ದಿನ ಭವಿಷ್ಯ 12-12-2024 ಗುರುವಾರ; ಈ ರಾಶಿಯವರಿಗೆ ಇಂದು ಆತಂಕ ಇರಲಿದೆ, ಹುಷಾರಾಗಿರಿ
ಮೇಷ: ಉದ್ಯಮಿಗಳು ಇಂದು ಬೃಹತ್ ಹೂಡಿಕೆ ಮಾಡದಿರುವುದೇ ಒಳಿತು. ದಾಖಲೆಗಳ ವಿಷಯದಲ್ಲಿ ಎಚ್ಚರದಿಂದಿರಿ. ವೇಗದ ಇಲ್ಲವೇ ನಿರ್ಲಕ್ಷ್ಯದ ವಾಹನ ಚಾಲನೆ ಬೇಡ. ಪ್ರಮುಖ ವಿಚಾರಗಳಲ್ಲಿ ಕುಟುಂಬ ಸದಸ್ಯರ ಸಹಕಾರ ಸಿಕ್ಕರೂ ಅದಕ್ಕಾಗಿ ನೀವು ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿ ಬರುತ್ತದೆ. ಹಲವಾರು ವರ್ಷದ ಕನಸಿಗೆ ಗರಿಬಂದಂತೆ ಆಗಬಹುದು. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು. ಆಂಜನೇಯ ಸ್ಮರಣೆ ಮಾಡಿ.
ವೃಷಭ: ನಂಬಿ ಬಂದವರಿಗೆ ಅಗತ್ಯ ಸಹಾಯ ನೀಡಿ. ಯಾವುದೇ ವಿಷಯದಲ್ಲೂ ಪಲಾಯನವಾದ ಬೇಡ. ಗೊಂದಲಗಳಿದ್ದಲ್ಲಿ ಆಪ್ತರೊಂದಿಗೆ ಮಾತಾಡಿ ವಿಷಯಕ್ಕೆ ಪರಿಹಾರ ಕಂಡುಕೊಳ್ಳಿ. ಗಂಟಲ ಕಿರಿಕಿರಿ, ಕೆಮ್ಮು ಕಾಡಲಿವೆ. ಮಹಾಲಕ್ಷ್ಮೀ ಸ್ಮರಣೆ ಮಾಡಿ.
ಮಿಥುನ : ಅನಗತ್ಯ ವಿಚಾರಗಳನ್ನು ಮನಸ್ಸಿಗೆ ಹಚ್ಚಿಕೊಂಡು ಕೊರಗಬೇಡಿ. ಸಮಯ, ಶಕ್ತಿ ಎರಡೂ ವ್ಯರ್ಥವಾಗುವುದು. ವಾಸ್ತವವನ್ನು ಒಪ್ಪಿಕೊಂಡು ಎದುರಿಸಿ. ಯಾರನ್ನಾದರೂ ಕಳೆದುಕೊಳ್ಳುವ ಭೀತಿಯು ಇರಲಿದೆ. ವಾತ ಸಂಬಂಧಿ ಆರೋಗ್ಯ ಸಮಸ್ಯೆಗಳು ಎದುರಾಗುವುವು. ಹನುಮಾನ್ ಚಾಲೀಸಾ ಹೇಳಿಕೊಳ್ಳಿ.
ಕಟಕ : ವಿವಾಹ ವಯಸ್ಸಿನ ಯುವಕ ಯುವತಿಯರಿಗೆ ಕಂಕಣಬಲ ಕೂಡಿ ಬರಲಿದೆ. ಮನೆ, ಭೂಮಿಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರಲಿದೆ. ರೈತರಿಗೆ ಶುಭ ದಿನ. ನಿಮ್ಮ ಉದಾರ ನೀತಿಗಾಗಿ ಪ್ರಶಂಸೆಗೆ ಪಾತ್ರರಾಗುವಿರಿ. ತಲೆನೋವು, ಶೀತ ಕಾಡಬಹುದು. ಕೆಂಪು ವಸ್ತ್ರ ಧರಿಸಿ ಕೆಂಪು ಧಾನ್ಯ ದಾನ ಮಾಡಿ.
