ಇನ್ನು ಯಾರೂ ಬೇಕಾದರೂ ಟ್ವಿಟರ್ ನಲ್ಲಿ ಬ್ಲೂ ಟಿಕ್ ಪಡೆಯಬಹುದು – ಪದಮಿತಿ 4 ಸಾವಿರದವರೆಗೆ ಏರಿಕೆ, ಆ್ಯಪಲ್ ಫೋನ್ ಬಳಕೆದಾರರಿಗೆ ದುಬಾರಿಯಾಗಲಿದೆ ಟ್ವಿಟರ್..!!

ಇನ್ನು ಯಾರೂ ಬೇಕಾದರೂ ಟ್ವಿಟರ್ ನಲ್ಲಿ ಬ್ಲೂ ಟಿಕ್ ಪಡೆಯಬಹುದು – ಪದಮಿತಿ 4 ಸಾವಿರದವರೆಗೆ ಏರಿಕೆ, ಆ್ಯಪಲ್ ಫೋನ್ ಬಳಕೆದಾರರಿಗೆ ದುಬಾರಿಯಾಗಲಿದೆ ಟ್ವಿಟರ್..!!

ನ್ಯೂಸ್ ಆ್ಯರೋ : ಟ್ವೀಟ್ ಮಾಡುವ ಸಂದರ್ಭದಲ್ಲಿ ಅದರಲ್ಲಿನ ಪದ ಮಿತಿಯನ್ನು 280ರಿಂದ 4,000ಕ್ಕೆ ಏರಿಕೆ ಮಾಡುವುದಾಗಿ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ. ಓರ್ವ ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿ, ಮಸ್ಕ್ ಅವರಲ್ಲಿ ಟ್ವೀಟ್ ಪದ ಮಿತಿಯನ್ನು ಏರಿಕೆ ಮಾಡುವಿರಾ ಎಂದು ಕೇಳಿದ್ದರು. ಇದಕ್ಕೆ ಮಸ್ಕ್ ಹೌದು‌ ಎಂದು‌ ಉತ್ತರ ನೀಡಿದ್ದಾರೆ.

ಸದ್ಯ ಮೈಕ್ರೋ ಬ್ಲಾಗಿಂಗ್ ಎಂಬ ಹಣೆಪಟ್ಟಿಯನ್ನು ಹೊಂದಿರುವ ಟ್ವಿಟ್ಟರ್ ತನ್ನ ಟ್ವಿಟ್ ನ ಅಕ್ಷರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಿರುವ ವಿಚಾರವನ್ನು ಎಲೋನ್ ಮಸ್ಕ್ ತಿಳಿಸಿದ್ದಾರೆ. ಇತ್ತೀಚಿಗೆ ಬ್ಲೂ ಟಿಕ್ ಸೇವೆಯನ್ನು ಮತ್ತೊಮ್ಮೆ ಆರಂಭ ಮಾಡಿರುವ ಕುರಿತು ಮಾಹಿತಿ ನೀಡಿದ್ದರು. ಇದೇ ಸಮಯದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಅಕ್ಷರ ಮಿತಿಯನ್ನು ಹೆಚ್ಚಿಸಿರುವ ಕುರಿತು ಮಾಹಿತಿ ನೀಡಿದ್ದಾರೆ.

ಅಲ್ಲದೇ ಟ್ವಿಟ್ಟರ್ ನಲ್ಲಿ ಬ್ಲೂ ಟಿಕ್ ಪಡೆದುಕೊಳ್ಳಲು ಅವಕಾಶವನ್ನು ಮತ್ತೊಮ್ಮೆ ತೆರೆಯಲಾಗಿದೆ. ಈ ಬಾರಿ ಆಪಲ್ ಗ್ರಾಹಕರಿಗೆ ಸ್ವಲ್ಪ ವೆಚ್ಚದಾಯಕವಾಗಲಿದೆ. ಆ್ಯಪಲ್ ಗ್ರಾಹಕರು ಬ್ಲೂ ಟಿಕ್ ಪಡೆಯಲು 11 ಡಾಲರ್ ವ್ಯಯಿಸಬೇಕಿದೆ.

