ಡಿಜಿಟಲ್ ಅರೆಸ್ಟ್ ಸೋಗಿನಲ್ಲಿ ಬೆಂಗಳೂರಿನ ಟೆಕ್ಕಿಗೆ ದೋಖಾ; ಬರೋಬ್ಬರಿ ₹11 ಕೋಟಿ ವಂಚನೆ
ನ್ಯೂಸ್ ಆ್ಯರೋ: ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜನಿಯರ್ ಒಬ್ಬರಿಗೆ ಬರೋಬ್ಬರಿ 11 ಕೋಟಿ 83 ಲಕ್ಷ 55 ಸಾವಿರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಜಯ್ ಕುಮಾರ್ ಕೆ.ಎಸ್ ಎಂಬ ಸಾಫ್ಟ್‌ವೇರ್ ಉದ್ಯೋಗಿಗೆ ಡಿಜಿಟಲ್ ಅರೆಸ್ಟ್ ನೆಪದಲ್ಲಿ ಕೋಟಿ ಕೋಟಿ ವಂಚನೆ ಮಾಡಿದ್ದಾರೆ.
ಟ್ರಾಯ್ನಿಂದ ಕರೆ ಮಾಡುತ್ತಿರುವುದಾಗಿ ಕೇಳಿಕೊಂಡು ಆರೋಪಿಗಳು ಕರೆ ಮಾಡಿದ್ದಾರೆ. ನಂತರ ನಿಮ್ಮ ಅಧಾರ್ ಕಾರ್ಡ್ ಮನಿ ಲಾಂಡರಿಂಗ್ನಲ್ಲಿ ಬಳಕೆಯಾಗಿದೆ ಎಂದು ಆರೋಪಿಗಳು. ಮುಂಬೈನ ಕೊಲಾಬಾದಲ್ಲಿ ನಿಮ್ಮ ಮೇಲೆ ಪ್ರಕರಣ ದಾಖಲಾಗಿದ್ದು, ನಾವು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಅಂತ ಬೆದರಿಕೆ ಹಾಕಿದ್ದಾರೆ. ನಿಮ್ಮ ಆಧಾರ್ ಕಾರ್ಡ್ ಬಳಸಿ ಮನಿ ಲಾಂಡರಿಂಗ್ ಆಗಿದ್ದು ಆರು ಕೋಟಿ ವಂಚನೆ ಆಗಿದೆ, ಈಗ ಕೇಸ್ ಸುಪ್ರೀಂ ಕೋರ್ಟ್ ನಲ್ಲಿ ನಡೀತಾ ಇದೆ.
ನಂತರ ವಿಡಿಯೋ ಕಾಲ್ ಮಾಡಿ ನಿಮ್ಮನ್ನ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೇಳಿದ್ದಾರೆ. ಒಂದು ದಿನ ಪೂರ್ತಿ ಡಿಜಿಟಲ್ ಅರೆಸ್ಟ್ ಮಾಡಿದ್ದ ಆರೋಪಿಗಳು, ಈ ಸಮಯದಲ್ಲಿ ಹಂತ ಹಂತವಾಗಿ ಹಣ ಕಳಿಸಿಕೊಂಡಿದ್ದಾರೆ.
ಹಂತ ಹಂತವಾಗಿ ಸುಮಾರು 11 ಕೋಟಿ 83 ಲಕ್ಷ ಹಣ ಹಾಕಿಸಿಕೊಂಡಿದ್ದಾರೆ. ಈಶಾನ್ಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment