ವಿದ್ಯಾರ್ಥಿಗಳೇ ಮೈಮರೆತರೇ ಹುಷಾರ್; 5 ಮತ್ತು 8ನೇ ತರಗತಿ ಮಕ್ಕಳನ್ನ ಪಾಸ್ ಮಾಡೋದು ಕಡ್ಡಾಯವಲ್ಲ ಎಂದ ಕೇಂದ್ರ
ನ್ಯೂಸ್ ಆ್ಯರೋ: 5ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳೇ ಇನ್ಮುಂದೆ ನೀವು ಎಚ್ಚರದಿಂದ ಇರಲೇಬೇಕು. ಇನ್ಮೇಲೆ ಫೇಲ್ ಆದ್ರೆ ಶಿಕ್ಷಕರು ಅನುಕಂಪದಲ್ಲಿ ಪಾಸ್ ಮಾಡಲ್ಲ ಎಚ್ಚರ. ಕೇಂದ್ರ ಸರ್ಕಾರ ಶಾಲೆಗಳಿಗೆ ಈಗ ಖಡಕ್ ಆದೇಶವನ್ನು ನೀಡಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಫೇಲ್ ಆಗುವ ಸಂಖ್ಯೆ ಕಡಿಮೆಯಾಗಿದೆ. ಕಾರಣ ಕೇಂದ್ರ ಸರ್ಕಾರ ಕೆಲ ವರ್ಷಗಳ ಹಿಂದೆ 5 ಮತ್ತು 8ನೇ ತರಗತಿ ಮಕ್ಕಳನ್ನು ಫೇಲ್ ಮಾಡಬಾರದು ಎಂದು ನೋ-ಡಿಟೆನ್ಷನ್ ಎಂಬ ನೀತಿಯನ್ನು ಜಾರಿಗೆ ತಂದಿತ್ತು. ಈ ನೀತಿ ಪ್ರಕಾರ, 5ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವ ಹಾಗಿರಲಿಲ್ಲ. ಇದೀಗ ಈ ನೀತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಕೇಂದ್ರದ ಹೊಸ ನಿಯಮ ಬರುತ್ತಿದ್ದಂತೆ ಪರ ಹಾಗೂ ವಿರೋಧಗಳ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ.
ಈ ಅನುತ್ತೀರ್ಣ ರಹಿತ ನೀತಿಯು ಶಿಕ್ಷಣ ಹಕ್ಕು ಕಾಯಿದೆಯಡಿ ಬರುತ್ತದೆ. ಈ ಕಾಯಿದೆಯ ಅಡಿ 1 ರಿಂದ 8ನೇ ತರಗತಿ ಪರೀಕ್ಷೆವರೆಗೂ ವಿದ್ಯಾರ್ಥಿಗಳಿಗೆ ಫೇಲ್ ಮಾಡುತ್ತಿರಲಿಲ್ಲ. ಈಗ ಕೇಂದ್ರ ಶಿಕ್ಷಣ ಸಚಿವಾಲಯ ಅನುತ್ತೀರ್ಣ ರಹಿತ ನೀತಿಯನ್ನೇ ರದ್ದು ಮಾಡಿದೆ. ಈಗಾಗಲೇ 16 ರಾಜ್ಯಗಳು ನೋ ಡೀಟೇನ್ಸನ್ ಪಾಲಿಸಿ ರದ್ದುಪಡಿಸಿವೆ.
5 ಮತ್ತು 8ನೇ ತರಗತಿ ಪರೀಕ್ಷೆಯಲ್ಲಿ ಏಕಾಏಕಿ ಪಾಸ್ ಮಾಡುವ ಹಾಗಿಲ್ಲ. ವಿದ್ಯಾರ್ಥಿಗಳು ಅನುತ್ತೀರ್ಣ ಆಗಿದ್ದೇ ಆದ್ರೆ ಅನುಕಂಪ ಆಧಾರದಲ್ಲಿ ಪಾಸ್ ಮಾಡುವಂತಿಲ್ಲ. ವಿದ್ಯಾರ್ಥಿ ಫೇಲ್ ಆದ್ರೆ ಎರಡು ತಿಂಗಳು ಅವಕಾಶ ಇರುತ್ತೆ. ವಿದ್ಯಾರ್ಥಿಗಳು ಪಾಸಾಗಲು ಶಿಕ್ಷಕರು ಸರಿಯಾದ ಮಾರ್ಗದರ್ಶನ ನೀಡಬೇಕು. 2 ತಿಂಗಳಲ್ಲಿ ಪುನರ್ ಪರೀಕ್ಷೆ ಬರೆದು ಉತ್ತೀರ್ಣ ಆಗುವ ಅವಕಾಶ ಕಲ್ಪಿಸಲಾಗಿದೆ. ಉತ್ತೀರ್ಣ ಆದ್ರೆ ಮುಂದಿನ ತರಗತಿಗೆ ಹೋಗಲು ಅವಕಾಶ ಇರುತ್ತದೆ. ವಿದ್ಯಾರ್ಥಿಗಳು ಸಪ್ಲಿಮೆಂಟರಿಯಲ್ಲೂ ಫೇಲ್ ಆದ್ರೆ ಅದೇ ತರಗತಿ ಮುಂದುವರೆಯಬೇಕಾಗುತ್ತದೆ.
ಫೇಲಾದ ವಿದ್ಯಾರ್ಥಿಯನ್ನು ಶಾಲೆಯಿಂದ ತೆಗೆದು ಹಾಕಬಾರದು. ನವೋದಯ, ಸೈನಿಕ ಶಾಲೆಗಳಲ್ಲಿ ಕಡ್ಡಾಯವಾಗಿ ರೂಲ್ಸ್ ಜಾರಿ ಮಾಡಲಾಗಿದೆ. ರಾಜ್ಯದ ಅನುದಾನಿತ ಶಾಲೆಗಳಲ್ಲಿ ಈ ನಿಯಮ ಇನ್ನೂ ಜಾರಿಗೆ ಬಂದಿಲ್ಲ. ಆಯಾ ರಾಜ್ಯ ಸರ್ಕಾರಗಳ ನಿರ್ಧಾರ ಎಂದು ಕೇಂದ್ರ ಶಿಕ್ಷಣ ಇಲಾಖೆ ಘೋಷಿಸಿದೆ.
Leave a Comment