ಇನ್ನುಳಿದಂತೆ ಟ್ವಿಟರ್ ಬ್ಲೂ ಚಂದಾದಾರಿಕೆಯನ್ನು ಯಾವ ವ್ಯಕ್ತಿ ಬೇಕಾದರೂ ಖರೀದಿಸಬಹುದು. ಇದಕ್ಕೆ ಸೆಲೆಬ್ರಿಟಿಗಳೇ ಆಗಬೇಕು ಅಥವಾ ಕಂಪನಿಗಳು ಮತ್ತು ರಾಜಕಾರಣಿಗಳೇ ಆಗಬೇಕಂತಿಲ್ಲ. ಓರ್ವ ಸಾಮಾನ್ಯ ವ್ಯಕ್ತಿ ಕೂಡ ಟ್ವಿಟರ್ ಬ್ಲೂ ಚಂದಾದಾರಿಕೆಯನ್ನು ಖರೀದಿಸಲು ಎಲಾನ್ ಮಸ್ಕ್ ಅವಕಾಶ ನೀಡಿದ್ದಾರೆ. ಬ್ಲೂ ಚಂದಾದಾರಿಕೆ ವೆಬ್ ಮೂಲಕ ಬಳಕೆಗೆ ತಿಂಗಳಿಗೆ 8 ಡಾಲರ್ ಪಾವತಿಸಬೇಕು. ಅಂದರೆ 660 ರೂಪಾಯಿಯಷ್ಟಾಗಲಿದೆ.

ಆದರೆ ಆಯಪಲ್ ಐಓಸ್ ಮೂಲಕ ತಿಂಗಳಿಗೆ 11 ಡಾಲರ್ ಪಾವತಿ ಮಾಡಬೇಕು ಎಂದು ಟ್ವಿಟರ್ ಹೇಳಿದೆ. ಅಂದರೆ 906 ರೂಪಾಯಿಯಷ್ಟು ವೆಚ್ಚವಾಗುತ್ತದೆ. ಆಪಲ್ ಬಳಕೆದಾರರಿಗೆ ಇತರರಿಗಿಂತ ಹೆಚ್ಚಿನ ಶುಲ್ಕವನ್ನು ಏಕೆ ವಿಧಿಸಲಾಗುತ್ತಿದೆ ಎಂಬುದನ್ನು ಟ್ವಿಟರ್ ವಿವರಿಸಲಿಲ್ಲ. ಆದರೆ ಆಪ್ ಸ್ಟೋರ್‌ ನಲ್ಲಿ ವಿಧಿಸಲಾದ ಶುಲ್ಕವನ್ನು ಸರಿದೂಗಿಸಲು ಕಂಪನಿಯು ಈ ಮಾರ್ಗವನ್ನು ಆಯ್ಕೆ ಮಾಡಿದೆ ಹೇಳಲಾಗಿದೆ.

ಇನ್ನು ಟ್ವಟರ್ ಬ್ಲೂ ಚಂದಾದಾರಿಕೆ ಆಯ್ಕೆ ಪಡೆದುಕೊಂಡರೆ ಕಡಿಮೆ ಜಾಹೀರಾತುಗಳನ್ನು ಪಡೆಯಬಹುದಾಗಿದೆ. ಜೊತೆಗೆ ತುಂಬಾ ದೊಡ್ಡದಾದ ವಿಡಿಯೋಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ ಮತ್ತು ಅವರ ಟ್ವೀಟ್‌ಗಳನ್ನು ಹೆಚ್ಚು ಶೇರ್​ ಆಗುವಂತೆ ಮಾಡುತ್ತದೆ.

ಬಳಕೆದಾರರು ಟ್ವೀಟ್​ಗಳನ್ನು ಎಡಿಟ್ ಮಾಡಲು, 1080p ವೀಡಿಯೊಗಳನ್ನು ಅಪ್‌ ಲೋಡ್ ಮಾಡಲು ಮತ್ತು ಬ್ಲೂ ಚೆಕ್‌ಮಾರ್ಕ್ ಪೋಸ್ಟ್ ಖಾತೆ ಪರಿಶೀಲನೆಯನ್ನು ಪಡೆಯಲು ಅನುಮತಿಸುವ ಈ ಸೇವೆಗೆ ಬಳಕೆದಾರರು ಚಂದಾದಾರರಾಗಬಹುದು ಎಂದು ಕಂಪನಿ ಹೇಳಿದೆ. ಒಟ್ಟಿನಲ್ಲಿ ಎಲಾನ್ ಮಸ್ಕ್ ಟ್ವಿಟರ್ ಮಾಲೀಕನಾದ ಬಳಿಕ ಒಂದಿಲ್ಲೊಂದು ಕಾರಣಕ್ಕಾಗಿ ಟ್ವಿಟರ್ ಸುದ್ದಿಯಾಗುತ್ತಿರೋದು ಮಾತ್ರ ಸುಳ್ಳಲ್ಲ…!!

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *