42ರ ಹರೆಯದ ಯೋಗರ್ಟ್ ಬ್ರ್ಯಾಂಡ್ ಸಂಸ್ಥಾಪಕ ನಿಧನ; ಇದ್ದಕ್ಕಿಂದ್ದಂತೆ ಖ್ಯಾತ ಉದ್ಯಮಿಗೆ ಏನಾಯ್ತು ?
ನ್ಯೂಸ್ ಆ್ಯರೋ: ವಯಸ್ಸು ಕೇವಲ 42. ಭಾರತದಲ್ಲಿ ಗ್ರೀಕ್ ಯೋಗರ್ಟ್ ಬ್ರ್ಯಾಂಡ್ ಸಂಸ್ಥೆ ಹುಟ್ಟುಹಾಕಿ ಅತೀ ದೊಡ್ಡ ಉದ್ಯಮವಾಗಿ ಬೆಳೆಸಿದ ರೋಹನ್ ಮಿರ್ಚಂದಾನಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಡ್ರಮ್ಸ್ ಫುಡ್ ಇಂಟರ್ನ್ಯಾಷನ್ ಕಂಪನಿಯ ಅಡಿಯಲ್ಲಿ ಎಪಿಗಮಿಯಾ ಸಂಸ್ಥೆ ಮೂಲಕ ಅಂತಾರಾಷ್ಟ್ರೀಯ ಯೋಗರ್ಟ್ ಬ್ರ್ಯಾಂಡ್ ಮಾಡಿದ ರೋಹನ್, ತೀವ್ರಗ ಹೃದಾಯಾಘತದಿದಂ ನಿಧನರಾಗಿರುವುದಾಗಿ ಕಂಪನಿ ಸ್ಪಷ್ಟಪಡಿಸಿದೆ.
ನ್ಯೂಯಾರ್ಕ್‌ನ ಎನ್‌ವೈಯೂ ಸ್ಕೂಲ್ ಆಫ್ ಬ್ಯೂಸಿನೆಸ್‌ನಲ್ಲಿ ಪದವಿ ಪಡೆದಿರುವ ರೋಹನ್ 2013ರಲ್ಲಿ ಎಪಿಗಮಿಯಾ ಸಂಸ್ಥೆ ಸಂಸ್ಥಾಪಕರಲ್ಲಿ ಹುಟ್ಟುಹಾಕಿದ್ದರು. ಅಂಕುಲ್ ಗೋಯಲ್ ಹಾಗೂ ಉದಯ್ ಥಕ್ಕರ್ ಜೊತೆ ಸೇರಿ ಎಪಿಗಮಿಯಾ ಸಂಸ್ಥೆ ಬೆಳೆಸಿದ ರೋಹನ್ ಮಿರ್ಚಂದಾನಿ ಅಗಲಿಕೆ ಆಘಾತ ನೀಡಿದೆ. ಕಿರಿಯ ವಯಸ್ಸಿನಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದ ರೋಹನ್ ಸಾವು ಹಲವರನ್ನು ಬೆಚ್ಚಿಬೀಳಿಸಿದೆ.
ರೋಹನ್ ದೂರದೃಷ್ಠಿಯುಳ್ಳ ನಾಯಕ, ರೋಹನ್ ಎಲ್ಲರಿಗೂ ಪ್ರೇರಣೆಯಾಗಿದ್ದರು. ಯಾವುದೇ ಸವಾಲನ್ನು ಮೆಟ್ಟಿನಿಲ್ಲಬಲ್ಲ ಸಾಮರ್ಥ್ಯ ರೋಹನ್‌ಗಿತ್ತು. ಹಲವು ಬಾರಿ ಸವಾಲುಗಳನ್ನು ಸುಲಭವಾಗಿ ಪರಿಹರಿಸಿ ಕಂಪನಿಗೆ ಹೊಸ ಮುನ್ನುಡಿ ಬರೆದಿದ್ದರು. ರೋಹನ್ ಅಗಲಿಕೆಗೆ ಕಂಪನಿ ಅಪಾರ ನಷ್ಟ ನಿಜ. ಅದಕ್ಕೂ ಮಿಗಿಲಾಗಿ ಒಂದೊಳ್ಳೆ ಸ್ನೇಹಿತ, ಮಾರ್ಗದರ್ಶಿ, ಹೈತಿಶಿಯನ್ನು ಕಳೆದುಕೊಂಡಿದ್ದೇವೆ. ಈ ದುಖು ಭರಿಸುವ ಶಕ್ತಿ ರೋಹನ್ ಕುಟುಂಬಸ್ಥರಿಗೆ ಭಗವಂತ ನೀಡಲಿ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ. ರೋಹನ್ ಹಾಕಿಕೊಟ್ಟ ಮಾರ್ಗ, ಸೂಚನೆ, ಎಚ್ಚರಿಕೆಯನ್ನು ಕಂಪನಿ ಪಾಲಿಸಲಿದೆ. ರೋಹನ್ ಮಾರ್ಗದಲ್ಲಿ ಕಂಪನಿ ಸಾಗಲಿದೆ ಎಂದು ಅಂಕುಲ್ ಗೋಯಲ್ ಹಾಗೂ ಉದಯ್ ಥಕ್ಕರ್ ಹೇಳಿದ್ದಾರೆ.
ಯೋಗರ್ಡ್ ಬ್ರ್ಯಾಂಡ್‌ನಲ್ಲಿ ಎಪಿಗಮಿಯಾ ಅತ್ಯಂಜ ಜನಪ್ರಿಯ ಬ್ರ್ಯಾಂಡ್ ಆಗಿದೆ. ಭಾರತದಲ್ಲಿ ಮಾತ್ರವಲ್ಲಇತೆರ ಕೆಲೆವೆಡಿ ಎಪಿಗಮಿಯಾ ಬ್ರ್ಯಾಂಡ್ ಲಭ್ಯವಿದೆ. ಕೇವಲ ಯೋಗರ್ಡ್ ಮಾತ್ರವಲ್ಲ, ಹಲವು ಉತ್ಪನ್ನಗಳು ಎಪಿಗಮಿಯಾ ಬ್ರ್ಯಾಂಡ್ ಅಡಿಯಲ್ಲಿ ಲಭ್ಯವಿದೆ. ಭಾರತದಲ್ಲಿ 30 ನಗರಗಳಲ್ಲಿ ಬರೋಬ್ಬರಿ 20,000 ರಿಟೇಲ್ ಟಚ್ ಪಾಯಿಂಟ್ಸ್ ಹೊಂದಿದೆ. 2025-26ರಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲೂ ಎಪಿಗಮಿಯಾ ಬ್ರ್ಯಾಂಡ್ ವಿಸ್ತರಿಸಲು ಕಂಪನಿ ನಿರ್ಧರಿಸಿದೆ.
Leave a Comment