ಪ್ರವಾಸಿಗರಿಗೆ ಶಾಕಿಂಗ್ ನ್ಯೂಸ್: ಮೂರು ತಿಂಗಳುಗಳ ಕಾಲ ಜೋಗ್ ಫಾಲ್ಸ್ ಗೆ ನೋ ಎಂಟ್ರಿ !!

jog-falls
Spread the love

ನ್ಯೂಸ್ ಆ್ಯರೋ: ಪ್ರವಾಸಕ್ಕೆ ಹೊರಟಿರುವ ಪ್ರವಾಸಿಗರು ಒಮ್ಮೆ ಈ ಕಡೆ ಗಮನಕೊಡಿ. ಅದರಲ್ಲಿ ಜೋಗ ಜಲಪಾತದ ಕಡೆ ಹೋಗುವವರಿಗೆ ಇದು ಅತ್ಯಂತ ಮುಖ್ಯವಾದ ಮಾಹಿತಿ ಆಗಿದೆ. ಏಕೆಂದರೆ ಜೋಗ ಜಲಪಾತದ ಪ್ರವೇಶಕ್ಕೆ ತಾತ್ಕಾಲಿಕವಾಗಿ ಜಿಲ್ಲಾಧಿಕಾರಿಯವರು ನಿರ್ಬಂಧ ಹಾಕಿದ್ದಾರೆ.

ಹೌದು. . ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಜನವರಿ 01 ರಿಂದ ಮಾರ್ಚ್ 15ರ ವರೆಗೆ 3 ತಿಂಗಳುಗಳ ಕಾಲ ಸಾರ್ವಜನಿಕರ ಮತ್ತು ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಶಿವಮೊಗ್ಗ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಜೋಗ ಜಲಪಾತದ ಮುಖ್ಯದ್ವಾರದ ಕಾಮಗಾರಿ ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ತೊಂದರೆಯಾಗಬಾರದೆಂಬ ಕಾರಣದಿಂದ ಪ್ರವೇಶ ನಿರ್ಬಂಧಿಸಿಸಲಾಗಿದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರು ಸಹಕರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೋಗ ಜಲಪಾತದ ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನವರಿ 1ರಿಂದ ಮಾರ್ಚ್ 15ರವರೆಗೆ ಅಂದರೆ ಒಟ್ಟು 74 ದಿನಗಳವರೆಗೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಪ್ರವೇಶವನ್ನು ಬಂದ್ ಮಾಡಲಾಗಿರುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!