ಸಾಹಸಸಿಂಹ ವಿಷ್ಣುವರ್ಧನ್ ಹಳೆ ಮನೆಗೆ ಹೊಸ ರೂಪ – ನಾಗರಹಾವು ಚಿತ್ರಕ್ಕೂ ಮನೆಗೂ ಇದೇ ಮರೆಯಲಾಗದ ನಂಟು : ಹೊಸ ಮನೆಯ ಹೆಸರೇನು ಗೊತ್ತಾ…!?

ನ್ಯೂಸ್ ಆ್ಯರೋ : ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರು ಬದುಕಿ ಬಾಳಿದ್ದ ಮನೆಗೆ ಹೊಸ ರೂಪ ಕೊಟ್ಟು ಅವರು ಕನಸಿನಂತೆ ಇದೀಗ ಮರು ನಿರ್ಮಾಣ ಮಾಡಲಾಗಿದೆ. ಈಚೆಗೆ ಅದರ ಗೃಹಪ್ರವೇಶವೂ ಅದ್ಧೂರಿಯಾಗಿ ನಡೆದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕನ್ನಡ ಚಿತ್ರರಂಗದ ಖ್ಯಾತ ನಟ–ನಟಿಯರು ಆಗಮಿಸಿದ್ದರು. ಮನೆಯ ಹೊಸ ರೂಪಕ್ಕೆ ಎಲ್ಲರೂ ಫಿದಾ ಆಗಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜಯನಗರದ ನಾಲ್ಕನೇ ಟಿ ಬ್ಲಾಕ್‌ನಲ್ಲಿ 1976ರಲ್ಲಿ ವಿಷ್ಣು ಅವರು ಈ ಜಾಗವನ್ನು ಖರೀದಿಸಿದ್ದರು. 70ರ ದಶಕದ ಕೊನೆಯಲ್ಲೇ ಮನೆ ಕಟ್ಟಿಸಿದ್ದರು. ಅಲ್ಲಿ ಹಲವು ವರ್ಷಗಳ ಕಾಲ ವಾಸವಾಗಿದ್ದರು. ಅವರಿಗೆ ಆ ಮನೆಗೆ ಹೊಸ ವಿನ್ಯಾಸ ಕೊಡಬೇಕೆಂಬ ಆಸೆ ಇತ್ತಂತೆ. ಅವರು ನಿಧನರಾಗಿ 13ವರ್ಷಗಳ ಬಳಿಕ ಸಾಹಸ ಸಿಂಹನ ಆಸೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ವಿಷ್ಣುವರ್ಧನ್ ಕನಸಿನಂತೆ ಹೊಸ ಮನೆಯನ್ನು ಮರು ನಿರ್ಮಾಣ ಮಾಡಲಾಗಿದೆ.

‘ವಲ್ಮೀಕ’ ಹೆಸರಿನ ಹಿಂದಿದೆ ನಾಗರಹಾವು ಚಿತ್ರದ ಜತೆಗಿನ ನಂಟು

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಕನಸಿನ ಮನೆಗೆ ವಲ್ಮೀಕ ಎಂದು ಹೆಸರಿಡಲಾಗಿದೆ. ವಲ್ಮೀಕ ಎಂದರೆ ಸಂಸ್ಕೃತದಲ್ಲಿ ಹುತ್ತ ಎಂದು ಅರ್ಥ. ನಾಗರಹಾವು ಚಿತ್ರದ ನಂತರ ಇದೇ ಜಾಗದಲ್ಲಿ ವಿಷ್ಣುವರ್ಧನ್ ಅವರು ಮನೆ ಕಟ್ಟಿದ್ದರು. ಆಗಲೂ ಇದೇ ಹೆಸರನ್ನು ಅವರು ಇಟ್ಟಿದ್ದರು. ಹಾಗಾಗಿ ಇದೀಗ ಹೊಸ ಮನೆಗೂ ವಲ್ಮೀಕ ಎಂದು ಅದೇ ಹೆಸರನ್ನು ಇಡಲಾಗಿದೆ.

ಗೇಟಿನಲ್ಲಿದೆ ಕಂಚಿನ ಸಿಂಹದ ಮುಖವಾಡ…!!

