ಸಿಟಿ ರವಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಸಭಾಪತಿ; ಸೋಮವಾರ ವರದಿ ರಿಲೀಸ್ ಎಂದ ಹೊರಟ್ಟಿ!
ನ್ಯೂಸ್ ಆ್ಯರೋ: ಬಿಜೆಪಿ ಪರಿಷತ್ ಸದಸ್ಯ ಸಿ ಟಿ ರವಿ ತಮ್ಮ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ದೂರು ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಟಿ ರವಿ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಇದೀಗ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಹೇಳಿಕೆ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಗದ್ದಲ ಆರಂಭಿಸಿತ್ತು. ಈ ವೇಳೆ ಬಿಜೆಪಿ ಸಹ ಪ್ರತಿಭಟನೆಗೆ ಇಳಿದಿತ್ತು. ಇದರಿಂದ ಕಲಾಪ ನಡೆಸಲು ಸಾಧ್ಯವಾಗಲಿಲ್ಲ ಹಾಗಾಗಿ ಕಲಾಪವನ್ನು ಮುಂದೂಡಲಾಯಿತು. ಕಲಾಪ ಮುಂದೂಡಿದ ನಂತರ ಸದನದ ಮೈಕ್, ಆಡಿಯೋ ವಿಡಿಯೋ ಎಲ್ಲವೂ ಬಂದ್ ಮಾಡಿದ್ದರು ಎಂದು ಹೇಳಿದರು.
ಅಲ್ಲಿಂದ ನಾನು ಹೊರನಡೆದ ಬಳಿಕ ಲಕ್ಷ್ಮಿ ಹೆಬಾಳ್ಕರ್ ಬಂದು ನನಗೆ ಪ್ರಾಸ್ಟಿಟ್ಯೂಟ್ ಅಂತ ಬೈದಿದ್ದಾರೆ ಎಂದು ದೂರು ಹೇಳಿದರು. ನಾನು ಆಡಿಯೋ ವಿಡಿಯೋ ಎಲ್ಲವನ್ನೂ ಚೆಕ್ ಮಾಡಿದೆ. ಆಗ ಯಾವುದೇ ದಾಖಲೆ ಸಿಕ್ಕಿಲ್ಲ. ಸಿ.ಟಿ.ರವಿ ಬೈದಿರುವ ಯಾವುದೇ ವಿಡಿಯೋ, ಆಡಿಯೋ ಪೂಟೇಜ್ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಸದನದ ಕಲಾಪ ಮುಂದೂಡಿದ ನಂತರ ಈ ಘಟನೆ ನಡೆದಿದೆ. ಉಮಾಶ್ರೀ, ನಾಗರಾಜ್, ಯಾತಿಂದ್ರ ಬಂದು ಬೈದಿರುವುದನ್ನು ನಾವು ಕೇಳಿದ್ದೇವೆ ಎಂದು ಹೇಳಿದರು. ಮತ್ತೊಂದೆಡೆ ಸಿಟಿ ರವಿ ಬೈದಿಲ್ಲ ಅಂತ ಬಿಜೆಪಿ ನಾಯಕರು ಹೇಳಿದ್ದಾರೆ. ಅದನ್ನು ನಾವು ಸಾಕ್ಷಿ ಎಂದು ಪರಿಗಣಿಸಲು ಬರುವುದಿಲ್ಲ. ಸಿಟಿ ರವಿಯವರನ್ನ ಕರೆದು ಕೇಳಿದೆ. ಅವರು ಫ್ರಸ್ಟೇಟ್ ಅನ್ನೋ ಪದ ಬಳಸಿರೋದಾಗಿ ಹೇಳಿದ್ದಾರೆ ಎಂದರು.
ನಾನು ಸ್ಪಷ್ಟವಾದ ರೂಲಿಂಗ್ ಕೊಟ್ಟಿದ್ದೇನೆ, ಯಾವುದೇ ಗೊಂದಲದಲ್ಲಿ ರೂಲಿಂಗ್ ಕೊಟ್ಟಿಲ್ಲ. ಸದನ ಹೇಗೆ ನಡೆಸಬೇಕು ಅನ್ನೋದು ನನಗೆ ಗೊತ್ತಿದೆ ಎಂದುಹೊರಟ್ಟಿಯವರು ಮತ್ತೊಮ್ಮೆ ರೂಲಿಂಗ್ ಓದಿ ಹೇಳಿದರು. ಸಿ.ಟಿ.ರವಿ ಬಂಧನ ವಿಚಾರ ನನ್ನ ಗಮನಕ್ಕೆ ತಂದಿದ್ದಾರೆ. ಸುವರ್ಣ ಸೌಧ ಹೊರಗಡೆ, ಸಂಜೆ ಆರು ಗಂಟೆ ನಂತರ ಬಂಧನ ಪ್ರಕ್ರಿಯೆ ನಡೆಸಿದ್ದಾರೆ. ಎಲ್ಲ ವಿಚಾರಣೆ ನಡೆಸಿ ಸೋಮವಾರ ವರದಿ ಕೊಡ್ತೇನೆ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.
Leave a Comment