿ. ಏಕಾಗ್ರತೆಯನ್ನು ನೀವು ಅಸ್ತ್ರವಾಗಿ ಬಳಸಿಕೊಳ್ಳಬಹುದು. ಜವಾಬ್ದಾರಿಗಳು ನಿಮಗೆ ಭಾರವೆನಿಸಿ ಅದನ್ನು ಹಂಚಿಕೆ ಮಾಡುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳದಲ್ಲಿ ಮಿತವಾದ ಮಾತುಗಳನ್ನು ಆಡಬೇಕಾದೀತು. ವಾಹನ ಚಾಲನೆಯನ್ನು ಸುರಕ್ಷಿತವಾಗಿ ಮಾಡಿ. ಆಪ್ತರಿಂದ ನಿಮಗೆ ಉಡುಗೊರೆ ಸಿಗಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಲ್ಲಿ ಪೂರ್ಣ ತೃಪ್ತಿ ಇರದು. ಯಾರ ಜೊತೆಯಾದರೂ ಬೆರೆಯಬೇಕು ಅನ್ನಿಸುವುದು. ಸಂಗಾತಿಗೆ ಕಿರಿಕಿರಿ ಉಂಟಾಗುವಂತೆ ಮಾಡುವಿರಿ. ಎಲ್ಲ ತಪ್ಪುಗಳಿಗೂ ನಿಮ್ಮನ್ನೇ ಬೆರಳು ಮಾಡಿ ತೋರಿಸಬಹುದು.

ಧನು ರಾಶಿ: ಇಂದು ಸೌಹಾರ್ದತೆಗೆ ಗೆಳೆತನವಾಗದು. ನಿಮ್ಮ ದೂರದೃಷ್ಟಿಯಿಂದ ನಿಮ್ಮ ಗುರಿ ಬದಲಾಗುವುದು. ನಿರುದ್ಯೋಗಿಗಳಿಗೆ ಸ್ನೇಹಿತರಿಂದ ಸಹಕಾರವು ಸಿಗುವುದು. ನಿಮ್ಮ ಭಾವನೆಗಳನ್ನು ಯಾರ ಜೊತೆಯೂ ಪ್ರಕಟಗೊಳಿಸುವುದಿಲ್ಲ. ಅಲ್ಪ ಲಾಭಕ್ಕೆ ನೀವು ತೃಪ್ತಿ ಪಡಬೇಕಾಗುವುದು. ಸ್ತ್ರೀಯರ ವಿಚಾರದಲ್ಲಿ ನೀವು ಜಾಗರೂಕತೆಯಿಂದ ಇರಬೇಕಾಗುವುದು. ನಿಮಗೆ ಬರಬೇಕಾದ ಹಣವು ನಿಮ್ಮ ಕೈಗೆ ಸಿಗದು. ಸಂಗಾತಿಯ ಮೇಲೆ ಬೇಸರದ ಭಾವವೂ ಮೂಡುವ ಸಾಧ್ಯತೆ ಇದೆ.

ಮಕರ ರಾಶಿ: ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ಸದರಾಗುವುದು ಬೇಡ. ನಿಮ್ಮ ದೃಷ್ಟಿಯು ಬದಲಾದರೆ ಎಲ್ಲವೂ ಬದಲಾಗುವುದು. ಕಛೇರಿಯ ವ್ಯವಹಾರವು ನಿಮಗೆ ಚಿಂತೆಯನ್ನು ಹೆಚ್ಚು ಮಾಡಬಹುದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ಮಹಿಳೆಯರು ಅಲಂಕಾರಿಕ ವಸ್ತುಗಳಿಗಾಗಿ ಖರ್ಚು ಮಾಡಬೇಕಾಗುವುದು. ಮಿತ್ರರ ನಡುವೆ ವೈಮನಸ್ಯ ಬರಬಹುದು. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಫಲರಾಗುವಿರಿ. ಸಹಾವಾಸದಿಂದ ನಿಮಗೆ ಅಪವಾದವು ಬರಬಹುದು.

ಕುಂಭ ರಾಶಿ: ಇಂದು ಗೊತ್ತಿಲ್ಲದ ವ್ಯವಹಾರದಿಂದ ನಿಮಗೆ ಮುಖಭಂಗ. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮಗೆ‌ ಇಷ್ಟವಾದ ಸ್ಥಳಕ್ಕೆ ನೀವು ಅಕಸ್ಮಾತ್ ಭೇಟಿ. ಸಮಯವನ್ನು ನೀವು ವ್ಯರ್ಥ ಮಾಡಿಕೊಳ್ಳುವಿರಿ. ಸದುಪಯೋಗ‌ ಮಾಡಿಕೊಳ್ಳುವತ್ತ ಗಮನವಿರಲಿ. ತಾಯಿಯ ಕಡೆಯಿಂದ ನಿಮಗೆ ಸಹಾಯವು ಸಿಗಬಹುದು.‌ ಉನ್ನತ ವ್ಯಾಸಂಗದಲ್ಲಿ ಆಸಕ್ತಿಯು ಕಡಿಮೆ‌ ಆಗುವುದು. ಮನೆಯ ಕೆಲಸದಿಂದ ಆಯಾಸವಾಗಬಹುದು.

ಮೀನ ರಾಶಿ: ನೀವು ಇಂದು ಯಾವುದನ್ನೂ ಪರಿಸ್ಥಿತಿಯ ಮೇಲೆ‌ ಅಳೆಯಲು ಆಗದು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ತೊಂದರೆ ಆದೀತು.‌ ಮನೆಯನ್ನು ಬದಲಿಸಬೇಕಾಗುವುದು. ನೀವು ಸ್ಥಾನಕ್ಕಾಗಿ ಯಾರ ಮೇಲೂ ಅಪವಾದ ಹಾಕಬಹುದು. ಬೋಧಕರಿಗೆ ಉತ್ತಮ ಪ್ರಶಂಸೆಯು ಸಿಗುವುದು.

Leave a Comment

Leave a Reply

Your email address will not be published. Required fields are marked *

error: Content is protected !!