ʼನನ್ನ ಹಾಗೂ ಪುನೀತ್ 20 ವರ್ಷದ ಕನಸು ಈಗ ನನಸಾಗುತ್ತಿದೆʼ; ಖುಷಿ ಸುದ್ದಿ ಹಂಚಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್
ನ್ಯೂಸ್ ಆ್ಯರೋ: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ಅಪ್ಪು ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಅಜರಾಮರ. ನಗುಮೊಗದ ರಾಜಕುಮಾರನ ಬಗ್ಗೆ ಬಣ್ಣಿಸಲು ಪದಗಳೇ ಸಾಲದು.
20 ವರ್ಷದ ನಂತರ ಅಭಿಮಾನಿಗಳ ಅಪ್ಪು ಪುನೀತ್ ರಾಜ್‌ಕುಮಾರ್ ಅವರ ಕನಸನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನನಸು ಮಾಡುತ್ತಿದ್ದಾರೆ. ಇದರ ಜೊತೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಶಿಕ್ಷಣ ಕ್ಷೇತ್ರ ಪ್ರವೇಶಿಸುವುದು ನನ್ನ ಹಾಗೂ ಪುನೀತ್ ಅವರ 20 ವರ್ಷದ ಕನಸು ಈಗ ನನಸಾಗುತ್ತಿದೆ. ಬೆಂಗಳೂರಲ್ಲಿ ಟೋಸ್ ಇಂಟರ್‌ನ್ಯಾಷನಲ್ ಪ್ರೀಸ್ಕೂಲ್ ಆರಂಭಿಸುವ ತಮ್ಮ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ಕನಸಿನಂತೆ ಶಿಕ್ಷಣ ಕ್ಷೇತ್ರಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪ್ರವೇಶ ಮಾಡಿದ್ದಾರೆ. 20 ವರ್ಷದ ನಂತರ ನನ್ನ ಹಾಗೂ ಪುನೀತ್ ಕನಸು ಈಗ ನನಸಾಗುತ್ತಿದೆ. ಜೂನಿಯರ್ ಟೋಸ್ ಪ್ರೀಸ್ಕೂಲ್ ಮುಖಾಂತರ ನಾನು ನನ್ನ ಜರ್ನಿಯನ್ನು ಪ್ರಾರಂಭಿಸುತ್ತಿದ್ದೇನೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ನನ್ನ ಮೊದಲನೇ ಹೆಜ್ಜೆ ಇಡುತ್ತಿದ್ದೇನೆ. ಮಕ್ಕಳಲ್ಲಿ ಒಳ್ಳೆಯ ಕ್ಯಾರೆಕ್ಟರ್, ಲೀಡರ್ ಶಿಪ್ ಬೆಳೆಸುವುದು ನಮ್ಮ ಶಾಲೆಯ ಉದ್ದೇಶ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣತಿ ಗಳಿಸಿದವರು ನಮ್ಮ ಜೊತೆಗೆ ಇರುತ್ತಾರೆ ಎಂದಿದ್ದಾರೆ.
Leave a Comment