ದೇವಸ್ಥಾನದ ಹುಂಡಿಗೆ ಬಿತ್ತು ಐಫೋನ್; ಆಡಳಿತ ಮಂಡಳಿ ಕೊಟ್ಟ ಉತ್ತರಕ್ಕೆ ಭಕ್ತ ಶಾಕ್

ನ್ಯೂಸ್ ಆ್ಯರೋ: ತಮಿಳಿನ ಪಲಯತು ಅಮ್ಮನ್ ಸಿನಿಮಾದಲ್ಲಿ ಮಹಿಳೆಯೊಬ್ಬಳು ಆಕಸ್ಮಿಕವಾಗಿ ತನ್ನ ಮಗುವನ್ನು ದೇವಸ್ಥಾನದ ಹುಂಡಿಗೆ ಹಾಕ್ತಾಳೆ. ಹುಂಡಿಯಲ್ಲಿ ಬಿದ್ದ ಮಗುವನ್ನು ದೇವಾಲಯದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇದು ರೀಲ್ ಕಥೆಯಾಗಿದ್ದು, ಜನರು ಇದನ್ನು ಎಂಜಾಯ್ ಮಾಡಿದ್ದರು. ಆದ್ರೆ ಸಿನಿಮಾ ದಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಇಂಥಹದ್ದೇ ಘಟನೆ ನಡೆದಿದೆ.
ಇಲ್ಲಿ ಮಗು ಬದಲು ಮಗುವಿನಂತೆ ಪ್ರೀತಿಸುವ ಮೊಬೈಲ್ ಹುಂಡಿಗೆ ಬಿದ್ದಿದೆ. ಸಾಮಾನ್ಯವಾಗಿ ದೇವಸ್ಥಾನದ ಹುಂಡಿಯಲ್ಲಿರುವ ಹಣ ಲೆಕ್ಕ ಹಾಕುವಾಗ ಅನೇಕ ವಿಚಿತ್ರ ವಸ್ತುಗಳು ಸಿಗ್ತಿರುತ್ತವೆ. ಅನೇಕ ಪತ್ರಗಳನ್ನು ಕೂಡ ಭಕ್ತರು ಹುಂಡಿಗೆ ಹಾಕ್ತಾರೆ. ಆದ್ರೆ ಇಲ್ಲಿ ಭಕ್ತ ಹುಂಡಿಗೆ ಹಣ ಹಾಕಿಲ್ಲ, ಆಕಸ್ಮಿಕವಾಗಿ ಮೊಬೈಲ್ ಹುಂಡಿಗೆ ಬಿದ್ದಿದೆ.
ಘಟನೆ ಚೆನ್ನೈ ಬಳಿಯ ತಿರುಪ್ಪೂರ್ನಲ್ಲಿರುವ ಅರುಲ್ಮಿಗು ಕಂದಸ್ವಾಮಿ ದೇವಾಲಯದಲ್ಲಿ ನಡೆದಿದೆ. ದೇವಸ್ಥಾನಕ್ಕೆ ಬಂದ ಭಕ್ತರೊಬ್ಬರು ಅಚಾತುರ್ಯದಿಂದ ಹುಂಡಿಗೆ ಮೊಬೈಲ್ ಹಾಕಿದ್ದಾರೆ. ಸಿನಿಮಾದಂತೆ ಇಲ್ಲಿನ ದೇವಸ್ಥಾನದ ಆಡಳಿತಮಂಡಳಿ ಕೂಡ ಫೋನ್ ವಾಪಸ್ ನೀಡದೆ, ಅದನ್ನು ದೇವಸ್ಥಾನದ ಆಸ್ತಿ ಎಂದು ಪರಿಗಣಿಸಿದೆ.
ಹುಂಡಿಯಲ್ಲಿ ಬಿದ್ದ ಐಫೋನ್ ದೇವರಿಗೆ ಸೇರಿದ್ದು ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದ್ದಾರೆ. ಇದ್ರಿಂದ ಭಕ್ತ ವಿನಯಗಾಪುರದ ದಿನೇಶ್ ಐಫೋನ ನ್ನು ದೇವರಿಗೆ ನೀಡಿ, ಬರಿಗೈನಲ್ಲಿ ಮನೆಗೆ ವಾಪಸ್ ಆಗಿದ್ದಾರೆ. ಆಡಳಿತ ಮಂಡಳಿ ಫೋನನ್ನು ದೇವಸ್ಥಾನದ ಆಸ್ತಿ ಎಂದು ಪರಿಗಣಿಸಿದೆ, ಆದ್ರೆ ಸಿಮ್ ಕಾರ್ಡ್ ಮತ್ತು ಡೇಟಾವನ್ನು ಇನ್ನೊಂದು ಮೊಬೈಲ್ಗೆ ಹಸ್ತಾಂತರಿಸಿಕೊಳ್ಳಲು ಅನುಮತಿ ನೀಡಿದೆ.
Leave a Comment