ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹೀಂದ್ರಾ; ಬಿಲ್ಲುಗಾರ್ತಿ ಶೀತಲ್‌ಗೆ ಮಹೀಂದ್ರ ಸ್ಕಾರ್ಫಿಯೋ ಗಿಫ್ಟ್

ನ್ಯೂಸ್ ಆ್ಯರೋ: ದೇಶದ ಹೆಮ್ಮೆಯ ಕ್ರೀಡಾ ಪ್ರತಿಭೆಗಳನ್ನು, ಕಷ್ಟದಿಂದ ಮೇಲೆ ಬಂದು ಬದುಕು ಕಟ್ಟಿಕೊಳ್ಳುವ ಎಳ್ಳೆ ಪ್ರಾಯದ ಮಕ್ಕಳನ್ನು ತರುಣರನ್ನು ಸದಾ ಪ್ರೋತ್ಸಾಹಿಸಿ ಸಹಾಯಹಸ್ತ ಚಾಚುವ ಉದ್ಯಮಿ ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಈಗ ಎರಡು ಕೈಗಳಿಲ್ಲದಿದ್ದರೂ ಭಾರತ ಹೆಮ್ಮೆ ಪಡುವಂತೆ ಮಾಡಿದ ಖ್ಯಾತ ಪ್ಯಾರಾ ಒಲಿಂಪಿಯನ್ ಶೀತಲ್ ದೇವಿಯವರಿಗೆ ದೊಡ್ಡ ಉಡುಗೊರೆ ನೀಡಿದ್ದಾರೆ.
ಹೌದು ಕಳೆದ ವರ್ಷ ಪ್ಯಾರಿಸ್ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ ಶೀತಲ್ ದೇವಿಯವರಿಗೆ ಮಹೀಂದ್ರಾ ಸ್ಕಾರ್ಫಿಯೋ ಗಾಡಿಯನ್ನು ಆನಂದ್ ಮಹೀಂದ್ರಾ ಅವರು ಉಡುಗೊರೆಯಾಗಿ ನೀಡಿದ್ದಾರೆ. ಕಳೆದ ವರ್ಷ ನಡೆದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬಿಲ್ಲುಗಾರಿಕೆಯ ಮಿಶ್ರ ಸ್ಪರ್ಧೆಯಲ್ಲಿ ಶೀತಲ್ ಕಂಚಿನ ಪದಕ ಗೆದ್ದರು.
ಎರಡು ಕೈಗಳಿಲ್ಲದಿದ್ದರೂ ಕಾಲಿನ ಮೂಲಕ ಆಕೆ ಮಾಡಿದ ಈ ಸಾಧನೆ ಉದ್ಯಮಿ ಆನಂದ್ ಮಹೀಂದ್ರಾ ಅವರನ್ನು ಅಳವಾಗಿ ಪ್ರಭಾವ ಬೀರಿತ್ತು. ಹೀಗಾಗಿ ಭಾರತದ ಮೊದಲ ಕೈಗಳಿಲ್ಲದ ಬಿಲ್ಲುಗಾರ್ತಿ ಎನಿಸಿರುವ ಶೀತಲ್ ದೇವಿ ಹಾಗೂ ಆಕೆಯ ಕುಟುಂಬವನ್ನು ಭೇಟಿ ಮಾಡಿದ ಆನಂರ್ ಮಹೀಂದ್ರಾ ಅವರಿಗೆ ಹೊಚ್ಚ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಗಾಡಿಯನ್ನು ಉಡುಗೊರೆಯಾಗಿ ನೀಡಿದರು.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಶೀತಲ್, ತನ್ನ ದೃಢನಿಶ್ಚಯ ಮತ್ತು ಕೌಶಲ್ಯದಿಂದ ಎಲ್ಲಾ ಅಡೆತಡೆಗಳನ್ನು ಎದುರಿಸಿ ತಮ್ಮ ಕಾಲಿನ ಪಾದಗಳನ್ನು ಬಳಸಿ ಬಾಣಗಳನ್ನು ಬಿಡುವ ಮೂಲಕ ಸಾಧನೆ ಮಾಡಿದ್ದರು. ಅವರ ಈ ಸಾಮರ್ಥ್ಯ ವಿಶ್ವಾದ್ಯಂತ ಇರುವ ಅನೇಕರಿಗೆ ಸ್ಪೂರ್ತಿ ತುಂಬಿದೆ.
