ವಿಶ್ವ ಚೆಸ್ ಚಾಂಪಿಯನ್‌ಶಿಪ್ 2024; ವಿಶ್ವ ಚೆಸ್ ಕಿರೀಟ ತೊಟ್ಟ ಭಾರತದ ಡಿ. ಗುಕೇಶ್
ನ್ಯೂಸ್ ಆ್ಯರೋ: ಭಾರತದ ಡಿ. ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಎನಿಸಿಕೊಂಡಿದ್ದಾರೆ. 14 ಸುತ್ತುಗಳ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿದ್ದ ಚೀನಾದ ಡಿಂಗ್ ಲಿರೆನ್‌ರನ್ನು ಸೋಲಿಸುವ ಮೂಲಕ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಪ್ರಶಸ್ತಿ ಗೆದ್ದಿದ್ದರು.
13 ಪಂದ್ಯಗಳ ಅಂತ್ಯಕ್ಕೆ ಇಬ್ಬರೂ ಆಟಗಾರರು ತಲಾ 6.5 ಅಂಕ ಹೊಂದಿದ್ದರು. ಫಲಿತಾಂಶ ನಿರ್ಣಯಕ್ಕಾಗಿ 14ನೇ ಸುತ್ತಿನಲ್ಲಿ ಗೆಲುವು ಸಾಧಿಸಬೇಕಿತ್ತು. ಡಿಂಗ್ ಲಿರೇನ್ 14ನೇ ಸುತ್ತಿನ ಪಂದ್ಯದ ಕೊನೆಯಲ್ಲಿ ಮಾಡಿದ ಭಾರೀ ಪ್ರಮಾದದಿಂದ ಡಿ.ಗುಕೇಶ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಚೆನ್ನೈ ಮೂಲದ ಗುಕೇಶ್ ದೊಮ್ಮರಾಜು ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. 18 ವರ್ಷದ ಚೆನ್ನೈ ಮೂಲದ ಗ್ರ್ಯಾಂಡ್ ಮಾಸ್ಟರ್ ಈ ಗೆಲುವಿನ ಮೂಲಕ ಫಿಡೆ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಗೆದ್ದ ಅತ್ಯಂತ ಮೂರನೇ ಕಿರಿಯ ಆಟಗಾರ ಎನಿಸಿದ್ದಾರೆ.
ಇತಿಹಾಸದಲ್ಲಿ ಇಲ್ಲಿಯವರೆಗೂ ಸಾಕಷ್ಟು ದಿಗ್ಗಜ ಚೆಸ್ ಪ್ಲೇಯರ್‌ಗಳನ್ನು ಕಂಡಿದೆ. ಕಾರ್ಲ್‌ಸೆನ್, ಕ್ರ್ಯಾಮ್ನಿಕ್, ಕ್ಯಾಸ್ಪರೋವ್, ವಿಶ್ವನಾಥನ್ ಆನಂದ್. ಆದರೆ, ತಮ್ಮ 18ನೇ ವಯಸ್ಸಿನಲ್ಲೇ ಫಿಡೆ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಸಾಧಿಸಿದ್ದು ಡಿ. ಗುಕೇಶ್ ಮಾತ್ರ. ಇದು ಭಾರತಕ್ಕೆ ಹೆಮ್ಮೆಯ ವಿಚಾರ.
Leave a Comment