ಶಬರಿಮಲೆಯಲ್ಲಿ ಆತ್ಮಹತ್ಯೆಗೆ ಶರಣಾದ ಕರ್ನಾಟಕದ ಮಾಲಾಧಾರಿ; ಮೇಲ್ಸೇತುವೆ ಮೇಲಿಂದ ಜಿಗಿದ ದೃಶ್ಯ ವೈರಲ್

Sabarimala
Spread the love

ನ್ಯೂಸ್ ಆ್ಯರೋ: ಕೇರಳದ ‌ಶಬರಿಮಲೆ ಅಯ್ಯಪ್ಪ ದೇವಸ್ಥಾನ ಬಳಿ ಇರುವ ಮಲ್ಲಿಕ್​ ಪುರಂ ಮೇಲ್ಸೇತುವೆ ಮೇಲಿಂದ ಜಿಗಿದು ಕನಕಪುರ ಮೂಲದ ಅಯ್ಯಪ್ಪ ಮಾಲಾಧಾರಿ ಮೃತಪಟ್ಟಿದ್ದಾರೆ. ಕನಕಪುರ ನಿವಾಸಿ ಕುಮಾರಸ್ವಾಮಿ (40)‌ ಮೃತ ಅಯ್ಯಪ್ಪ ಮಾಲಾಧಾರಿ.

ಕುಮಾರಸ್ವಾಮಿ ಅವರು ಮೂರು ದಿನದ ಹಿಂದೆ ಶಬರಿಮಲೆಗೆ ತೆರಳಿದ್ದರು. ಕುಮಾರಸ್ವಾಮಿ ಅವರು ಸೋಮವಾರ (ಡಿ.16) ಸಂಜೆ ದೇವಸ್ಥಾನದ ಸನ್ನಿಧಾನದಿಂದ ಮಲ್ಲಿಕ್ ಪುರಂಗೆ ಸಂಪರ್ಕಿಸುವ ಮೇಲ್ಸೇತುವೆ ಮೇಲಿಂದ ಕೆಳಗೆ ಜಿಗಿದಿದ್ದಾರೆ. ಇದರ ದೃಶ್ಯ ಕೂಡಾ ವೈರಲ್‌ ಆಗಿದೆ.

ಕೆಳಗೆ ಬಿದ್ದ ರಭಸಕ್ಕೆ ಅವರ ಕೈ ಮತ್ತು ಕಾಲಿಗೆ ಗಾಯವಾಗಿತ್ತು. ಅವರನ್ನು ಮೊದಲು ಸನ್ನಿಧಾನಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಪಂಪಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಸಿಟಿ ಸ್ಕ್ಯಾನ್ ಸೇರಿದಂತೆ ಹೆಚ್ಚಿನ ಪರೀಕ್ಷೆಗಳಿಗಾಗಿ ಅವರನ್ನು ಕೊಟ್ಟಾಯಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ದುರಾದೃಷ್ಟವಶಾತ್​ ಕುಮಾರಸ್ವಾಮಿ ಅವರು ಹೃದಯಾಘಾತದಿಂದ ಮೃತಪಟ್ಟರು ಎಂದು ವರದಿಯಾಗಿದೆ.

ಇನ್ನು, ವಿಚಾರ ತಿಳಿಯುತ್ತಿದ್ದಂತೆ ಕೇರಳ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸರು ನೀಡಿದ ಮಾಹಿತಿ ಪ್ರಕಾರ ಕುಮಾರಸ್ವಾಮಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.

https://twitter.com/Madrassan_Pinky/status/1868880598846308474?ref_src=twsrc%5Etfw%7Ctwcamp%5Etweetembed%7Ctwterm%5E1868880598846308474%7Ctwgr%5Ef92259b6bf2c259e149dbcdedf1eb4be5c4dc7ea%7Ctwcon%5Es1_&ref_url=https%3A%2F%2Ftv9kannada.com%2Fkarnataka%2Framanagara%2Fkanakapura-sabarimala-ayyappa-devotee-dies-after-falling-from-overpass-in-sabarimala-kannada-news-vkb-951042.html

Leave a Comment

Leave a Reply

Your email address will not be published. Required fields are marked *

error: Content is protected !!