ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಮೆಟಾ: ಈ ಮೊಬೈಲ್ ನಿಮ್ಮದಾಗಿದ್ದರೆ ಇನ್ಮುಂದೆ ವಾಟ್ಸಾಪ್ ಸಿಗಲ್ಲ
ನ್ಯೂಸ್ ಆ್ಯರೋ: ಮೆಸೇಜ್ ಮತ್ತು ಕಾಲ್ಗಳನ್ನು ಫ್ರೀಯಾಗಿ ಮಾಡಬಹುದಾದ ಮೇಟಾದ ಮತ್ತೊಂದು ವೇದಿಕೆ ಅಂದ್ರೆ ಅದು ವಾಟ್ಸಾಪ್. ಈ ಒಂದು ಆ್ಯಪ್ ಜಗತ್ತಿನ ಪ್ರತಿಯೊಂದು ಸ್ಮಾರ್ಟ್ ಹಾಗೂ ಆ್ಯಂಡ್ರಾಯ್ಡ್ ಮೊಬೈಲ್ಗಳಲ್ಲಿ ಇದ್ದೇ ಇರುತ್ತೆ. ಇದು ಖಾಯಂ ಆಗಿ ಸರಳವಾಗಿ ನಡೆಯಬೇಕು ಅಂದ್ರೆ ಅದನ್ನು ಆಗಾಗ ಅಪ್ಡೇಟ್ ಮಾಡಿಕೊಳ್ಳುತ್ತಲೇ ಇರಬೇಕು. ಆದ್ರೆ ಮೆಟಾ ಕಂಪನಿ ಈಗೊಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ. ಕೆಲವು ಹಳೆಯದಾದ ಫೋನ್ಗಳಲ್ಲಿ ಇನ್ಮುಂದೆ ವಾಟ್ಸಾಪ್ ಆ್ಯಕ್ಸಸ್ ಇರುವುದಿಲ್ಲ ಎಂದು ತಿಳಿಸಿದೆ.
ಹೆಚ್ಡಿ ಬ್ಲಾಗ್ ವರದಿ ಮಾಡಿರುವ ಪ್ರಕಾರ ಕನಿಷ್ಠ 20 ಬಗೆಯ ಆ್ಯಂಡ್ರಾಯ್ಡ್ ಮತ್ತು ಸ್ಮಾರ್ಟ್ಫೋನ್ಗಳಲ್ಲಿ ಇನ್ಮುಂದೆ ವಾಟ್ಸಾಪ್ ಕಾಣಿಸಲ್ಲ ಎಂದು ಹೇಳಲಾಗಿದೆ.ಅದು ಜನವರಿ 1ನೇ ತಾರೀಖು, ಹೊಸ ವರ್ಷದ ಮೊದಲ ದಿನದಿಂದಲೇ ಪ್ರಮುಖ ಸ್ಮಾರ್ಟ್ ಹಾಗೂ ಆ್ಯಂಡ್ರಾಯ್ಡ್ ಮೊಬೈಲ್ನಲ್ಲಿ ವಾಟ್ಸಾಪ್ ಮಾಯವಾಗಲಿದೆ. ಇಂತಹ ಒಂದು ವರದಿಯನ್ನು ಹೆಚ್ಡಿ ಬ್ಲಾಗ್ ಡಿಸೆಂಬರ್ 20 ರಂದು ಪ್ರಕಟಿಸಿದೆ.
ಆ್ಯಂಡ್ರಾಯ್ಡ್ ಕಿಟ್ಕಾಟ್ ಡಿವೈಸ್ ನ್ನು ಇಂದಿಗೂ ಉಪಯೋಗಿಸುತ್ತಿರುವ,ಮುಂಚಿನ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊಬೈಲ್ಗಳಲ್ಲಿ ವಾಟ್ಸಾಪ್ ಆ್ಯಕ್ಸಿಸ್ ಆಗುವುದಿಲ್ಲ ಎಂದು ಹೇಳಲಾಗಿದೆ. ವಾಟ್ಸಾಪ್ ಜೊತೆ ಜೊತೆಗೆ ಮೆಟಾ ಆ್ಯಪ್ಗಳಾದಂತಹ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ಗಳು ಕೂಡ ಕಣ್ಮರೆಯಾಗಲಿವೆ.
ಈ ಕೆಳಗಂಡ ಮೊಬೈಲ್ಗಳಲ್ಲಿ ಜನವರಿ 1 ರಿಂದ ವಾಟ್ಸಾಪ್ ಆಕ್ಸಿಸ್ ಇರುವುದಿಲ್ಲ:
Samsung Galaxy S3, Samsung Galaxy Note 2 Samsung Galaxy Ace 3, Samsung Galaxy S4 Mini, Moto G (1st Gen),Motorola Razr HD, Moto E 2014,HTC One X,HTC One X+,HTC Desire 500,HTC Desire 601, HTC Optimus G, HTC Nexus 4, LG G2 Mini, LG L90, Sony Xperia Z,Sony Xperia SP, Sony Xperia T, Sony Xperia V
Leave a Comment