ಸಿಂಹ : ವ್ಯಾಪಾರಸ್ಥರಿಗೆ ಅಧಿಕ ಲಾಭ. ಮನೆ ದೇವರ ಆಶೀರ್ವಾದದಿಂದ ಕಾರ್ಯಗಳಲ್ಲಿ ಯಶಸ್ಸು. ಸಕಾರಾತ್ಮಕ ಧೋರಣೆಯಿಂದಾಗಿ ಕಚೇರಿಯಲ್ಲಿ ಎಲ್ಲರ ಮನಸ್ಸು ಗೆಲ್ಲುವಿರಿ. ಷೇರು ವ್ಯವಹಾರಗಳು ಸಣ್ಣ ಲಾಭ ತರಲಿವೆ. ಕಾಲು ನೋವಿನ ಸಮಸ್ಯೆ ಹೆಚ್ಚಲಿದೆ. ಆಂಜನೇಯನಿಗೆ ವೀಳ್ಯದೆಲೆ ಹಾರ ಮಾಡಿ ಹಾಕಿ.
ಕನ್ಯಾ : ಹಣಕಾಸಿನ ಪರಿಸ್ಥಿತಿ ಆಶಾದಾಯಕವಾಗಿಲ್ಲದ ಕಾರಣ ಹಣವನ್ನು ಮಿತವಾಗಿ ಖರ್ಚು ಮಾಡಿ. ಜೀವನದ ಕಹಿ ಘಟನೆಗಳಿಗೆ ಕಾರಣವಾದವರನ್ನು ಕ್ಷಮಿಸದ ಹೊರತು ನೆಮ್ಮದಿ ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ. ಕೆಂಪು ವಸ್ತ್ರ ದಾನ ಮಾಡಿ.
ತುಲಾ : ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ಕೆಲ ತಪ್ಪು ನಿರ್ಧಾರಗಳು ತೆಗೆದುಕೊಳ್ಳುವುದು ತಪ್ಪುತ್ತದೆ. ರಿಯಲ್ ಎಸ್ಟೇಟ್ ಮತ್ತು ಆರ್ಥಿಕ ವ್ಯವಹಾರಗಳಿಗೆ ಒಳ್ಳೆಯ ದಿನ. ಯಾರಿಗೂ ಸಾಲ ನೀಡಬೇಡಿ. ಪ್ರೀತಿ ಪ್ರೇಮ ವಿಷಯದಲ್ಲಿ ಯಶಸ್ಸು. ಅಸಾಧ್ಯ ಎನಿಸಿದ್ದನ್ನು ಸುಮ್ಮನೇ ಮಾಡಲು ಹೋಗುವುದು ಬೇಡ. ಚಿಂತೆಗಳೇ ಇರುವ ಮನಸ್ಸಿನಲ್ಲಿ ದೇವರ ಭಕ್ತಿಯನ್ನು ತುಂಬಿಕೊಂಡು ಸಮಾಧಾನದಿಂದ ಇರಿ. ಗೋ ಗ್ರಾಸ ನೀಡಿ.
ವೃಶ್ಚಿಕ: ದೊಡ್ಡ ವಿಚಾರದಲ್ಲಿ ನಿರಾಸೆ ಕಾದಿದೆ. ಕಟ್ಟಡ ಮೇಲುಸ್ತುವಾರಿಕೆ ಮಾಡುವವರು ಅಥವಾ ಕಟ್ಟಡ ವಿನ್ಯಾಸಕಾರರಿಗೆ ಉತ್ತಮ ದಿನ. ಪ್ರಮುಖವಾದ ಮತ್ತು ಬೃಹತ್ತಾದ ಕಾರ್ಯ ನಿರ್ವಹಿಸಲು ಅವಕಾಶಗಳು ಲಭಿಸಲಿವೆ. ಸದ್ಬಳಕೆ ಮಾಡಿಕೊಳ್ಳಿ. ಉದ್ಯಮದಲ್ಲಿ ಊಹಿಸಲಾಗದ ಸಮಸ್ಯೆಯನ್ನು ತಂದು ಕೊಳ್ಳುವಿರಿ. ತಜ್ಞರಿಂದ ಅದನ್ನು ಸರಿ ಮಾಡಿಕೊಳ್ಳುವುದು ಉತ್ತಮ. ಯಾರನ್ನೋ ಅನುಕರಿಸುತ್ತ ನೀವು ಸಂತೋಷವನ್ನು ಪಡುವಿರಿ. ರಾಮ ನಾಮ ಜಪ ಮಾಡಿ.
