ಹೊಸ ವರ್ಷದಂದು ಮನೆಯಲ್ಲಿ ಈ ವಸ್ತುಗಳನ್ನು ಇಡಿ; ವರ್ಷವಿಡೀ ಸುಖ, ಶಾಂತಿ ನೆಮ್ಮದಿ ನೆಲಸಲಿದೆ
ನ್ಯೂಸ್ ಆ್ಯರೋ: 2025 ನೇ ವರ್ಷಕ್ಕೆ ಕಾಲಿಟ್ಟಾಗಿದೆ. ಹೊಸ ವರ್ಷವೂ ನಮ್ಮ ಜೀವನದಲ್ಲಿ ಬದಲಾವಣೆ ತರಬೇಕು ಎನ್ನುವುದು ಎಲ್ಲರ ಆಶಯವಾಗಿರುತ್ತದೆ. ಹೀಗೆ 2025 ರಲ್ಲಿ ನಿಮಗೆ ಅದೃಷ್ಟ ಹಾಗೂ ಧನಾತ್ಮಕ ಶಕ್ತಿ ವೃದ್ಧಿಯಾಗಬೇಕೆಂದರೆ ನೀವು ನಿಮ್ಮ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲೇಬೇಕು.
ಮನೆಯಲ್ಲಿ ಯಾವಾಗಲೂ ಸುಖ, ಶಾಂತಿ, ನೆಮ್ಮದಿ ನೆಲಸಬೇಕೆಂದರೆ ವಾಸ್ತು ತುಂಬಾ ಮುಖ್ಯ. ವಾಸ್ತು ಪ್ರಕಾರ ಮನೆಯಲ್ಲಿ ಕೆಲವೊಂದು ವಬದಲಾವನೆಗಳನ್ನು ಮಾಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಅಷ್ಟೆ ಅಲ್ಲದೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
ನವಿಲು ಗರಿಯನ್ನು ನಮ್ಮ ಹಿಂದೂ ಧರ್ಮದ ಪ್ರಕಾರ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹೊಸ ವರ್ಷದಂದು ಮನೆಯಲ್ಲಿ ನವಿಲು ಗರಿಯನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ.
ಸಾಮಾನ್ಯವಾಗಿ ಎಲ್ಲರೂ ಕೂಡ ಮನೆಯಲ್ಲಿ ಮನಿ ಪ್ಲಾಂಟ್ ಇಟ್ಟಿರುತ್ತಾರೆ. ಮನೆಯಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಅದೃಷ್ಟ ನಿಮ್ಮ ಮನೆಯ ಬಾಗಿಲು ತಟ್ಟುತ್ತದೆ. ಮನೆಯ ಉತ್ತರ ದಿಕ್ಕಿನಲ್ಲಿ ಹೊಸ ವರ್ಷದಂದು ಮನಿ ಪ್ಲಾಂಟ್ ಅನ್ನು ಇಡುವುದರಿಂದ ನಿಮ್ಮ ಮನೆಗೆ ಅದೃಷ್ಟ ಹರಿದು ಬರುತ್ತದೆ.
ಮನೆಯಲ್ಲಿ ಬುದ್ಧನ ಪ್ರತಿಮೆಯನ್ನು ಇಡುವುದರಿಂದ ಮನೆಯಲ್ಲಿ ನೆಮ್ಮದಿ ನೆಲಸುತ್ತದೆ. ನಕಾರಾತ್ಮಕ ಶಕ್ತಿ ನಿವಾರನೆ ಆಗುತ್ತದೆ. ಅಷ್ಟೆ ಅಲ್ಲ 2025 ನೇ ಸಾಲು ಶಾಂತಿ ಹಾಗೂ ನೆಮ್ಮದಿಯಿಂದ ಸಾಗುವಂತೆ ಮಾಡುತ್ತದೆ. ಆದ್ದರಿಂದ ಹೊಸ ವರ್ಷದಂದು ಮನೆಯಲ್ಲಿ ಬುದ್ಧನ ಪ್ರತಿಮೆಯನ್ನು ಇಡುವುದು ತುಂಬಾ ಮುಖ್ಯ.
ಹೊಸ ವರ್ಷದಂದು ಮನೆಯಲ್ಲಿ ದೇವರ ವಿಗ್ರಗಳನ್ನು ಇಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೊಲಗಿಸಬಹುದು. ಮನೆಯಲ್ಲಿ ನಿಮ್ಮ ನೆಚ್ಚಿನ ದೇವರ ವಿಗ್ರಹವನ್ನು ಇರಿಸುವುದರಿಂದ ಉತ್ತಮ ಶಕ್ತಿ ವೃದ್ಧಿಯಾಗುತ್ತದೆ.
ಮನೆಯಲ್ಲಿ ಹರಳುಗಳನ್ನು ಇಟ್ಟುಕೊಳ್ಳುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಸ್ಫಟಿಕವನ್ನು ಇಟ್ಟುಕೊಳ್ಳುವುದು ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುತ್ತದೆ ಮತ್ತು ಸಂಬಂಧಗಳಲ್ಲಿ ಮಾಧುರ್ಯವನ್ನು ತರುತ್ತದೆ.
ಮನೆಯ ಉತ್ತರ ದಿಕ್ಕಿನಲ್ಲಿ ಆಮೆಯನ್ನು ಇಡುವುದು ಪ್ರಯೋಜನಕಾರಿ. ಇದರಿಂದ ಮನೆಯಲ್ಲಿ ಕುಬೇರನ ಕೃಪೆ ನೆಲೆಸುತ್ತದೆ. ಇದರೊಂದಿಗೆ ಆರ್ಥಿಕ ಸಮಸ್ಯೆಗಳೂ ದೂರವಾಗುತ್ತವೆ.
Leave a Comment