ಶೀತಲ್ ಅವರ ಧೈರ್ಯ ಮತ್ತು ದೃಢಸಂಕಲ್ಪದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಹೀಂದ್ರಾ, ಅವರ ತಾಯಿ ಮತ್ತು ಸಹೋದರಿಯಲ್ಲೂ ಅದೇ ರೀತಿಯ ದೃಢಸಂಕಲ್ಪ ಕಂಡಿದ್ದನ್ನು ಗಮನಿಸಿದರು. ಅವರ ಅಸಾಧಾರಣ ಪ್ರಯಾಣವನ್ನು ಗೌರವಿಸಲು, ಅವರು ಅವರಿಗೆ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಶೀತಲ್ ಅವರು ಮಹೀಂದ್ರಾ ಅವರಿಗೆ ಬಾಣವನ್ನು ಉಡುಗೊರೆಯಾಗಿ ನೀಡಿದ್ದು, ಅದಕ್ಕಾಗಿ ಆನಂದ್ ಮಹೀಂದ್ರ ಅವರಿಗೆ ಧನ್ಯವಾದ ಹೇಳಿದರು. ಆ ಬಾಣಅವರ ಅದಮ್ಯ ಚೈತನ್ಯದ ಸಂಕೇತವಾಗಿದೆ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.
ಶೀತಲ್ ದೇವಿಯವರ ಪ್ರತಿಭೆಯನ್ನು ನಾನು ಬಹಳ ಹಿಂದಿನಿಂದಲೂ ಮೆಚ್ಚಿಕೊಂಡಿದ್ದೆ. ಅವರನ್ನು ವೈಯಕ್ತಿಕವಾಗಿ ಭೇಟಿಯಾದಾಗ, ಅವರ ಗಮನಾರ್ಹ ದೃಢನಿಶ್ಚಯ, ದೃಢತೆ ಮತ್ತು ಗಮನದಿಂದ ನಾನು ಪ್ರಭಾವಿತನಾದೆ. ಅವರ ತಾಯಿ ಮತ್ತು ಸಹೋದರಿಯೊಂದಿಗೆ ಮಾತನಾಡುವಾಗ, ಈ ದೃಢತೆ ಅವರ ಕುಟುಂಬದಲ್ಲೇ ಇದೆ ಎಂಬುದು ಸ್ಪಷ್ಟವಾಗಿತ್ತು.
ಅವಳು ನನಗೆ ಒಂದು ಬಾಣವನ್ನು ಉಡುಗೊರೆಯಾಗಿ ಕೊಟ್ಟಳು, ಅದು ಬಿಲ್ಲುಗಾರ್ತಿಯಾಗಿ ಆಕೆಯ ಗುರುತಿನ ಸಂಕೇತ, ಯಾವುದೇ ಮಿತಿಗಳಿಂದ ಬಂಧಿಸಲ್ಪಟ್ಟಿಲ್ಲ. ನಿಜವಾಗಿಯೂ ಅಮೂಲ್ಯ! ಶೀತಲ್ ನಮಗೆಲ್ಲರಿಗೂ ಸ್ಫೂರ್ತಿ, ಮತ್ತು ಅವಳು ಹೊಸ ಎತ್ತರಕ್ಕೆ ಏರುತ್ತಿರುವಾಗ ಸೂಕ್ತವಾದ ಸ್ಕಾರ್ಪಿಯೋ-ಎನ್ ನಲ್ಲಿ ಅವಳನ್ನು ನೋಡಲು ನನಗೆ ಹೆಮ್ಮೆಯಾಗುತ್ತದೆ ಎಂದು ಮಹೀಂದ್ರಾ ಬರೆದುಕೊಂಡಿದ್ದಾರೆ.
Leave a Comment