ಧನುಸ್ಸು : ನಿಮ್ಮ ಬಗ್ಗೆ ಆಪ್ತ ವಲಯದಲ್ಲಿ ಅಸೂಯೆ ಹೆಚ್ಚುತ್ತಿದೆ. ಹೀಗಾಗಿ, ಎಷ್ಟೇ ಆಪ್ತರಾದರೂ ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಮನೆಯಿಂದ ಹೊರಗಿನ ಕೆಲಸಗಳಲ್ಲಿ ಅನಗತ್ಯ ಕಿರಿಕಿರಿಗಳು ಎದುರಾಗುವುವು. ವೈವಾಹಿಕ ಜೀವನದಲ್ಲಿ ಪರಿಸ್ಥಿತಿಗಳು ಕೈ ಮೀರಬಹುದು. ಶಿವನಿಗೆ ಬಿಲ್ವಾರ್ಚನೆ ಮಾಡಿಸಿ.
ಮಕರ: ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಹಳೆಯ ಸ್ನೇಹಿತರ ಭೇಟಿ ಸಂತೋಷ ತರಲಿದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಕ್ಕು ಸಮಾಧಾನವಾಗಲಿದೆ. ಹೊಸ ಹೂಡಿಕೆ ಸಧ್ಯಕ್ಕೆ ಬೇಡ. ನಿಮ್ಮಿಂದ ಆಗದಿರುವುದನ್ನು ಅನ್ಯರು ಮಾಡಿ ತೋರಿಸಿ ಅಪಮಾನ ಮಾಡಬಹುದು. ಹನುಮಾನ್ ಚಾಲೀಸಾ ಹೇಳಿಕೊಳ್ಳಿ.
ಕುಂಭ : ಹಗಲುಗನಸು ಕಾಣುತ್ತಾ ಕೂತರೆ ಯಾವೊಂದು ಕನಸೂ ಈಡೇರುವುದಿಲ್ಲ. ಮಾಡಬೇಕಾದ ಕೆಲಸಕ್ಕೆ ಮುನ್ನುಗ್ಗುವ ಅಭ್ಯಾಸ ರೂಢಿಸಿಕೊಳ್ಳಿ. ಹೊಸ ಜವಾಬ್ದಾರಿಗಳಿಂದ ವಿಮುಖರಾಗುವ ಬದಲು ಅವನ್ನು ಧೈರ್ಯವಾಗಿ ಹೆಗಲ ಮೇಲೆ ಹೊತ್ತುಕೊಳ್ಳಿ. ಎಲ್ಲ ಒಳಿತಾಗುವುದು. ಆಂಜನೇಯನಿಗೆ ಕೇಸರಿ ಅರ್ಪಿಸಿ.
ಮೀನ: ಮೌಲ್ಯ ಹೆಚ್ಚಾಗುವ ವಸ್ತುಗಳನ್ನು ಖರೀದಿಸಲು ಶುಭ ದಿನ. ಕೌಟುಂಬಿಕ ವಿಚಾರವಾಗಿ ಮೂರನೆಯವರ ಹಸ್ತಕ್ಷೇಪದಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಹೃದಯ ಸಂಬಂಧಿ ಸಮಸ್ಯೆಗಳು ಬಾಧಿಸಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಹೆಚ್ಚಿರಲಿದೆ.
Leave a Comment