ಕೊನೆಗೂ ಮಗಳ ಮುಖ ರಿವೀಲ್​ ಮಾಡಿದ ಅದಿತಿ ಪ್ರಭುದೇವ ದಂಪತಿ: ಮುದ್ದು ಮಗಳ ಹೆಸರು ರಿವೀಲ್

aditi prabhudeva baby face
Spread the love

ನ್ಯೂಸ್ ಆ್ಯರೋ: ಸ್ಯಾಂಡಲ್‌ವುಡ್ ಖ್ಯಾತ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ಸು ಚಂದ್ರಕಾಂತ್ ಸಖತ್​ ಖುಷಿಯಲ್ಲಿದ್ದಾರೆ. ಇದೇ ಮೊದಲ ಬಾರಿಗೆ ನಟಿ ಅದಿತಿ ಪ್ರಭುದೇವ ದಂಪತಿ ಅವರ ಮುದ್ದಾದ ಮಗಳ ಮುಖವನ್ನು ರಿವೀಲ್ ಮಾಡಿದ್ದಾರೆ.

ಹೌದು. . ಸ್ಯಾಂಡಲ್‌ವುಡ್ ಖ್ಯಾತ ನಟಿ ಅದಿತಿ ಪ್ರಭುದೇವ ಸದ್ಯ ತಮ್ಮ ಆರು ತಿಂಗಳ ಪುಟಾಣಿ ಮಗಳ ಜೊತೆ ಕಾಲ ಕಳೆಯುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸ್ಟಾರ್ ದಂಪತಿ ಮುದ್ದು ಮಗಳ ಮುಖ ಹಾಗೂ ಹೆಸರನ್ನು ರಿವೀಲ್​ ಮಾಡಿದ್ದಾರೆ.

Adithi Prabudev Dau

ಯುಗಾದಿ ಹಬ್ಬದ ದಿನ ಅಂದರೆ ಏಪ್ರಿಲ್ 4ರಂದು ನಟಿ ಅದಿತಿ ಪ್ರಭುದೇವ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿತ್ತು. ಯುಗಾದಿ ಹಬ್ಬದಂದು ತಾಯಿ ಆದ ಖುಷಿಯ ಜೊತೆಗೆ ನಮ್ಮ ಮನೆ ಮಹಾಲಕ್ಷ್ಮಿ ಅಂತಾ ಮಗುವಿನ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದೀಗ ಮುದ್ದಿನ ಮಗಳಾದ ನೇಸರಳ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Adithi Prabudev Baby

ಫೋಟೋ ಶೇರ್ ಮಾಡಿಕೊಳ್ಳುವುದರ ಜೊತೆಗೆ ಮುದ್ದಾದ ಮಗಳ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ. ಮುದ್ದು ಮಗಳೇ, ಇಂದಿಗೆ ನೀನು ನನ್ನ ಮಡಿಲನ್ನು ತುಂಬಿ ಆರು ತಿಂಗಳಾಯಿತು. ನೀ ಬಂದಮೇಲೆ ನಮ್ಮ ಬದುಕೆ ಬದಲಾಯಿತು. ನಮ್ಮ ಜೀವನ ಸುಂದರವಾಯಿತು. ಸಂಪೂರ್ಣವಾಯಿತು ಹುಟ್ಟು ಹಬ್ಬದ ಶುಭಾಶಯಗಳು ಮಗಳೇ ನೇಸರ ಅಂತ ಬರೆದುಕೊಂಡಿದ್ದಾರೆ.

Leave a Comment

Leave a Reply

Your email address will not be published. Required fields are marked *