ಎಸ್ಬಿಐ ನಲ್ಲಿ 13 ಸಾವಿರಕ್ಕೂ ಹೆಚ್ಚು ಕೆಲಸಗಳಿಗೆ ಅರ್ಜಿ ಆಹ್ವಾನ; ಆಯ್ಕೆ ಪ್ರಕ್ರಿಯೆ, ಪರೀಕ್ಷೆ, ದಿನಾಂಕಗಳ ಮಾಹಿತಿ ಇಲ್ಲಿದೆ
ನ್ಯೂಸ್ ಆ್ಯರೋ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಬೃಹತ್ ಮಟ್ಟದಲ್ಲಿ ಉದ್ಯೋಗಗಳನ್ನು ನೇಮಕ ಮಾಡುತ್ತಿದ್ದು ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಿದೆ. ಬ್ಯಾಂಕ್ನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಗೋಲ್ಡನ್ ಚಾನ್ಸ್ ಆಗಿದೆ. ಹೀಗಾಗಿ ಬ್ಯಾಂಕ್ನಲ್ಲಿ ಕೆಲಸ ಮಾಡಲು ಇಷ್ಟ ಇರುವವರು ತಪ್ಪದೇ ಈ ಹುದ್ದೆಗಳಿಗೆ ಅಪ್ಲೇ ಮಾಡಬಹುದು. ಇಂದಿನಿಂದ ಆನ್ಲೈನ್ ಅರ್ಜಿ ಪ್ರಕ್ರಿಯೆಗಳು ಆರಂಭಗೊಂಡಿವೆ. ಹೀಗಾಗಿ ಈ ಕ್ಷಣದಿಂದಲೇ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಈ ಬೃಹತ್ ಪ್ರಮಾಣದ ನೇಮಕದಲ್ಲಿ ಕರ್ನಾಟಕಕ್ಕೂ 203 ಉದ್ಯೋಗಗಳು ಮೀಸಲಿವೆ.
ಎಸ್ಬಿಐ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ, ಎಷ್ಟು ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಯಾವ ಕೆಲಸಗಳು, ಅಭ್ಯರ್ಥಿಗಳು ಯಾವ ಕೋರ್ಸ್ ಅನ್ನು ಪೂರ್ಣಗೊಳಿಸಿರಬೇಕು ಎನ್ನುವ ಇತ್ಯಾದಿ ಮಾಹಿತಿಗಳು ಇಲ್ಲಿ ನೀಡಲಾಗಿದೆ. ಹೀಗಾಗಿ ಆಸಕ್ತರು ಪೂರ್ಣವಾಗಿ ಈ ಆರ್ಟಿಕಲ್ ಮನನ ಮಾಡಿಕೊಂಡು ಬಳಿಕ ಮುಂದಿನ ಕೆಲಸ ಮಾಡಬಹುದು.
ಹುದ್ದೆಯ ಹೆಸರು:
ಜೂನಿಯರ್ ಅಸೋಸಿಯೇಟ್ (Customer Support & Sales)/ Clerk
ತಿಂಗಳ ಸ್ಯಾಲರಿ ಹೇಗಿದೆ..?
24,050 ರಿಂದ 64,480 ರೂಪಾಯಿಗಳು
ಒಟ್ಟು ಹುದ್ದೆಗಳು- 13,735
ಕೆಲಸದ ಸ್ಥಳ ದೇಶದ್ಯಾಂತ
ಲಡಾಖ್ನಲ್ಲಿ 50 ಹುದ್ದೆಗಳಿವೆ
ವಿದ್ಯಾರ್ಹತೆ:
ವಿಶ್ವವಿದ್ಯಾಲಯದಿಂದ ಯಾವುದೇ ಪದವಿ
ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 17 ಡಿಸೆಂಬರ್ 2024
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 7 ಜನವರಿ 2025
ವಯೋಮಿತಿ– 20 ರಿಂದ 28 ವರ್ಷಗಳು
ಆಯ್ಕೆ ಪ್ರಕ್ರಿಯೆ ಈ ರೀತಿ ಇರುತ್ತದೆ:
ಪೂರ್ವಭಾವಿ ಪರೀಕ್ಷೆ (Preliminary Exam)
ಮುಖ್ಯ ಪರೀಕ್ಷೆ (Mains Exam)
ಭಾಷಾ ಪ್ರಾವೀಣ್ಯತೆ ಪರೀಕ್ಷೆ
(4 ಪ್ರಶ್ನೆಗಳನ್ನು ತಪ್ಪಾಗಿ ಬರೆದರೆ 1 ಅಂಕ ಕಡಿತ ಇರುತ್ತದೆ)
ಅರ್ಜಿ ಶುಲ್ಕ ಎಷ್ಟು ಇದೆ..?
ಜನರಲ್, ಒಬಿಸಿ, ಎಡಬ್ಲುಎಸ್- 750 ರೂಪಾಯಿ
ಎಸ್ಸಿ, ಎಸ್ಟಿ, ವಿಶೇಷ ಚೇತನರಿಗೆ ಶುಲ್ಕವಿಲ್ಲ
ಅರ್ಜಿ ಸಲ್ಲಿಕೆ ಮಾಡಲು ವೆಬ್ಸೈಟ್:- https://ibpsonline.ibps.in/sbidrjadec24/
Leave a Comment