ಮತ್ತೆ ಒಂದಾಗಲಿದ್ದಾರೆ ಸ್ಟಾರ್‌ ದಂಪತಿ: ವಿಚ್ಛೇದನ ಹಿಂಪಡೆಯಲಿದ್ದಾರೆ ಧನುಷ್-ಐಶ್ವರ್ಯಾ?

Dhanush and Aishwarya
Spread the love

ನ್ಯೂಸ್ ಆ್ಯರೋ: ರಜನೀಕಾಂತ್ ಪುತ್ರಿ ಐಶ್ವರ್ಯಾ ಮತ್ತು ಧನುಷ್ ಮದುವೆಯಾಗಿ 18 ವರ್ಷ ಒಟ್ಟಿಗೆ ಸಂಸಾರ ಮಾಡಿದ್ದು ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಎರಡು ವರ್ಷದ ಹಿಂದೆ 2022 ರಲ್ಲಿ ಧನುಶ್ ಹಾಗೂ ಐಶ್ವರ್ಯಾ ಪರಸ್ಪರ ದೂರಾಗುತ್ತಿರುವುದಾಗಿ ಘೋಷಿಸಿದ್ದರು. ಧನುಷ್ ಹಾಗೂ ಐಶ್ವರ್ಯಾ ತಾವು ವಿಚ್ಛೇದನ ಪಡೆಯಲಿರುವುದಾಗಿ ಘೋಷಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅದಾದ ಬಳಿಕ ಇವರಿಬ್ಬರ ಈ ವಿಚ್ಛೇದನಕ್ಕೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು, ರಜನೀಕಾಂತ್ ಅಭಿಮಾನಿಗಳು ಸಹ ವಿರೋಧಿಸಿದ್ದರು. ಆ ನಂತರ ಈ ಜೋಡಿ ಕೆಲ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿತು. ಇದೀಗ ಇವರು ತಮ್ಮ ವಿಚ್ಛೇದನ ನಿರ್ಣಯವನ್ನು ಹಿಂಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಧನುಶ್ ಹಾಗೂ ಐಶ್ವರ್ಯಾರ ವಿಚ್ಛೇದನದ ಅರ್ಜಿ ಇನ್ನೂ ವಿಲೇವಾರಿ ಆಗಿಲ್ಲ. ಇಂದು ವಿಚ್ಛೇದನದ ಅರ್ಜಿಯ ವಿಚಾರಣೆ ಇತ್ತು, ಆದರೆ ಇಬ್ಬರೂ ಸಹ ವಿಚಾರಣೆಗೆ ಹಾಜರಾಗಿಲ್ಲ. ಹಾಗಾಗಿ ನ್ಯಾಯಾಧೀಶರು ವಿಚಾರಣೆಯನ್ನು ಅಕ್ಟೋಬರ್ 19ಕ್ಕೆ ಮುಂದೂಡಿದ್ದಾರೆ. ಕೆಲವು ತಿಂಗಳ ಹಿಂದಷ್ಟೆ ಧನುಶ್ ಹಾಗೂ ಐಶ್ವರ್ಯಾ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಇಬ್ಬರೂ ವಿಚ್ಛೇದನ ವಿಚಾರಣೆಗೆ ಹಾಜರಾಗದೇ ಇರುವುದು ಆ ಸುದ್ದಿಗಳಿಗೆ ಪುಷ್ಠಿ ನೀಡಿದೆ.

ಧನುಷ್ ಹಾಗೂ ಐಶ್ವರ್ಯಾ 2004 ರಲ್ಲಿ ವಿವಾಹವಾಗಿದ್ದರು. ಐಶ್ವರ್ಯಾ, ರಜನೀಕಾಂತ್​ರ ಹಿರಿಯ ಪುತ್ರಿ. ಇವರು ನಿರ್ದೇಶಕಿ ಸಹ ಹೌದು. ಧನುಷ್ ಹಾಗೂ ಶ್ರುತಿ ಹಾಸನ್ ನಟಿಸಿರುವ ‘3’ ಸಿನಿಮಾವನ್ನು ಐಶ್ವರ್ಯಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾದ ಹಾಡುಗಳು ಭಾರಿ ಯಶಸ್ಸು ಗಳಿಸಿದ್ದವು. 18 ವರ್ಷದ ಬಳಿಕ ಧನುಷ್ ಹಾಗೂ ಐಶ್ವರ್ಯಾ ದೂರಾಗಿದ್ದರು. ವಿಚ್ಛೇದನದ ಸುದ್ದಿ ಹೊರಬಿದ್ದಾಗ ಅಭಿಮಾನಿಗಳು ತೀವ್ರ ಬೇಸರ, ವಿರೋಧ ವ್ಯಕ್ತಪಡಿಸಿದ್ದರು.

Leave a Comment

Leave a Reply

Your email address will not be published. Required fields are marked *

error: Content is protected !!