ಪ್ರತಿಭಟನೆಗಾಗಿ ಗುಜರಾತ್ಗೆ ಹೋಗಿದ್ದಾಗ ನಡೆಯಿತು ದುರಂತ; ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಸ್ಹೆಚ್ ಲಿಂಗೇಗೌಡ, ಕುಂಜಿ ಮೂಸಾ ಸಾವು
ನ್ಯೂಸ್ ಆ್ಯರೋ: ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಸ್.ಹೆಚ್ ಲಿಂಗೇಗೌಡ ಗುಜರಾತಿನ ಭರೂಚ್ ನಗರದಲ್ಲಿ ನಡೆದ ಲಾರಿ ಅಪಘಾತದಿಂದ ಜೀವ ಬಿಟ್ಟಿದ್ದಾರೆ.
ಕೆಆರ್ಎಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಸ್.ಹೆಚ್ ಲಿಂಗೇಗೌಡ ಜೊತೆ ಮಂಗಳೂರು ಮೂಲದ ಕುಂಜಿ ಮೂಸಾ ಶರೀಫ್ ಎನ್ನುವರು ಅಪಘಾತದಿಂದ ಪ್ರಾಣ ಬಿಟ್ಟಿದ್ದಾರೆ. ಅತ್ಯಾಚಾರ ಆರೋಪದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ಮಾಡಬೇಕು. ತಪ್ಪಿತಸ್ಥರಿಗೆ ಉಗ್ರಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ಮಂಗಳೂರಿನಿಂದ ದೆಹಲಿಗೆ 5 ಜನರ ತಂಡ ಪಾದಯಾತ್ರೆ ಮಾಡುತ್ತಿದ್ದರು. ಡಿ.11ಕ್ಕೆ 55ನೇ ದಿನದ ಪಾದಯಾತ್ರೆ ಗುಜರಾತಿನ ಭರೂಚ್ ನಗರ ತಲುಪಿತ್ತು.
ಭರೂಚ್ ನಗರದ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಇವರ ಮೇಲೆ ಲಾರಿಯೊಂದು ಹರಿದ ಪರಿಣಾಮ ಎಸ್.ಹೆಚ್.ಲಿಂಗೇಗೌಡ ಮತ್ತು ಮಂಗಳೂರಿನ ಕುಂಜಿ ಮೂಸಾ ಕಣ್ಮುಚ್ಚಿದ್ದಾರೆ. ಅಲ್ಲಿಂದ ದೇಹಗಳನ್ನು ರಾಜ್ಯಕ್ಕೆ ತರಲು ಗುಜರಾತ್ ಸರ್ಕಾರದ ಅಧಿಕಾರಿಗಳ ಜೊತೆ ಮಾತುಕತೆ ನಡೆಯುತ್ತಿದೆ.
ಜಿಲ್ಲೆಯ ಮದ್ದೂರು ತಾಲೂಕಿನ ಸೋಂಪುರ ಗ್ರಾಮದವರಾದ ಲಿಂಗೇಗೌಡ ಪದವೀಧರರು. ಅಬಕಾರಿ ಇಲಾಖೆಯಲ್ಲಿ ಸರ್ಕಾರಿ ಅಧಿಕಾರಿಯಾಗಿದ್ದ ಅವರು, ಭ್ರಷ್ಟ ವ್ಯವಸ್ಥೆಯಿಂದ ಬೇಸತ್ತು ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ 2018ರಲ್ಲಿ ಸ್ವರಾಜ್ ಇಂಡಿಯಾದಿಂದ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಹೀಗೆ ಮಂಡ್ಯದಿಂದ 2019ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ತಮ್ಮ ಪಕ್ಷದ ಮೂಲಕವೇ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದ್ದರು.
Leave a Comment