ಲ್ಯಾಂಡಿಂಗ್ ವೇಳೆ ಭೀಕರ ವಿಮಾನ ಅಪಘಾತ; ಪ್ರಯಾಣಿಕರಿದ್ದ ವಿಮಾನ ಹೆಲಿಕಾಪ್ಟರ್‌ಗೆ ಡಿಕ್ಕಿ
ನ್ಯೂಸ್ ಆ್ಯರೋ: ಅಮೆರಿಕದಿಂದ ಭೀಕರ ವಿಮಾನ ಅಪಘಾತದ ಸುದ್ದಿ ಹೊರಬಿದ್ದಿದೆ. ವರದಿಗಳ ಪ್ರಕಾರ, ಬುಧವಾರ, ವಾಷಿಂಗ್ಟನ್‌ನ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಪ್ರಯಾಣಿಕರ ವಿಮಾನವು ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ವಿಮಾನ ನಿಲ್ದಾಣದಿಂದ ವಿಮಾನಗಳ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸೇವೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಅಪಘಾತ ಬೆನ್ನಲ್ಲೇ ಅಗ್ನಿಶಾಮಕ ದಳ ಮತ್ತು ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿವೆ. ರಕ್ಷಣಾ ಕಾರ್ಯದಲ್ಲಿ ಭದ್ರತಾ ಪಡೆ ತೊಡಗಿದೆ.
ಅಮೆರಿಕದ ಫೆಡರಲ್ ಏವಿಯೇಷನ್ (ಎಫ್‌ಎಎ) ಪ್ರಕಾರ.. ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಪ್ರಯಾಣಿಕರ ವಿಮಾನ ಲ್ಯಾಂಡಿಗ್ ಆಗ್ತಿದ್ದಾಗ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಕುರಿತು ತನಿಖೆ ನಡೆಸಲಾಗುತ್ತಿದೆ. ದುರ್ಘಟನೆಯಲ್ಲಿ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ವಿಮಾನದಲ್ಲಿ ಒಟ್ಟು 60 ಪ್ರಯಾಣಿಕರು ಎನ್ನಲಾಗಿದೆ.
ಇನ್ನು ನದಿಯಲ್ಲಿ ಬಿದ್ದ ವಿಮಾನದ ಅವಶೇಷಗಳನ್ನು ಶೋಧಿಸಲಾಗುತ್ತಿದೆ. ಅಪಘಾತಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅಮೆರಿಕದ ಸೆನೆಟರ್ ಟೆಡ್ ಕ್ರೂಜ್ ಟ್ವೀಟ್ ಮಾಡಿ.. ಅಪಘಾತದಲ್ಲಿ ಹಲವರು ಜೀವ ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಇನ್ನೂ ನಿಖರ ಮಾಹಿತಿ ಲಭ್ಯವಾಗಿಲ್ಲ.
Leave a Comment