ಮನೆ ಮೇಲೆ ಹದ್ದು ಹಾರಾಡೋದು ಶುಭವೋ? ಅಶುಭವೋ?; ಜ್ಯೋತಿಷ್ಯದಲ್ಲಿ ಈ ಕುರಿತು ಏನು ಹೇಳಲಾಗಿದೆ?

eagle
Spread the love

ಹದ್ದನ್ನು ಆಧ್ಯಾತ್ಮಿಕ ಭಾವನೆ, ಸ್ವಾತಂತ್ರ್ಯ ಮತ್ತು ಸ್ವಯಂ ಅಭಿವ್ಯಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತೆ. ಹಾಗೆಯೇ, ಜ್ಯೋತಿಷ್ಯದಲ್ಲಿ ಹದ್ದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದಲ್ಲಿ, ಹದ್ದಿಗೆ ಸಂಬಂಧಿಸಿದ ಅನೇಕ ಗಂಭೀರ ಚಿಹ್ನೆಗಳನ್ನು ವಿವರಿಸಲಾಗಿದೆ. ಅವುಗಳ ಬಗ್ಗೆ ತಿಳಿಯೋಣ.

ಜ್ಯೋತಿಷ್ಯದ ಪ್ರಕಾರ, ಹದ್ದು ಯಾವ ಮನೆಯಲ್ಲಿ ಕುಳಿತುಕೊಳ್ಳುತ್ತೋ ಆ ಮನೆಯ ಪ್ರಗತಿಯು ನಿಲ್ಲುತ್ತೆ. ದುರದೃಷ್ಟವು ಬಾಗಿಲು ತಟ್ಟಲು ಪ್ರಾರಂಭಿಸುತ್ತೆ ಮತ್ತು ಪ್ರತಿಯೊಂದು ಕೆಲಸಕ್ಕೂ ಅಡ್ಡಿಯಾಗುತ್ತೆ. ಮಾಡಿದ ಕೆಲಸವೂ ಹದಗೆಡಲು ಪ್ರಾರಂಭಿಸುತ್ತೆ.

ಹದ್ದು ತಲೆಯನ್ನು ಸ್ಪರ್ಶಿಸಿದ್ರೆ, ಅದು ಸಾವು ಅಥವಾ ಗಂಭೀರ ಅನಾರೋಗ್ಯದ ಸೂಚಕ. ಹದ್ದು ದೇಹದ ಇತರ ಯಾವುದೇ ಭಾಗವನ್ನು ಸ್ಪರ್ಶಿಸಿದ್ರೆ, ಜೀವನದಲ್ಲಿ ಸಂಕಟಗಳ ಅಲೆ ಇರುತ್ತೆ ಎಂದರ್ಥ. ಈ ಸಂದರ್ಭದಲ್ಲಿ ನೀವು ತುಂಬಾನೆ ಎಚ್ಚರವಾಗಿರಬೇಕು.

ಹದ್ದು ಮನೆಯ ಛಾವಣಿ ಮೇಲೆ ಕುಳಿತರೆ ಮತ್ತು ಶಬ್ಧ ಮಾಡುತ್ತಿದ್ದರೆ ಅದು ಮಂಗಳಕರವಾಗಿದೆ. ಇದರರ್ಥ ಬಿಕ್ಕಟ್ಟು ದೂರವಾಗುತ್ತೆ. ಬಾಯಿಯಲ್ಲಿ ಮಾಂಸವನ್ನು ಹೊತ್ತು ಹದ್ದು ನಿಮ್ಮ ಮನೆಗೆ ಬಂದರೆ, ಮನೆಯ ಶಾಂತಿ ಮತ್ತು ಸಂತೋಷಕ್ಕೆ ಭಂಗ ಉಂಟಾಗುತ್ತೆ ಎಂದರ್ಥ.

ಹದ್ದು ಬಾಲ್ಕನಿಗೆ ಅಥವಾ ಛಾವಣಿಗೆ ಬಂದು ಸಸ್ಯವನ್ನು ಕೊಕ್ಕಿದರೆ, ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತೆ. ಇದರರ್ಥ ಜೀವನದಲ್ಲಿ ಪ್ರಗತಿಯ ಹಾದಿ ತೆರೆಯಲಿದೆ ಮತ್ತು ಶೀಘ್ರದಲ್ಲೇ ಸಮಸ್ಯೆಗಳು ದೂರವಾಗುತ್ತವೆ.

ಹದ್ದು ನಿಮ್ಮ ಬಟ್ಟೆಗಳ ಮೇಲೆ ಯಾವುದೇ ರೀತಿಯ ಗುರುತನ್ನು ಹಾಕಿದರೆ, ಅದು ಗೌರವದ ಹೆಚ್ಚಳದ ಸೂಚಕ. ಬಹಳಷ್ಟು ಹದ್ದುಗಳು ಮನೆಯ ಛಾವಣಿಯ ಮೇಲೆ ಹಾರಲು ಪ್ರಾರಂಭಿಸಿದ್ರೆ, ಅದು ಖಂಡಿತವಾಗಿಯೂ ಬಹಳ ಅಶುಭ ಚಿಹ್ನೆಯಾಗಿದೆ.ಇದರರ್ಥ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತೆ ಮತ್ತು ಕುಟುಂಬ ಸಂಬಂಧಗಳಲ್ಲಿ ಬಿರುಕು ಉಂಟಾಗಲಿದೆ.

ತುಳಸಿ ಗಿಡದ ಮೇಲೆ ಹದ್ದು ಬಂದು ಕುಳಿತರೆ, ಅದು ಮನೆಯ ನಕಾರಾತ್ಮಕತೆಯನ್ನು ನಾಶಪಡಿಸುತ್ತೆ. ಹದ್ದು ಛಾವಣಿ ಅಥವಾ ಬಾಲ್ಕನಿಯಲ್ಲಿ ಇಟ್ಟ ನೀರನ್ನು ಕುಡಿದ್ರೆ, ಅದು ರೋಗ ಮತ್ತು ದೃಷ್ಟಿ ದೌರ್ಬಲ್ಯಕ್ಕೆ ಕಾರಣವಾಗುತ್ತೆ. ಇವು ಮನೆಯ ಛಾವಣಿಯ ಮೇಲೆ ಅಥವಾ ಮನೆಯ ಸುತ್ತಲೂ ಹಾರುತ್ತಿರುವ ಹದ್ದಿನಿಂದ ಕಂಡುಬರುವ ಶುಭ ಮತ್ತು ಅಶುಭ ಚಿಹ್ನೆಗಳಾಗಿವೆ.

Leave a Comment

Leave a Reply

Your email address will not be published. Required fields are marked *

error: Content is protected !!