ಜೈಲಿನಿಂದ ಹೊರ ಬಂದ ಅಲ್ಲು ಮೊದಲ ರಿಯಾಕ್ಷನ್; ದೂರಿದ್ದು ಯಾರನ್ನ ಗೊತ್ತೇ? ಏನಂದ್ರು?

All Arjun
Spread the love

ನ್ಯೂಸ್ ಆ್ಯರೋ: ಹೈದರಾಬಾದ್​ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಎ11 ಆರೋಪಿ ಆಗಿರೋ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಈಗ ಅವರು ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. ಜೈಲಿನಿಂದ ಇಂದು ಮುಂಜಾನೆ ರಿಲೀಸ್ ಆದ ಅವರು, ಪೊಲೀಸ್ ಭಧ್ರತೆಯೊಂದಿಗೆ ನೇರವಾಗಿ ಮನೆ ಸೇರಿದರು. ಅವರು ನಿವಾಸಕ್ಕೆ ಬಂದ ಬಳಿಕ ಮಾಧ್ಯಮಗಳಿಗೆ ರಿಯಾಕ್ಷನ್ ನೀಡಿದ್ದಾರೆ. ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳುವುದನ್ನು ಮರೆತಿಲ್ಲ. ಜೊತೆಗೆ ಕಾನೂನಿಗೆ ತಲೆ ಬಾಗೋದಾಗಿ ಹೇಳಿದ್ದಾರೆ.

‘ಅಭಿಮಾನಿಗಳಿಗೆ ಧನ್ಯವಾದ. ನಾನು ಆರಾಮಗಿದ್ದೇನೆ. ಆ ಬಗ್ಗೆ ಚಿಂತಿಸೋದು ಬೇಡ. ನಾನು ಕಾನೂನನ್ನು ಗೌರವಿಸುತ್ತೇನೆ. ನಾನು ತನಿಖೆಗೆ ಸಹಕರಿಸುತ್ತೇನೆ’ ಎಂದು ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಮೃತಪಟ್ಟ ರೇವತಿ ಕುಟುಂಬದವರ ಬಗ್ಗೆ ಮಾತನಾಡಲು ಮರೆತಿಲ್ಲ.

‘ನಾನು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಸಿನಿಮಾ ನೋಡಲು ಹೋದಾಗ ಈ ಘಟನೆ ನಡೆಯಿತು. ಅದು ಅಚಾನಕ್ಕಾಗಿ ಆಗಿದ್ದು. ಅದೊಂದು ಅಪಘಾತ’ ಎಂದಿದ್ದಾರೆ ಅಲ್ಲು ಅರ್ಜುನ್. ‘ಆ ರೀತಿ ಮಾಡಬೇಕು ಎಂಬ ಯಾವುದೇ ಉದ್ದೇಶ ಇರಲಿಲ್ಲ. ಅವರ ಕುಟುಂಬಕ್ಕೆ ನಾನು ಕ್ಷಮೆ ಕೇಳುತ್ತೇನೆ. ಅದು ನನ್ನ ವೈಯಕ್ತಿಕ ನಿಯಂತ್ರಣದಲ್ಲಿ ಇರಲಿಲ್ಲ. ನಾನು ಕಳೆದ 20 ವರ್ಷಗಳಿಂದ ಅಲ್ಲಿಗೆ ಸಿನಿಮಾ ನೋಡಲು ಹೋಗುತ್ತಿದ್ದೇನೆ.

ನನ್ನದು ಮಾತ್ರವಲ್ಲದೆ, ನನ್ನ ಅಂಕಲ್ ಸಿನಿಮಾಗಳನ್ನೂ ಅಲ್ಲಿ ನೋಡಿದ್ದೇನೆ. 30ಕ್ಕೂ ಹೆಚ್ಚು ಬಾರಿ ಆ ಥಿಯೇಟರ್​ಗೆ ಭೇಟಿ ಕೊಟ್ಟಿದ್ದೇನೆ. ಯಾವಾಗಲೂ ಈ ರೀತಿ ಆಗಿರಲಿಲ್ಲ. ಸಾವಿನ ನಷ್ಟ ತುಂಬಲು ಸಾಧ್ಯವಿಲ್ಲ. ಆದರೆ, ನನ್ನ ಕೈಲಾದ ಸಹಾಯ ಮಾಡುತ್ತೇನೆ’ ಎಂದು ಅಲ್ಲು ಅರ್ಜುನ್ ಭರವಸೆ ನೀಡಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!