ಫುಟ್ಬಾಲ್ ಮೈದಾನದಲ್ಲೂ ‘ಕಾಂತಾರ’ ಹವಾ : ಸಾಮಾಜಿಕ ಜಾಲತಾಣದಲ್ಲಿ ಮೆಸ್ಸಿ – ಮರಡೋನಾ ಫೋಸ್ಟರ್ ವೈರಲ್
- ಕ್ರೀಡಾ ಸುದ್ದಿ
- December 21, 2022
- No Comment
- 2683
ನ್ಯೂಸ್ ಆ್ಯರೋ : ವಿಶ್ವದಾದ್ಯಂತ ಕಾಂತಾರ ಸಿನಿಮಾ ಮಾಡಿದ ಮೋಡಿ ವರ್ಣಿಸಲು ಅಸಾಧ್ಯವಾದದ್ದು. ಕಾಡಲ್ಲಿ ಒಂದು ಸೊಪ್ಪು ಸಿಗುತ್ತದೆ ಎಂಬ ಡೈಲಾಗ್‌ನಿಂದ ಹಿಡಿದು ದೈವದ ಕೂಗಿನ ದೃಶ್ಯದವರೆಗೆ ಅನೇಕ ವಿಡಿಯೋಗಳು ವೈರಲ್ ಆಗುತ್ತಿದೆ. ಈಗಾಗಲೇ ಸಿನಿಮಾದ ಹತ್ತಾರು ವಿಷಯಗಳನ್ನು ಇಟ್ಟುಕೊಂಡು ಮೀಮ್ಸ್ ಮಾಡಲಾಗಿದೆ.
ಇದೀಗ ಫಿಫಾ ವಿಶ್ವಕಪ್ ವಿಚಾರದಲ್ಲೂ ಇದು ಮುಂದುವರಿದಿದೆ. ‘ಕಾಂತಾರ’ ಚಿತ್ರದ ಪೋಸ್ಟರ್ ರೀತಿಯಲ್ಲಿ ಲಿಯೋನೆಲ್ ಮೆಸ್ಸಿ ಮತ್ತು ಡಿಯಾಗೋ ಮರಡೋನಾ ಅವರ ಮೀಮ್ ರಚಿಸಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಕಥಾನಾಯಕ ಶಿವನನ್ನು ಪಂಜುರ್ಲಿ ದೈವವು ಬಡಿದೆಬ್ಬಿಸುವ ಒಂದು ಸನ್ನಿವೇಶದ ಫೋಸ್ಟರ್ ‘ಕಾಂತಾರ’ ಹೈಲೈಟ್ ಆಗಿತ್ತು. ಅದೇ ಮಾದರಿಯಲ್ಲಿ ಈಗ ಲಿಯೋನೆಲ್ ಮೆಸ್ಸಿ ಮತ್ತು ಡಿಯಾಗೋ ಮರಡೋನಾ ಅವರ ಮೀಮ್ ಗಮನ ಸೆಳೆಯುತ್ತಿವೆ.
ಮೈದಾನದಲ್ಲಿ ಸುಸ್ತಾಗಿ ಮಲಗಿದ ಲಿಯೋನೆಲ್ ಮೆಸ್ಸಿ ಅವರನ್ನು ಡಿಯಾಗೋ ಮರಡೋನಾ ಅವರು ದೈವದ ರೀತಿಯಲ್ಲಿ ಕೂಗಿ ಎಬ್ಬಿಸುತ್ತಿರುವ ಹಾಗೆ ಈ ಮೀಮ್ ಮೂಡಿಬಂದಿದೆ. ಇದನ್ನು ‘ಕಾಂತಾರ’ ಪ್ರೇಕ್ಷಕರು ಮತ್ತು ಫುಟ್ಬಾಲ್ ಪ್ರಿಯರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಕ್ರಿಯೇಟಿವಿಟಿಗೆ ಅನೇಕರು ಭೇಷ್ ಎಂದಿದ್ದಾರೆ.