ಮಂಗಳೂರಿಗರಿಗೆ ಹೆಮ್ಮೆಯ ಕ್ಷಣ: ಲಡಾಖ್ ʼಮಚೋಯ್ʼ ಪರ್ವತ ವಶಪಡಿಸಿಕೊಂಡ ಮಂಗಳೂರಿನ ಸಾಹಸಿ
ಮಂಗಳೂರು: ಮಂಗಳೂರಿನ ಸಾಹಸಿ ಯವಕನೋರ್ವ ಲಡಾಖ್ ನಲ್ಲಿನ 16,863 ಅಡಿ ಎತ್ತರದ ಮಚೋಯ್ ಪರ್ವತವನ್ನು ಏರುವ ಮೂಲಕ ಅಧ್ಬುತ ಸಾಧನೆ ಮಾಡಿದ್ದಾರೆ. “ಬೌಲೈನ್ ಸ್ಪೋರ್ಟ್ಸ್ & ಅಡ್ವೆಂಚರ್” ಸಂಸ್ಥಾಪಕ ಸುಹಾನ್ ಸುಧಾಕರ್ ಅವರೇ ಈ ಮಹತ್ವದ ಸಾಧನೆ ಗೈದ ಸಾಹಸಿಯಾಗಿದ್ದಾನೆ.
ಹಿಮಾಲಯದ ಲಡಾಕ್‌ನ ದ್ರಾಸ್ ಪ್ರದೇಶದಲ್ಲಿ ಮೌಂಟ್ ಮಚೋಯ್ ಅನ್ನು ಯಶಸ್ವಿಯಾಗಿ ಏರುವ ಮೂಲಕ ನಂಬಲಾಗದ ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಈ ನೋಡಲು ಸುಂದವಾಗಿ ಕಾಣುವ ಆದ್ರೆ ಅಷ್ಟೇ ಅಪಾಯಕಾರಿಯಾಗಿರುವ ಮಚೋಯ್ ಪರ್ವತವು 5130 ಮೀಟರ್ (16,863 ಅಡಿ) ಎತ್ತರದಲ್ಲಿ ಎತ್ತರದಲ್ಲಿದೆ. ಇದು ಅಮರನಾಥ ಗುಹೆ ಮತ್ತು ಜೊಜಿಲಾ ನಡುವೆ ಇದೆ.
ಅದರ ತೀವ್ರ ಪರಿಸ್ಥಿತಿಗಳಿಗೆ ಹೆಸರುವಾಸಿಯಾಗಿದೆ ಜೊತೆಗೆ ಇಲ್ಲಿ ಆಮ್ಲಜನಕದ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗಿರುತ್ತದೆ. ದ್ರಾಸ್ ಸೈಬೀರಿಯಾದ ನಂತರ ವಿಶ್ವದ ಎರಡನೇ ಅತ್ಯಂತ ಶೀತಲವಾದ ಜನವಸತಿ ಸ್ಥಳವಾಗಿದೆ ಮತ್ತು ಭಾರತದಲ್ಲಿನ ಅತ್ಯಂತ ತಂಪಾದ ಸ್ಥಳವಾಗಿದೆ, ಕಡಿಮೆ ಅಂದ್ರೆ ತಾಪಮಾನ -45 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಈ ಕಠಿಣ ಸವಾಲುಗಳ ನಡುವೆಯೂ, ಸಮುದ್ರ ತೀರದ ಊರಿಂದ ಬಂದ ಸುಹಾನ್ ಇದನ್ನು ಏರುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಇದಕ್ಕಾಗಿ ಸುಹಾನ್ ಕಳೆದ ಆರು ತಿಂಗಳಿನಿಂದ ಕಠಿಣ ದೈಹಿಕ ತರಬೇತಿ ಪಡೆದುಕೊಂಡಿದ್ದರು. ಜೊತೆಗೆ ತಾಂತ್ರಿಕ ಕೌಶಲ್ಯ ಮತ್ತು ಪರ್ವತಗಳ ತಿಳುವಳಿಕೆಯ ಜ್ಞಾನ ಇರುವುದರಿಂದ ಶಿಖರ ಗುರಿ ತಲುಪಲು ಯಶಸ್ವಿಯಾಗಿದ್ದಾರೆ. ಸುಹಾನ್ ಅಪ್ರತಿಮ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Leave a Comment