ಬೇಲ್ ಸಿಕ್ಕ 3 ದಿನಗಳ ನಂತರ ಬಿಡುಗಡೆ ಭಾಗ್ಯ; ಪರಪ್ಪನ ಅಗ್ರಹಾರದಿಂದ ನಗು ನಗುತ್ತ ಹೊರ ಬಂದ ಪವಿತ್ರ ಗೌಡ
ನ್ಯೂಸ್ ಆ್ಯರೋ: ರೇಣುಕಾಸ್ವಾಮಿ ಕೇಸ್ನಲ್ಲಿ ಜೈಲು ಸೇರಿದ್ದ ನಟಿ ಪವಿತ್ರ ಗೌಡ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿದ್ದಾರೆ. ಇಂದು ಬೆಳಗ್ಗೆ ಜೈಲಿನಿಂದ ಬಿಡುಗಡೆಗೊಂಡರು. ಜೂನ್ 11 ರಂದು ಅರೆಸ್ಟ್ ಆಗಿದ್ದ ಪವಿತ್ರಾಗೌಡ, ಜೂನ್ 20 ರಂದು ಜೈಲು ಸೇರಿದ್ದರು. ಬರೋಬ್ಬರಿ ಆರು ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ.
ಪ್ರಕರಣಲ್ಲಿ ಮೊದಲ ಆರೋಪಿ ಆಗಿರುವ ಪವಿತ್ರ ಗೌಡಗೆ ಕಳೆದ ಶುಕ್ರವಾರ ಹೈಕೋರ್ಟ್ ಜಾಮೀನು ಸಿಕ್ಕಿತ್ತು. ಬೇಲ್ ಸಿಕ್ಕಿ 4 ದಿನ ಕಳೆದ್ರೂ ಪವಿತ್ರಾಗೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಬಿಡುಗಡೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬೆನ್ನಲ್ಲೇ ಜೈಲಿನಿಂದ ರಿಲೀಸ್ ಆದರು. ಬಿಡುಗಡೆ ಬೆನ್ನಲ್ಲೇ ನಗುನಗುತ್ತ ಹೊರ ಬಂದರು.
ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಅವರು ತಾಯಿ ಮಗಳನ್ನು ಬರಮಾಡಿಕೊಂಡರು. ಅದಕ್ಕೂ ಮೊದಲು ಜೈಲಿನ ಎದುರು ಇರುವ ಮುನೇಶ್ವರ ದೇಗುಲಕ್ಕೆ ಪೂಜೆ ಸಲ್ಲಿಸಿದರು.
ನಿಂಬೆ ಹಣ್ಣು ಹಾಗೂ ಹಾರ ಹಾಕಿ ಪವಿತ್ರಗೌಡ ತಾಯಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪವಿತ್ರ ಗೌಡ ರಿಲೀಸ್ ಆಗ್ತಿದ್ದಂತೆಯೇ ಅದೇ ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೂಶ್ ಕೂಡ ಜೈಲಿನಿಂದ ರಿಲೀಸ್ ಆಗಿದ್ದಾನೆ.
Leave a Comment