ಮನೆಯೊಳಗೆ ಪ್ರವೇಶಿಸುವಾಗ ಗೇಟಿನಲ್ಲಿ ಕಂಚಿನಿಂದ ಮಾಡಿದ ಸಿಂಹದ ಮುಖ ಇದೆ. ಅದು ಇಡೀ ಮನೆಗೆ ಇನ್ನಷ್ಟು ಮೆರುಗು ತುಂಬಿಸಿದೆ. ಮನೆಯ ಮುಂಭಾಗದಲ್ಲಿ ಕೃಷ್ಣನ ಮೂರ್ತಿ ಇದೆ. ಅದಕ್ಕೆ ಬೆಳ್ಳಿಯ ಮುಖವಾಡ ತೊಡಿಸಿ ಅಲಂಕಾರ ಮಾಡಲಾಗಿದೆ.

ಗೃಹಪ್ರವೇಶದ ನಂತರ ಪ್ರತಿಕ್ರಿಯಿಸಿದ ವಿಷ್ಣವರ್ಧನ್ ಅಳಿಯ ನಟ ಅನಿರುದ್ಧ್ ಅವರು, ವಿಷ್ಣುವರ್ಧನ್ ಅವರಿಗೆ ಹೊಸ ಮನೆ ಕಟ್ಟಬೇಕೆಂಬ ಆಸೆಯಿತ್ತು. ಆದರೆ ಅವರ ಕನಸು ಈಡೇರಲಿಲ್ಲ. ಇದೀಗ ಅವರ ಕನಸು 14 ವರ್ಷಗಳ ನಂತರ ನೆರವೇರಿದೆ. ಅವರು 2008ರಲ್ಲಿ ಹೊಸ ಮನೆ ಕಟ್ಟಬೇಕು ಅಂತ ಹೇಳುತ್ತಿದ್ದರು. ಅದು ಇವತ್ತು ನೆರವೇರಿದೆ. ಎಲ್ಲರೂ ಈ ಮನೆಯನ್ನು ಇಷ್ಟ ಪಡುತ್ತಿದ್ದಾರೆ. ಬಂದ ಗಣ್ಯರು ಹಾಗೂ ಅಭಿಮಾನಿಗಳು ಇಷ್ಟ ಪಡುತ್ತಿದ್ದಾರೆ. ಯಾಕಂದ್ರೆ ಇದನ್ನು ಅಪ್ಪನವರೇ ಮಾಡಿಸಿರುವುದು ಎಂದು ಪ್ರತಿಕ್ರಿಯಿಸಿದ್ದಾರೆ.

ಅಪ್ಪಾಜಿಯ ನೆಚ್ಚಿನ ತೋಟವನ್ನು ಹಾಗೆಯೇ ಇಡಲಾಗಿದೆ..

‘ಅಪ್ಪಾಜಿಗೆ ಹಸಿರು ಕಂಡರೆ ತುಂಬಾ ಇಷ್ಟ. ಬೆಳಗ್ಗೆ ಎದ್ದು ಗಿಡ, ಹೂವುಗಳನ್ನು ನೋಡಬೇಕೆಂದು ಇಷ್ಟ ಪಡುತ್ತಿದ್ದರು. ಹೆಚ್ಚಾಗಿ ಅವರು ತೋಟದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದರು. ಹಾಗಾಗಿ ಆ ತೋಟವನ್ನು ಹಾಗೆಯೇ ಇಡಲಾಗಿದೆ. ಗಿಡ-ಮರಗಳು ಎಲ್ಲವೂ ಹಾಗೇ ಇದೆ. ಹಾಲ್ ಹಾಗೂ ಮಲಗುವ ಕೋಣೆ ದೊಡ್ಡದಾಗಿರಬೇಕು ಎಂದು ಆಸೆ ಪಟ್ಟಿದ್ದರು. ಅವರು ಹೋಮ್ ಥಿಯೇಟರ್ ಅನ್ನೂ ತುಂಬಾನೇ ಆಸೆ ಪಡುತ್ತಿದ್ದರು. ಅವರು ಹಾಡಲು ಇಷ್ಟ ಪಡುತ್ತಿದ್ದರು. ಹಾಗಾಗಿ ಅದನ್ನೂ ಮಾಡಿದ್ದೇವೆ’ ಎಂದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *